ನವದೆಹಲಿ, ಮೇ 13: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಇಂಧನ ಸಂರಕ್ಷಣೆ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಂತೆ (Austerity measures) ನೀಡಿದ ಕರೆಯ ಬೆನ್ನಲ್ಲೇ, ದೇಶದ ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ನಾಯಕರು ಮಾದರಿ ಕ್ರಮಗಳನ್ನು ಘೋಷಿಸಿದ್ದಾರೆ. ಅದರಲ್ಲೂ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ಸಿಎಂ ಮತ್ತಿತರ ನಾಯಕರು ಮೋದಿ ಅವರ ಮಾತಿಗೆ ಬೆಲೆ ನೀಡಿ, ಇಂಧನ ಬಳಕೆ ತಗ್ಗಿಸಲು ಕ್ರಮ ತೆಗೆದುಕೊಂಡಿದ್ದಾರೆ. ಸಲಹೆ ಪಾಲನೆಯನ್ನು ತಮ್ಮಿಂದಲೇ ಶುರು ಮಾಡಿದ್ದಾರೆ. ವಿವಿಧ ರಾಜ್ಯಗಳ ನಾಯಕರು ಇಂಧನ ಉಳಿತಾಯಕ್ಕೆ ತೆಗೆದುಕೊಂಡಿರುವ ಕ್ರಮಗಳ ವಿವರ ಈ ಕೆಳಕಾಣಿಸಿದಂತಿದೆ:
ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಾಗೂ ಸಚಿವರ ವಾಹನಗಳ ಸಂಖ್ಯೆಯಲ್ಲಿ ತಕ್ಷಣವೇ 50% ಕಡಿತ ಮಾಡುವಂತೆ ಆದೇಶಿಸಿದ್ದಾರೆ. ಅಲ್ಲದೆ, ಸಚಿವರು ಮತ್ತು ಶಾಸಕರು ವಾರಕ್ಕೊಮ್ಮೆ ಕಡ್ಡಾಯವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಉತ್ತೇಜನ ಕೊಡಲು, ಮತ್ತು ಹೆಚ್ಚು ಸಿಬ್ಬಂದಿ ಇರುವ ಸಂಸ್ಥೆಗಳಲ್ಲಿ ವಾರಕ್ಕೆ ಎರಡು ದಿನ ವರ್ಕ್ ಫ್ರಂ ಮಾಡಲು ಶಿಫಾರಸು ಮಾಡುವಂತೆ ಸಿಎಂ ತಿಳಿಸಿದ್ದಾರೆ.
मुख्यमंत्री जी ने प्रदेश में ‘वर्क फ्रॉम होम’ (WFH) की संस्कृति को भी प्राथमिकता देने की अपील की। उन्होंने कहा कि जिन संस्थानों में बड़ी संख्या में कार्मिक कार्यरत हैं, उन्हें सप्ताह में दो दिन WFH की अनुशंसा के लिए राज्य स्तर पर एडवाइजरी जारी की जाए। राज्य सचिवालय/निदेशालय की 50…
— CM Office, GoUP (@CMOfficeUP) May 12, 2026
ಮಧ್ಯಪ್ರದೇಶ: ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದಾಗಿ ಘೋಷಿಸಿದ್ದು, ಇತರ ಸಚಿವರಿಗೂ ಇದೇ ಹಾದಿ ತುಳಿಯಲು ಮನವಿ ಮಾಡಿದ್ದಾರೆ. ಸಾಮಾನ್ಯ ಜನರು ಸಾರ್ವಜನಿಕ ಸಾರಿಗೆ ಬಳಸುವಂತೆಯೂ ಕೇಳಿಕೊಂಡಿದ್ದಾರೆ.
आदरणीय प्रधानमंत्री श्री @narendramodi जी के आह्वान पर मध्यप्रदेश राष्ट्रहित में पेट्रोल-डीजल की खपत कम करने के लिए संकल्पित है।
आगामी आदेश तक मेरे कारकेड में सुरक्षा की दृष्टि से न्यूनतम वाहन होंगे और भ्रमण के दौरान कोई वाहन रैली नहीं होगी। सभी मंत्रीगण भी यात्रा के समय न्यूनतम…
— Dr Mohan Yadav (@DrMohanYadav51) May 12, 2026
ದೆಹಲಿ: ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅಧಿಕೃತ ಕೆಲಸಗಳಿಗೆ ಕನಿಷ್ಠ ವಾಹನ ಬಳಸುವುದಾಗಿ ತಿಳಿಸಿದ್ದಾರೆ. ತಮ್ಮನ್ನೂ ಒಳಗೊಂಡಂತೆ ದೆಹಲಿಯ ಎಲ್ಲಾ ಬಿಜೆಪಿ ಶಾಸಕರು ಮತ್ತು ಅಧಿಕಾರಿಗಳು ಕಾರ್-ಪೂಲಿಂಗ್ (ವಾಹನ ಹಂಚಿಕೆ) ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಧಾನಿಗಳ ಸಲಹೆ ಪಾಲಿಸುವಂತೆ ಸಾರ್ವಜನಿಕರಿಗೂ ಅವರು ಮನವಿ ಮಾಡಿದ್ದಾರೆ.
माननीय प्रधानमंत्री श्री @narendramodi जी ने वर्तमान वैश्विक परिस्थितियों के मद्देनज़र देशवासियों से पेट्रोल-डीजल की बचत करने तथा ऊर्जा संरक्षण को जन आंदोलन बनाने का आह्वान किया है।
माननीय प्रधानमंत्री जी की इस महत्वपूर्ण अपील को आत्मसात करते हुए विभागीय कामकाज हेतु वाहनों की…
— Rekha Gupta (@gupta_rekha) May 12, 2026
ರಾಜಸ್ಥಾನ: ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಭದ್ರತೆಯ ಹೆಸರಿನಲ್ಲಿ ಬಳಸುವ ಅನಗತ್ಯ ವಾಹನಗಳನ್ನು ನಿಲ್ಲಿಸಲು ಸೂಚಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗಲಿದೆ.
Rajasthan Chief Minister Bhajan Lal Sharma has directed that convoy vehicle use be minimised and unnecessary vehicles should not be used, especially for security purposes. He has also instructed all officials and public representatives, including the Chief Secretary, to adopt… pic.twitter.com/wEJMPb2xGb
— IANS (@ians_india) May 12, 2026
ಮಹಾರಾಷ್ಟ್ರ: ಇಲ್ಲಿ ಸರ್ಕಾರಿ ವಿಮಾನ ಮತ್ತು ಹೆಲಿಕಾಪ್ಟರ್ ಬಳಕೆಗೆ ಬ್ರೇಕ್ ಹಾಕಲಾಗಿದೆ. ಸಚಿವರು ತುರ್ತು ಕೆಲಸಗಳಿಗಾಗಿ ವಿಮಾನ ಬಳಸಬೇಕಿದ್ದರೆ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ಡಿಜಿಲಾಕರ್ ಬಳಕೆಯಲ್ಲಿ ಕರ್ನಾಟಕ ಟಾಪ್! ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಗೌರವ
ಬಿಹಾರ: ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಅವರು ತಮ್ಮ ವೈಯಕ್ತಿಕ ಬಳಕೆಯ ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿದ್ದು, ಅತ್ಯಗತ್ಯವಿದ್ದಾಗ ಮಾತ್ರ ಅಧಿಕೃತ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಗುಜರಾತ್: ಗುಜರಾತ್ ರಾಜ್ಯಪಾಲರು ಹೆಲಿಕಾಪ್ಟರ್ ಅಥವಾ ವಿಮಾನಗಳ ಬದಲಿಗೆ ರಾಜ್ಯದೊಳಗೆ ಪ್ರಯಾಣಿಸಲು ರೈಲು ಮತ್ತು ಎಸ್ಟಿ (ST) ಬಸ್ಗಳನ್ನು ಬಳಸಲು ನಿರ್ಧರಿಸಿದ್ದಾರೆ. ಇನ್ನು ರಾಜ್ಯದ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸುವ ಮೂಲಕ ವಿದೇಶಿ ಪ್ರಯಾಣದ ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ.
VIDEO | Responding to Prime Minister Narendra Modi’s call for ‘Economic Self-Reliance’, Gujarat Governor Acharya Devvrat has taken a significant step towards fuel conservation and sustainable living. The Governor announced that he will travel within Gujarat using trains, ST buses… pic.twitter.com/1SzNqngQtU
— Press Trust of India (@PTI_News) May 12, 2026
ಇದನ್ನೂ ಓದಿ: ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: ಯಾರದ್ದೆಲ್ಲ ಬೆಂಬಲ ಸಿಕ್ತು? ಇಲ್ಲಿದೆ ವಿವರ
ಸರ್ಕಾರದ ಈ ಕ್ರಮಗಳು ಕೇವಲ ಇಂಧನ ಉಳಿತಾಯ ಮಾತ್ರವಲ್ಲದೆ, ಸಾರ್ವಜನಿಕ ಹಣದ ದುಂದುವೆಚ್ಚವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಜನಪ್ರತಿನಿಧಿಗಳೇ ನೇರವಾಗಿ ಸಾರ್ವಜನಿಕ ಸಾರಿಗೆ ಬಳಕೆಗೆ ಮುಂದಾಗಿರುವುದು ಜನಸಾಮಾನ್ಯರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ