
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 9, ಶನಿರವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಸಪ್ತಮಿ ತಿಥಿ, ಶ್ರವಣ ನಕ್ಷತ್ರದಲ್ಲಿ ಚಂದ್ರನ ಸಂಚಾರದೊಂದಿಗೆ ಈ ದಿನವು ಹಲವು ವಿಶೇಷತೆಗಳನ್ನು ಹೊಂದಿದೆ. ರಾಹುಕಾಲವು ಬೆಳಗ್ಗೆ 9:05 ರಿಂದ 10:40ರ ವರೆಗೆ ಇರಲಿದ್ದು, ಸರ್ವ ಸಿದ್ಧಿ ಹಾಗೂ ಸಂಕಲ್ಪ ಕಾಲವು ಮಧ್ಯಾಹ್ನ 1:01 ರಿಂದ 3:26ರ ವರೆಗೆ ಇರುತ್ತದೆ.
ಇದು ಸಾಕ್ಷಾತ್ ವೆಂಕಟೇಶ್ವರನ ಲಹರಿಗಳು ಮತ್ತು ಶನಿ ಭಗವಾನ್ರ ಪ್ರಭಾವವಿರುವ ದಿನ. ಹನುಮನ ಕೃಪೆಗೆ ಪಾತ್ರರಾಗಲು ಸೂಕ್ತವಾದ ದಿನವೂ ಹೌದು. ಇಂದು ಬ್ಯಾಂಕ್ ಹಾಲಿಡೇ (ಎರಡನೇ ಶನಿವಾರ) ಆಗಿದ್ದು, ಶ್ರೀರಾಮ ಪಟ್ಟಾಭಿಷೇಕದ ದಿನವೂ ಆಗಿದೆ ಎಂದು ಗುರೂಜಿ ತಿಳಿಸಿದ್ದಾರೆ.