ಕನಿಷ್ಠ ವೇತನದ ಎಫೆಕ್ಟ್​​: ಪ್ಲೇಟ್​​ ಇಡ್ಲಿ ಬೆಲೆ 90 ರೂ, ಬಿರಿಯಾನಿ 500 ರೂ. ತಲುಪುವ ಎಚ್ಚರಿಕೆ ಕೊಟ್ಟ ಹೋಟೆಲ್​​ ಮಾಲಕರು – Kannada News | Minimum Wage Impact: Bengaluru Hotels Warn of Food Price Hike Across Karnataka

ಸಾಂದರ್ಭಿಕ ಚಿತ್ರImage Credit source: amexessentials.com

ಬೆಂಗಳೂರು, ಮೇ 26: ಕಮರ್ಷಿಯಲ್​​ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವದಿಂದಾಗಿ ತಿಂಡಿ-ತಿನಿಸುಗಳ ಬೆಲೆಯನ್ನು ಈಗಾಗಲೇ ಹೋಟೆಲ್​​ಗಳು ಏರಿಕೆ ಮಾಡಿರೋದು ಗ್ರಾಹಕರ ಕೈ ಸುಡುತ್ತಿದೆ. ಈ ನಡುವೆ ಹೋಟೆಲ್​​ಗಳು ಮತ್ತೊಂದು ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ನಿಯಮಗಳಿಂದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (KSHA) ಹೇಳಿದೆ. ಈ ನಿರ್ಧಾರದಿಂದ ಒಂದು ಪ್ಲೇಟ್​​ ಬಿರಿಯಾನಿ ದರ 500 ರೂ. ಆಗಬಹುದು. ಜೊತೆಗೆ ಇಡ್ಲಿ, ಮಸಾಲೆ ದೋಸೆ ಸೇರಿದಂತೆ ಜನಪ್ರಿಯ ಉಪಹಾರಗಳ ಬೆಲೆಯೂ ಭಾರೀ ಏರಿಕೆಯಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದೆ. ಇದರಿಂದ ಗ್ರಾಹಕರ ಜೊತೆಗೆ ಸಣ್ಣ ಹೋಟೆಲ್ ಮಾಲೀಕರ ಮೇಲೂ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಂಘ ತಿಳಿಸಿದೆ.

ಕೆಎಸ್​​ಹೆಚ್​​ಎ ಅಧ್ಯಕ್ಷ ಜಿ.ಕೆ. ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು,ಸುಮಾರು ಶೇಕಡಾ 60ರಷ್ಟು ವೇತನ ಹೆಚ್ಚಳದಿಂದ ಈಗಾಗಲೇ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚದ ಒತ್ತಡದಲ್ಲಿರುವ ಆತಿಥ್ಯ ವಲಯಕ್ಕೆ ಭಾರೀ ಹೊಡೆತ ಬೀಳಲಿದೆ. ಪರಿಷ್ಕೃತ ವೇತನದ ಪ್ರಕಾರ, ಕಾರ್ಮಿಕರಿಗೆ 19,300ರಿಂದ ಆರಂಭವಾಗಿ, ಅತ್ಯುನ್ನತ ಕೌಶಲ್ಯ ಹೊಂದಿದ ಕಾರ್ಮಿಕರಿಗೆ 31,100ರವರೆಗೆ ಕನಿಷ್ಠ ವೇತನ ನಿಗದಿಯಾಗಿದೆ. ಈ ವೇತನ ವ್ಯವಸ್ಥೆಯನ್ನು ಈಗಿನ ರೂಪದಲ್ಲೇ ಜಾರಿಗೆ ತಂದರೆ ಉಪಹಾರಗಳ ದರದಲ್ಲಿ ತೀವ್ರ ಏರಿಕೆ ಆಗಲಿದೆ. ಈಗ 50 ರೂ. ಇರುವ ಒಂದು ಪ್ಲೇಟ್​​ ಇಡ್ಲಿ ಬೆಲೆ 80-90ಕ್ಕೆ ಏರಬಹುದು. 80-90 ರೂ. ಇರುವ ಮಸಾಲೆ ದೋಸೆ ದರ 150ಕ್ಕೆ ತಲುಪಬಹುದು ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ 150-200 ರೂ. ಇರುವ ಶಾಕಾಹಾರಿ ಊಟದ ದರ 250-300ಕ್ಕೆ ಏರಬಹುದು. ಬೆಂಗಳೂರಿನಲ್ಲಿ 300-350 ರೂ.ಗಳಿಗೆ ಸಿಗುತ್ತಿರುವ ಬಿರಿಯಾನಿ ಬೆಲೆ ಸುಮಾರು 500ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಏಳು ಅಭ್ಯಾಸಗಳನ್ನು ಅಳವಡಿಸಿಕೊಂಡು ತನ್ನ ಖರ್ಚು ವೆಚ್ಚಕ್ಕೆ ಬ್ರೇಕ್ ಹಾಕಿದ ಬೆಂಗಳೂರಿಗ

ವಾಣಿಜ್ಯ LPG ಸಿಲಿಂಡರ್ ದರ ಏರಿಕೆಯೂ ಹೋಟೆಲ್​​ಗಳ ಮೇಲೆ ಈಗಾಗಲೇ ಆರ್ಥಿಕ ಹೊರೆ ಹೆಚ್ಚಿಸಿವೆ. ಕೆಲವೇ ತಿಂಗಳಲ್ಲಿ LPG ಸಿಲಿಂಡರ್ ದರ 1,884 ರೂ.ಗಳಿಂದ 3,152ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಕಸ ಸಂಗ್ರಹ ಸೆಸ್​​ ಶುಲ್ಕಗಳೂ ಹೋಟೆಲ್ ಉದ್ಯಮಕ್ಕೆ ಹೊರೆ ತಂದಿವೆ ಎಂದರು ತಿಳಿಸಿದ್ದಾರೆ. ಹೋಟೆಲ್‌ಗಳು ಈಗಾಗಲೇ ಕಾರ್ಮಿಕರಿಗೆ ಊಟ, ವಸತಿ, ಯೂನಿಫಾರ್ಮ್ ಸೌಲಭ್ಯ ನೀಡುತ್ತಿರುವುದರಿಂದ ಈ ವಲಯವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:39 am, Tue, 26 May 26

Source link

Leave a Reply

Your email address will not be published. Required fields are marked *