Headlines

Vasthu Shastra: ಮನೆ ಸಮೀಪ ನುಗ್ಗೆ ಮರ ಯಾಕೆ ಇರಬಾರದು? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Why You Should Not Plant a Drumstick Tree Close to Your House: A Comprehensive Guide

ಶಾಸ್ತ್ರೀಯ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ , ನುಗ್ಗೆ ಮರವನ್ನು ಮನೆಯ ಹತ್ತಿರ, ವಿಶೇಷವಾಗಿ ಆಗ್ನೇಯ, ಈಶಾನ್ಯ, ವಾಯುವ್ಯ, ನೈರುತ್ಯ ದಿಕ್ಕುಗಳಲ್ಲಿ ಬೆಳೆಸುವುದು ಅಷ್ಟು ಶುಭಕರವಲ್ಲ, ಬದಲಿಗೆ ಅಶುಭ ಎಂದು ಶಾಸ್ತ್ರಗಳು ಹೇಳುತ್ತವೆ. ವಾಸ್ತು ಶಾಸ್ತ್ರದ ಪ್ರಕಾರವೂ ಇದು ಮನೆಯ ಅಂಗಳದಲ್ಲಿ ಅಥವಾ ಯಾವುದೇ ಪ್ರಮುಖ ದಿಕ್ಕುಗಳಲ್ಲಿ ಇರುವುದು ಅಷ್ಟೊಂದು ಉತ್ತಮವಲ್ಲ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ನಂಬಿಕೆಗಳ ಪ್ರಕಾರ, ನುಗ್ಗೆ ಮರವು ಕೆಲವು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಅಕಾಲಿಕ ಮರಣ ಹೊಂದಿದವರು, ರೋಗರುಜಿನಗಳಿಂದ ಮೃತರಾದವರ ಆತ್ಮಗಳು ಇದರ ಹತ್ತಿರ ವಾಸಿಸುತ್ತವೆ ಎಂಬ ನಂಬಿಕೆಯಿದೆ. ಇದು ಗಂಡ-ಹೆಂಡತಿಯರ ನಡುವೆ ಕೋಪ, ಮನಸ್ತಾಪಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಆರೋಗ್ಯದ ಮೇಲೂ ಇದರ ಪ್ರಭಾವ ಬೀರಬಹುದು. ಜ್ಯೋತಿಷ್ಯದ ಪ್ರಕಾರ, ನುಗ್ಗೆ ಮರದ ಮೇಲೆ ರಾಹು ಮತ್ತು ಕೇತುಗಳ ಅಂಶ ಹೆಚ್ಚಾಗಿರುತ್ತದೆ. ಗ್ರಹ ದೋಷಗಳಿಗೆ ಕಾರಣವಾಗಬಹುದಾದ ಈ ಗುಣಲಕ್ಷಣಗಳಿಂದಾಗಿ, ಇದನ್ನು ಆತ್ಮಗಳು ವಾಸಿಸುವ ಮರ ಎಂದೂ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ವೈಜ್ಞಾನಿಕ ಕಾರಣ:

ನುಗ್ಗೆ ಮರವು ಉಷ್ಣಾಂಶದ ಮರವಾಗಿದೆ. ಇದರ ಕಾಂಡ ತೆಳುವಾಗಿರುವುದರಿಂದ, ಮಕ್ಕಳು ಅಥವಾ ಹಿರಿಯರು ಮರ ಹತ್ತಿದಾಗ ಅದು ಬೇಗನೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ನುಗ್ಗೆ ಮರದ ಆಯಸ್ಸು ತುಲನಾತ್ಮಕವಾಗಿ ಕಡಿಮೆ.

ಇದಲ್ಲದೆ, ನುಗ್ಗೆ ಮರದಲ್ಲಿ ಕಂಬಳಿ ಹುಳುಗಳು ಹೆಚ್ಚಾಗಿ ಇರುತ್ತವೆ. ಇವು ಮಕ್ಕಳಿಗೆ, ವೃದ್ಧರಿಗೆ ತೊಂದರೆ ಉಂಟುಮಾಡಬಹುದು, ಕಿವಿಗೆ ಹೋಗುವ ಸಾಧ್ಯತೆಗಳೂ ಇರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ, ನುಗ್ಗೆ ಮರವನ್ನು ಮನೆಗೆ ಅಂಟಿಕೊಂಡು ಬೆಳೆಸುವುದು ಅಷ್ಟು ಶುಭಕರವಲ್ಲ. ಇದನ್ನು ಮನೆಯ ಕಾಂಪೌಂಡ್ ಆಚೆ, ಸ್ವಲ್ಪ ದೂರದಲ್ಲಿ ಅಥವಾ ಹೊಲಗದ್ದೆಗಳಲ್ಲಿ ಬೆಳೆಸುವುದು ಹೆಚ್ಚು ಉತ್ತಮ. ಮನೆ ಹತ್ತಿರ ಬೆಳೆಸುವುದು ಮಾನಸಿಕವಾಗಿ ತೃಪ್ತಿದಾಯಕವಲ್ಲ ಎಂದು ಗುರೂಜಿ ಸಲಅಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *