Headlines

ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ – Kannada News | Work From Home Online Classes No Gold Save Fuel PM Modis Appeal amid West Asia War

ನವದೆಹಲಿ, ಮೇ 11: ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶ ಯಾವ ರೀತಿಯಲ್ಲಿ ಒಗ್ಗಟ್ಟಾಗಿ ನಿಂತು ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರ ನೀಡಿದರೋ ಅದೇ ರೀತಿ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವನ್ನು ಎದುರಿಸಲು ಮತ್ತೊಮ್ಮೆ ಭಾರತದ ಜೊತೆ ನಿಲ್ಲಬೇಕೆಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಮನವಿ ಮಾಡಿದ್ದಾರೆ. ಇರಾನ್-ಇಸ್ರೇಲ್ ಹಾಗೂ ಅಮೆರಿಕದ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಹೀಗಾಗಿ, ಶಾಲಾ ಕಾಲೇಜುಗಳಲ್ಲಿ ಆನ್​ಲೈನ್ ತರಗತಿಗಳನ್ನು ನಡೆಸಿ, ಆಫೀಸುಗಳಲ್ಲಿ ವರ್ಕ್ ಫ್ರಂ ಹೋಂಗೆ ಅವಕಾಶ ನೀಡಿ, ವರ್ಚುವಲ್ ಮೀಟಿಂಗ್ ನಡೆಸಿ, ಸ್ವಂತ ವಾಹನಗಳ ಬದಲು ಸರ್ಕಾರಿ ಬಸ್, ಮೆಟ್ರೋಗಳನ್ನು ಬಳಸಿ, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಖರೀದಿಸಿ, ಸ್ವಲ್ಪ ದಿನದ ಮಟ್ಟಿಗೆ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ದೇಶಾದ್ಯಂತ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಚಿನ್ನದ ಖರೀದಿಯನ್ನು ತಪ್ಪಿಸಿ, ವಿದೇಶಿ ಪ್ರಯಾಣವನ್ನು ಮುಂದೂಡಿ ಮತ್ತು ಆರ್ಥಿಕ ಸಮಸ್ಯೆಗಳ ನಡುವೆ ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಳ್ಳುವಂತಹ ವೆಚ್ಚ ಕಡಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ನಾಗರಿಕರಿಗೆ ಸಲಹೆ ನೀಡಿದ್ದರು. ಅದಾಗಿ ಒಂದು ದಿನದೊಳಗೆ ಇದೀಗ ಮತ್ತೆ ಅದೇ ಮನವಿಯನ್ನು ಮೋದಿ ಪುನರುಚ್ಛರಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ; ಪ್ರಧಾನಿ ಮೋದಿ ಮನವಿಯ ಬಳಿಕ ಸರ್ಕಾರ ಸ್ಪಷ್ಟನೆ

ಶಾಲೆಗಳು ಮತ್ತು ಕಾಲೇಜುಗಳು ಸದ್ಯಕ್ಕೆ ಕೋವಿಡ್-19 ಶೈಲಿಯ ಆನ್‌ಲೈನ್ ಕಲಿಕಾ ಮಾದರಿಯನ್ನು ಅನುಸರಿಸಬೇಕೆಂದು ಮೋದಿ ಸೂಚಿಸಿದ್ದಾರೆ. ಇರಾನ್-ಅಮೆರಿಕ ಯುದ್ಧದ ಆರ್ಥಿಕ ಪರಿಣಾಮ ಮತ್ತು ಏರುತ್ತಿರುವ ಕಚ್ಚಾ ತೈಲದ ಬೆಲೆಗಳ ಬಿಕ್ಕಟ್ಟನ್ನು ದೇಶ ಎದುರಿಸುತ್ತಿರುವಾಗ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *