SRH vs RCB: ಸನ್‌ರೈಸರ್ಸ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್​ಸಿಬಿ

SRH vs RCB: ಸನ್‌ರೈಸರ್ಸ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್​ಸಿಬಿ

ಐಪಿಎಲ್ 2026 ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗೆಲ್ಲುವುದು ಉಭಯ ತಂಡಗಳಿಗೆ ಅತ್ಯಂತ ಮುಖ್ಯವಾಗಿತ್ತು. ಅದರಲ್ಲೂ ಸನ್‌ರೈಸರ್ಸ್ ಅಗ್ರಸ್ಥಾನಕ್ಕೇರಬೇಕೆಂದರೆ ಆರ್​ಸಿಬಿ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿತ್ತಾದರೂ ಅಗ್ರ 2ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ 256 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್​ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಬೇಕಾಯಿತು.

Source link

Leave a Reply

Your email address will not be published. Required fields are marked *