ಮಾಜಿ ಪ್ರೇಯಸಿ ಕರೆದಳೆಂದು ಹೋದ ಪ್ರಿಯಕರ ದುರಂತ ಸಾವು: ಆಗಿದ್ದೇನು?

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಮೇ 27: ಮಾಜಿ ಪ್ರೇಯಸಿಯ (Ex-girlfriend) ಕರೆ ಹಿನ್ನೆಲೆ ಆಕೆಯನ್ನು ಭೇಟಿ ಮಾಡಲು ಮನೆಗೆ ಹೋಗಿದ್ದ ಯುವಕನೋರ್ವ ತೀವ್ರ ಹಲ್ಲೆಗೊಳಗಾಗಿ ಸಾವನ್ನಪ್ಪಿರುವಂತಹ (death) ಘಟನೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರದ ಬಿಡಿ ಕಾಲೋನಿ ನಿವಾಸಿ ಮೊಹಮ್ಮದ್ ಖಾಸಿಂ(27) ಕೊಲೆಯಾದ ಯುವಕ. ಕೊಲೆ ಆರೋಪ ಹಿನ್ನೆಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬ್ಯಾಟರಯನಪುರ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಮಾಜಿ ಪ್ರೇಯಸಿ ಕರೆಗೆ ಓಗೊಟ್ಟು ಮನೆಗೆ ಹೋದವ ಕೊಲೆ
  • ಕೊಲೆ ಆರೋಪ ಹಿನ್ನೆಲೆ ಮಾಜಿ ಪ್ರೇಯಸಿಯನ್ನು ವಶಕ್ಕೆ
  • ಬ್ಯಾಟರಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು

ನಡೆದಿದ್ದೇನು?

ಮೊಹಮ್ಮದ್ ಖಾಸಿಂ ಹಾಗೂ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಬೆಂಗಳೂರಿನ ಮತ್ತೊಬ್ಬ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. ಮೇ 25ರ ಸಂಜೆ ಮಾಜಿ ಪ್ರೇಯಸಿಯ ಕರೆಯ ಮೇರೆಗೆ ಆಕೆಯನ್ನು ಭೇಟಿ ಮಾಡಲು ಖಾಸಿಂ ಬ್ಯಾಟರಾಯನಪುರ ವ್ಯಾಪ್ತಿಯ ಶ್ಯಾಮಣ್ಣ ಗಾರ್ಡನ್‌ನಲ್ಲಿರುವ ಆಕೆಯ ಮನೆಗೆ ಹೋಗಿದ್ದಾನೆ.

ಇದನ್ನೂ ಓದಿ: ನೆಲಮಂಗಲ: ಸ್ನಾಪ್‌ಚಾಟಲ್ಲಿ ಪ್ರೀತಿಸಿ ಮದುವೆ, ಎರಡೇ ತಿಂಗಳಿಗೆ ಬ್ರೇಕ್‌ಅಪ್! ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ ಯುವತಿ

ಈ ವೇಳೆ ಪ್ರೇಯಸಿಯ ಮನೆಯಲ್ಲಿ ಖಾಸಿಂ ಆಕೆಯ ಪತಿ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಪತಿ ಹಾಗೂ ಆತನ ಕುಟುಂಬಸ್ಥರು ಮೊಹಮ್ಮದ್ ಖಾಸಿಂ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಖಾಸಿಂ ರಾಮನಗರದ ತನ್ನ ನಿವಾಸಕ್ಕೆ ತೆರಳಿ ಮಲಗಿದ್ದ. ಗಾಯದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಖಾಸಿಂ ಕೊನೆಯುಸಿರೆಳೆದಿದ್ದಾನೆ.

800 ರೂಪಾಯಿಗಾಗಿ ಸ್ನೇಹಿತನ ಕೊಂದು ಹೂತಿಟ್ಟ ಸ್ನೇಹಿತರು

ಬೆಂಗಳೂರಿನ ಕುಂಬಳಗೋಡುವಿನಲ್ಲಿ ಕೇವಲ 800 ರೂಪಾಯಿ ಗಾಂಜಾ ಹಣದ ವಿಚಾರವಾಗಿ ಗೆಳೆಯರೇ ಸೇರಿ ಆಟೋ ಚಾಲಕ ರಕ್ಷಿತ್‌ನನ್ನು ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ನಂತರ ಆರೋಪಿಗಳು ಶವವನ್ನು ರಾಮಸಂದ್ರ ಕೆರೆ ಬಳಿ ಹೂತಿಟ್ಟಿದ್ದಾರೆ. ಆಟೋ ಮೇಲಿದ್ದ ರಕ್ತದ ಕಲೆ ಆಧರಿಸಿ ಕಾರ್ಯಾಚರಣೆ ನಡೆಸಿದ ನೈರುತ್ಯ ವಿಭಾಗದ ಪೊಲೀಸರು, ಪ್ರಮುಖ ಆರೋಪಿ ಮೊಹೀನ್ ಪಾಷಾ ಹಾಗೂ ಆತನ ಅಪ್ರಾಪ್ತ ಸಂಬಂಧಿಯನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *