Headlines

ವಿಜಯ್ ಸಿಎಂ ಆದ ಬಳಿಕ ಗೆದ್ದ ತ್ರಿಷಾ; ‘ಕರುಪ್ಪು’ ಚಿತ್ರ ಹೊಗಳಿದ ಫ್ಯಾನ್ಸ್ – Kannada News | Karuppu Review: Suriya Roars Back! Fans Hail Action Drama a Blockbuster Hit

ನಟ ಸೂರ್ಯ, ತ್ರಿಷಾ ಕೃಷ್ಣನ್ ಅಭಿನಯದ ಮತ್ತು ಆರ್‌ಜೆ ಬಾಲಾಜಿ ನಿರ್ದೇಶನದ ಬಹುನಿರೀಕ್ಷಿತ ಆ್ಯಕ್ಷನ್-ಡ್ರಾಮಾ ‘ಕರುಪ್ಪು’ ಚಿತ್ರ ಕೊನೆಗೂ ತೆರೆಕಂಡಿದೆ. ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದಾಗಿ ಮೇ 14ಕ್ಕೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಇಂದು (ಮೇ 15, 2026) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಯಾವುದೇ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆದರೂ ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆಗಳನ್ನು ಹಂಚಿಕೊಳ್ಳಲಾಗುತ್ತದೆ. ‘ಕರುಪ್ಪು’ ಸಿನಿಮಾ ನೋಡಿದವರೂ ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ತಿಳಿಸುತ್ತಿದ್ದು, ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಕರುಪ್ಪು ಸಿನಿಮಾ ಮೂಲಕ ಸೂರ್ಯ ಅವರು ತಮ್ಮ ಹಳೆಯ ಖದರ್ ತೋರಿಸಿದ್ದಾರೆ’ ಎಂದು ವೀಕ್ಷಕರು ಹೇಳಿಕೊಂಡಿದ್ದಾರೆ. ‘ಸೂರ್ಯ ಕೇವಲ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿಲ್ಲ, ಬದಲಿಗೆ ತಮ್ಮ ಸಿಂಹಾಸನವನ್ನು ಮರಳಿ ಪಡೆದಿದ್ದಾರೆ’ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

‘ಕರುಪ್ಪು ಒಂದು ಅಪ್ಪಟ ಕಮರ್ಷಿಯಲ್ ಸಿನಿಮಾ. ಇಂಟರ್ವಲ್ ಮತ್ತು ಕ್ಲೈಮ್ಯಾಕ್ಸ್‌ಗೂ ಮುನ್ನ ಬರುವ ಸನ್ನಿವೇಶಗಳು ರೋಮಾಂಚನಕಾರಿಯಾಗಿವೆ. ಇದೊಂದು ಬ್ಲಾಕ್‌ಬಸ್ಟರ್ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ಸಿನಿಪ್ರೇಮಿಗಳು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸೂರ್ಯ ಅವರ ಸಿನಿಮಾಗಳಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಕಡಿಮೆ ಇತ್ತು ಎಂಬ ಕೊರಗನ್ನು ಆರ್‌ಜೆ ಬಾಲಾಜಿ ನೀಗಿಸಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಎಮೋಷನ್ ಮತ್ತು ಆ್ಯಕ್ಷನ್ ಸಮತೋಲನವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಹೀರೊ ಎಂಟ್ರಿ ಸೀನ್‌ಗಳು ಗೂಸ್‌ಬಂಪ್ಸ್ ನೀಡುತ್ತವೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ವಿಶೇಷ ದಿನದ ಸೀರೆಗೆ ‘ಪ್ರೀತಿ’ಯ ಕ್ಯಾಪ್ಶನ್ ಕೊಟ್ಟ ತ್ರಿಷಾ ಕೃಷ್ಣನ್

ಸಿನಿಮಾ ಬಿಡುಗಡೆಯ ಮೊದಲ ದಿನವೇ ನಟಿ ತ್ರಿಷಾ ಕೃಷ್ಣನ್, ನಿರ್ದೇಶಕ ಆರ್‌ಜೆ ಬಾಲಾಜಿ ಮತ್ತು ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜೊತೆ ‘ಫಸ್ಟ್ ಡೇ ಫಸ್ಟ್ ಶೋ’ ನೋಡಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯ ಅವರ ಸಹೋದರ, ನಟ ಕಾರ್ತಿ ಕೂಡ ಜೊತೆಗಿದ್ದು ತಂಡಕ್ಕೆ ಬೆಂಬಲ ನೀಡಿದರು. ಸೂರ್ಯ ಹಾಗೂ ತ್ರಿಷಾ ಅಭಿಮಾನಿಗಳಿಗೆ ‘ಕರುಪ್ಪು’ ಒಂದು ದೊಡ್ಡ ಉಡುಗೊರೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುವ ಲಕ್ಷಣಗಳು ಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *