Headlines

Daily Devotional: ಶಿವಲಿಂಗಕ್ಕೆ ಅರಿಶಿಣ ಹಚ್ಚಬಾರದು ಯಾಕೆ ಗೊತ್ತಾ? – Kannada News | Why Turmeric is Not Offered to Shivalinga

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಶಿವಲಿಂಗಕ್ಕೆ ಅರಿಶಿಣ ಹಚ್ಚಬಾರದು ಯಾಕೆ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಶಿವಾರಾಧನೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಶಿವನಿಗೆ ಹಾಲು, ಮೊಸರು, ತುಪ್ಪ, ಜೇನು, ವಿಭೂತಿ, ಬಿಲ್ವಪತ್ರೆ, ಅಕ್ಷತೆ, ಶುದ್ಧ ನೀರು, ಗಂಗಾಜಲ ಮತ್ತು ಶ್ರೀಗಂಧ ಮುಂತಾದ ಅನೇಕ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ.

ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗಕ್ಕೆ ಅರಿಶಿಣ ಅಥವಾ ಅರಿಶಿಣ ಮಿಶ್ರಿತ ನೀರನ್ನು ಅರ್ಪಿಸಬಾರದು. ಹೀಗೆ ಮಾಡಿದರೆ ಪೂಜೆಯ ಸಂಪೂರ್ಣ ಫಲ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ. ಅರಿಶಿಣವು ಮಹಿಳೆಯರಿಗೆ ಪ್ರಿಯವಾದ ಸೌಂದರ್ಯವರ್ಧಕವಾಗಿದ್ದು, ಇದನ್ನು ಲಿಂಗಾಕಾರದ ಶಿವನ ಪುಲ್ಲಿಂಗ ಸ್ವರೂಪಕ್ಕೆ ಅರ್ಪಿಸುವುದು ಸೂಕ್ತವಲ್ಲ. ಬದಲಾಗಿ, ಶಿವಲಿಂಗದ ಕೆಳಗಿರುವ ಪಾಣಿಪೀಠವು ಪಾರ್ವತಿ ದೇವಿಯ ಅಂಶವನ್ನು ಪ್ರತಿನಿಧಿಸುವುದರಿಂದ, ಆ ಭಾಗಕ್ಕೆ ಅರಿಶಿಣವನ್ನು ಅರ್ಪಿಸಬಹುದು. ಶಿವನು ಲಯಕಾರಕ ಮತ್ತು ತಣ್ಣನೆಯ ದ್ರವ್ಯಗಳಿಂದ ಸಂತೃಪ್ತನಾಗುವ ದೇವರು. ಅರಿಶಿಣ ಅರ್ಪಣೆಯು ತಮೋಗುಣವನ್ನು ಹೆಚ್ಚಿಸಿ ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

Leave a Reply

Your email address will not be published. Required fields are marked *