Headlines

ಹಂಟಾವೈರಸ್ ಎಂದರೇನು? ಇದು ಕೊರೊನಾದ ರೀತಿ ಹರಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? – Kannada News | Can Hantavirus Cause a Pandemic? Doctors Weigh In on Outbreak Risk

ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಡಚ್ ಎಕ್ಸ್‌ಪಿಡಿಷನ್ ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸೋಂಕು ಪತ್ತೆಯಾಗಿರುವುದು ಜಗತ್ತಿನ ಆರೋಗ್ಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಡಗಿನಲ್ಲಿ ಒಟ್ಟು 149 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಇವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿಯೂ ಸೇರಿದ್ದಾರೆ. ಈಗಾಗಲೇ ಮೂವರು ಸಾವನ್ನಪ್ಪಿದ್ದು, ಹಲವರು ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಹಾಗಾದರೆ ಹಂಟಾವೈರಸ್ (Hantavirus) ಎಂದರೇನು, ಇದು ಕೋವಿಡ್ (COVID-19) ರೀತಿಯಲ್ಲಿಯೇ ಹರಡುತ್ತದೆಯೇ, ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಂಟಾವೈರಸ್ ಎಂದರೇನು?

ಹಂಟಾವೈರಸ್ ಅಥವಾ ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್‌ ಹೊಸ ವೈರಸ್ ಅಲ್ಲ. ಸಾಮಾನ್ಯವಾಗಿ ಇಲಿ, ಹೆಗ್ಗಣ ಮತ್ತು ಪೋಲಿಕೋಲಗಳಂತಹ ಕೃಂತಕಗಳ (rodents) ಮೂಲಕ ಮನುಷ್ಯರಿಗೆ ಹರಡುವ ಗಂಭೀರವಾದ ಸೋಂಕಾಗಿದೆ. ಇದು ಸೋಂಕಿತ ಇಲಿಗಳ ಮೂತ್ರ, ಲಾಲಾರಸ, ಉಗುಳು ಅಥವಾ ಮಲದ ಮೂಲಕ ಮಣ್ಣಿನೊಂದಿಗೆ ಬೆರೆತು, ಒಣಗಿದ ನಂತರ ಗಾಳಿಯಲ್ಲಿ ಹರಡಿದಾಗ ಅದನ್ನು ಉಸಿರಾಡುವುದರಿಂದ ಸೋಂಕು ತಗಲುತ್ತದೆ. ಜೊತೆಗೆ ಸೋಂಕಿತ ಇಲಿ ಕಚ್ಚುವುದರಿಂದ ಅಥವಾ ಅವುಗಳ ಮಲ- ಮೂತ್ರ ನೇರವಾಗಿ ಗಾಯದ ಮೇಲೆ ಬಿದ್ದಾಗ ಸೋಂಕು ನೇರವಾಗಿ ಹರಡಬಹುದು. ಈ ಪ್ರಕರಣದಲ್ಲಿ ಪತ್ತೆಯಾಗಿರುವುದು “ಆಂಡೀಸ್ ಸ್ಟ್ರೇನ್” ಎನ್ನುವ ವಿಶೇಷ ಹಂಟಾವೈರಸ್ ರೂಪವಾಗಿದೆ. ಇದು ಮುಖ್ಯವಾಗಿ ಅರ್ಜೆಂಟಿನಾ ಮತ್ತು ಚಿಲಿ ಭಾಗಗಳಲ್ಲಿ ಕಂಡುಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ಸೋಂಕಿನ ಮೂಲ ದಕ್ಷಿಣ ಅರ್ಜೆಂಟಿನಾದ ಪಟಾಗೋನಿಯಾ ಪ್ರದೇಶವಾಗಿರಬಹುದು ಎಂಬ ಅನುಮಾನ ಇದೆ. ಹಡಗಿಗೆ ಏರುವ ಮೊದಲು ಕೆಲವು ಪ್ರಯಾಣಿಕರು ಪಕ್ಷಿ ವೀಕ್ಷಣಾ ಪ್ರವಾಸದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಸೋಂಕಿತ ಇಲಿ ಸಂಪರ್ಕದಿಂದ ವೈರಸ್ ಹರಡಿರಬಹುದು ಎಂದು ಶಂಕಿಸಲಾಗಿದೆ.

ಇದು ಕೊರೋನಾ ರೀತಿಯಲ್ಲಿ ಹರಡುತ್ತದೆಯೇ?

ತಜ್ಞರ ಪ್ರಕಾರ, ಹಂಟಾವೈರಸ್ ಸಾಮಾನ್ಯ ಕೊರೋನಾ ವೈರಸ್‌ನಂತೆ ಸುಲಭವಾಗಿ ಗಾಳಿಯ ಮೂಲಕ ಹರಡುವುದಿಲ್ಲ. ಆದರೆ “ಆಂಡೀಸ್” ಪ್ರಭೇದದಲ್ಲಿ ಅತ್ಯಂತ ಹತ್ತಿರದ ಸಂಪರ್ಕದಲ್ಲಿರುವವರ ನಡುವೆ ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು, ಜೊತೆಯಾಗಿ ಇರುವವರು ಅಥವಾ ವೈದ್ಯಕೀಯ ಆರೈಕೆ ನೀಡುವವರಲ್ಲಿ ಸೋಂಕು ಹರಡಿದ ಉದಾಹರಣೆಗಳು ಹಿಂದೆಯೂ ದಾಖಲಾಗಿವೆ.

ಯಾವ ಲಕ್ಷಣಗಳು ಕಾಣಿಸುತ್ತವೆ?

ಜ್ವರ, ದೇಹದ ನೋವು, ದೌರ್ಬಲ್ಯ, ಉಸಿರಾಟದ ತೊಂದರೆ, ಒಣ ಕೆಮ್ಮು ಮತ್ತು ಶ್ವಾಸಕೋಶ ಸಮಸ್ಯೆಗಳು ಮುಖ್ಯ ಲಕ್ಷಣಗಳಾಗಿವೆ. ಗಂಭೀರ ಸ್ಥಿತಿಯಲ್ಲಿ “ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್” ಉಂಟಾಗಿ ಜೀವಕ್ಕೆ ಅಪಾಯ ಉಂಟಾಗಬಹುದು.

ವೈದ್ಯರ ಸಲಹೆ;

ಡಾ. ಟೆಡ್ರೋಸ್ ಅಧಾನೊಮ್ ಅವರ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಇನ್ನಷ್ಟು ಈ ಪ್ರಕರಣಗಳು ಕಾಣಿಸಬಹುದು. ಆದರೆ ಆತಂಕಕ್ಕಿಂತ ಎಚ್ಚರಿಕೆ ಮುಖ್ಯ. ಹಡಗಿನಲ್ಲಿ ಈಗ ಕ್ವಾರಂಟೈನ್, ಸ್ಕ್ರೀನಿಂಗ್ ಮತ್ತು ಆರೋಗ್ಯ ಮೇಲ್ವಿಚಾರಣೆ ಮುಂದುವರಿದಿದೆ ಎಂದಿದ್ದಾರೆ. ಆರೋಗ್ಯ ತಜ್ಞರ ಸಲಹೆ ಏನೆಂದರೆ, ಇಲಿ ಸಂಪರ್ಕ ತಪ್ಪಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಜ್ವರ- ಉಸಿರಾಟ ಸಮಸ್ಯೆಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *