ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ನಿರ್ಣಾಯಕ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಬಲಿಷ್ಠ ಗುಜರಾತ್ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿದರು. ತಂಡ ಆರಂಭಿಕ ಆಘಾತಕ್ಕೆ ಸಿಲುಕಿಕೊಂಡಿದ್ದರೂ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ರಜತ್ ಆ ಬಳಿಕ ರೌದ್ರಾವತಾರ ತಾಳಿದರು ಇದರ ಪರಿಣಾಮವಾಗಿ ರಜತ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ರಜತ್ 20ನೇ ಓವರ್ವರೆಗೂ ಅಜೇಯರಾಗಿ ಉಳಿದ ರಜತ್ ಕೇವಲ 32 ಎಸೆತಗಳಲ್ಲಿ 93 ರನ್ ಬಾರಿಸಿದರು. ರಜತ್ ಅವರ ಈ ಅಬ್ಬರದ ಬ್ಯಾಟಿಂಗ್ನಿಂದಾಗಿ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಕಲೆಹಾಕಿತು.
Published On – 9:26 pm, Tue, 26 May 26