ಪುಣೆ, ಮೇ.16: ದೇಶದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ 2026’ (NEET-UG) ಬಯಾಲಜಿ (ಜೀವಶಾಸ್ತ್ರ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮತ್ತೊಬ್ಬ ಪ್ರಮುಖ ಸೂತ್ರಧಾರಿಯನ್ನು ಬಂಧಿಸಿದೆ. ಮಹಾರಾಷ್ಟ್ರದ ಪುಣೆಯ ಹಿರಿಯ ಸಸ್ಯಶಾಸ್ತ್ರ (Botany) ಶಿಕ್ಷಕಿ ಮನೀಷಾ ಗುರುನಾಥ್ ಮಂಢಾರೆ ಎಂಬಾಕೆಯನ್ನು ದೆಹಲಿಯಲ್ಲಿ ತೀವ್ರ ವಿಚಾರಣೆಯ ನಂತರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಮನೀಷಾ ಮಂಢಾರೆ ಅವರನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್ ಪರೀಕ್ಷಾ ಪ್ರಕ್ರಿಯೆಯ ತಜ್ಞರನ್ನಾಗಿ (Expert) ನೇಮಿಸಿತ್ತು. ಈ ಕಾರಣದಿಂದಾಗಿ ಆಕೆಗೆ ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ಪ್ರಶ್ನೆ ಪತ್ರಿಕೆಗಳನ್ನು ನೋಡುವ ಸಂಪೂರ್ಣ ಅವಕಾಶವಿತ್ತು. ಇದರ ದುರುಪಯೋಗ ಪಡಿಸಿಕೊಂಡ ಆಕೆ, ಈ ಹಿಂದೆ (ಮೇ 14) ಬಂಧಿತಳಾಗಿದ್ದ ಮನೀಷಾ ವಾಗ್ಮಾರೆ ಮೂಲಕ ನೀಟ್ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದಾಳೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
CBI has identified another mastermind who was the source for leak of NEET-UG 2026 Examination Biology questions.
Another key accused, Manisha Gurunath Mandhare, a Senior Botany Teacher from Pune, Maharashtra has been arrested at Delhi after thorough interrogation by CBI. She… pic.twitter.com/bBPSKwpPFr
— ANI (@ANI) May 16, 2026
ಏಪ್ರಿಲ್ 2026 ರ ಅವಧಿಯಲ್ಲಿ ಮನೀಷಾ ಮಂಢಾರೆ ತನ್ನ ಪುಣೆಯ ನಿವಾಸದಲ್ಲಿ ಆಯ್ಕೆಯಾದ ಕೆಲವು ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸಿದ್ದಾಳೆ. ಈ ತರಗತಿಗಳಲ್ಲಿ ಆಕೆ ನೀಟ್ ಪರೀಕ್ಷೆಗೆ ಬರಲಿದ್ದ ಬಯಾಲಜಿ ಪ್ರಶ್ನೆಗಳನ್ನು ಮುಂಚಿತವಾಗಿಯೇ ಬಹಿರಂಗಪಡಿಸಿ, ವಿದ್ಯಾರ್ಥಿಗಳ ನೋಟ್‌ಬುಕ್ ಮತ್ತು ಪಠ್ಯಪುಸ್ತಕಗಳಲ್ಲಿ ಗುರುತು ಮಾಡಿಸಿದ್ದಾಳೆ. ಮೇ 3 ರಂದು ನಡೆದ ನಿಜವಾದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಈ ಪ್ರಶ್ನೆಗಳು ಸಂಪೂರ್ಣವಾಗಿ ತಾಳೆಯಾಗಿರುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ: ಗಾರ್ಡನ್ ಸಿಟಿ ಟು ಗಾರ್ಬೇಜ್ ಸಿಟಿ: ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಕಳೆದ 24 ಗಂಟೆಗಳಲ್ಲಿ ಸಿಬಿಐ ದೇಶದ 6 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಹಗರಣಕ್ಕೆ ಸಂಬಂಧಿಸಿದ ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈವರೆಗೆ ದೆಹಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹ್ಲಿಯಾನಗರದಿಂದ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಐವರನ್ನು ಈಗಾಗಲೇ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಟ್ರಾನ್ಸಿಟ್ ರಿಮಾಂಡ್ ಮೂಲಕ ಉಳಿದ ಆರೋಪಿಗಳನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ