ಇಂದಿನ ಜೀವನಶೈಲಿಯಲ್ಲಿ ವಿಟಮಿನ್ ಡಿ (Vitamin D) ಕೊರತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು, ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವುದು ಮತ್ತು ಅಸಮತೋಲನ ಆಹಾರ ಪದ್ಧತಿ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ತಜ್ಞರ ಪ್ರಕಾರ, ಸೂರ್ಯನ ಬೆಳಕು ವಿಟಮಿನ್ ಡಿಗೆ ಪ್ರಮುಖ ಮೂಲವಾದರೂ, ಎಲ್ಲರಿಗೂ ಇದು ಸಾಕಾಗುವುದಿಲ್ಲ. ಕೆಲವರು ನಿಯಮಿತವಾಗಿ ಸೂರ್ಯನ ಬೆಳಕಿನಲ್ಲಿ ಇದ್ದರೂ ಕೂಡ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಇದಕ್ಕೆ ಚರ್ಮದ ಬಣ್ಣ, ವಯಸ್ಸು, ದೇಹದ ಸ್ಥಿತಿ ಮತ್ತು ವಿಟಮಿನ್ ಶೋಷಣೆಯ ಸಾಮರ್ಥ್ಯ ಕಾರಣವಾಗಬಹುದು. ಸರಿಯಾದ ಸಮಯದಲ್ಲಿ ಸೂರ್ಯನ ಬೆಳಕನ್ನು ಪಡೆಯದಿದ್ದರೆ ಅದರ ಪ್ರಯೋಜನ ಕಡಿಮೆಯಾಗುತ್ತದೆ. ಹಾಗಾದರೆ ವಿಟಮಿನ್ ಡಿ ಕೊರತೆ ಉಂಟಾಗುವುದಕ್ಕೆ ಕಾರಣವೇನು, ಅತಿಯಾಗಿ ಸನ್ಸ್ಕ್ರೀನ್ (Sunscreen) ಬಳಕೆ ಮಾಡುವುದರಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆಯೇ, ವಿಟಮಿನ್ ಡಿ ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಿಟಮಿನ್ ಡಿ ಕೊರತೆ ಉಂಟಾಗುವುದಕ್ಕೆ ಕಾರಣ:
ಅತಿಯಾಗಿ ಸನ್ಸ್ಕ್ರೀನ್ ಬಳಕೆ, ಮಾಲಿನ್ಯ ಮತ್ತು ಜೀವನಶೈಲಿಯ ಬದಲಾವಣೆಗಳು ಸೂರ್ಯನ ಕಿರಣಗಳಿಂದ ದೊರೆಯುವುದನ್ನು ಕಡಿಮೆ ಮಾಡುತ್ತವೆ. ಜೊತೆಗೆ, ದೇಹದಲ್ಲಿ ವಿಟಮಿನ್ ಡಿ ಸರಿಯಾಗಿ ಸಿಗದಿದ್ದರೂ ಕೊರತೆ ಉಂಟಾಗಬಹುದು. ಆದ್ದರಿಂದ ಕೇವಲ ಸೂರ್ಯನ ಬೆಳಕಿನ ಮೇಲೆ ಅವಲಂಬಿಸಿಕೊಳ್ಳುವುದು ಸಾಕಾಗುವುದಿಲ್ಲ.
ಇದನ್ನೂ ಓದಿ: ಡಾರ್ಕ್ ಸ್ಕಿನ್ ಮತ್ತು ಒಬೆಸಿಟಿ ಇರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದಕ್ಕೆ ಕಾರಣ ಏನ್ ಗೊತ್ತಾ?
ವಿಟಮಿನ್ ಡಿ ಹೆಚ್ಚಿಸಲು ಏನು ಮಾಡಬೇಕು?
ಸಮತೋಲನ ಆಹಾರ ಬಹಳ ಮುಖ್ಯ. ಹಾಲು, ಮೊಸರು, ಮೊಟ್ಟೆ, ಮೀನು ಮತ್ತು ಫೋರ್ಟಿಫೈಡ್ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು. ನಿಯಮಿತ ವ್ಯಾಯಾಮ ಮತ್ತು ಸಕ್ರಿಯ ಜೀವನಶೈಲಿಯೂ ಸಹ ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿ. ಈ ವಿಟಮಿನ್ ಡಿ ಕೊರತೆಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಸರಿಯಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಸಲಹೆಯೊಂದಿಗೆ ಮಾತ್ರ ಈ ಕೊರತೆಯನ್ನು ನಿಯಂತ್ರಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ