ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಪ್ರಪ್ರಥಮವಾಗಿ ಮೇಷ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮೇಷರಾಶಿಯ ನಾಲ್ಕನೇ ಮನೆಯಲ್ಲಿ ಗುರುವು (ಸುಖಸ್ಥಾನ) ಸಂಚಾರ ಮಾಡಲಿದ್ದಾನೆ. ಈ ಸಂಚಾರವು ಇವರ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ.
ಈ ಅವಧಿಯಲ್ಲಿ, ಮೇಷ ರಾಶಿಯವರಿಗೆ ಮನೆ ಕಟ್ಟುವ, ನಿವೇಶನ ಅಥವಾ ಭೂಮಿ ಖರೀದಿಸುವ ಯೋಗ ಬಲಗೊಳ್ಳಲಿದೆ. ವಾಹನ ಯೋಗವೂ ಚೆನ್ನಾಗಿದ್ದು, ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆಗಳ ಸಾಧ್ಯತೆಗಳಿವೆ. ಆಂತರಿಕ ಶಾಂತಿ ಮತ್ತು ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಬಹುದು. ರಿಯಲ್ ಎಸ್ಟೇಟ್, ಸೇನಾ ಮತ್ತು ಪೊಲೀಸ್ ವೃತ್ತಿಯಲ್ಲಿರುವವರಿಗೆ ಮನಸ್ಸಿನ ತೃಪ್ತಿ ಸಿಗಲಿದೆ. ಪಿತೃಾರ್ಜಿತ ಆಸ್ತಿ ದೊರೆಯುವ ಹಾಗೂ ಐಷಾರಾಮಿ ಜೀವನ ನಡೆಸುವ ಅವಕಾಶಗಳು ಒದಗಿ ಬರಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ