ಕಾರವಾರ, ಮೇ 29: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಈ ಹಿಂದೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ದೇವಿಯ ಅನುಗ್ರಹದಿಂದಲೇ ಅವರೀಗ ಕರ್ನಾಟಕದ ನೂತನ ಸಿಎಂ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಅರ್ಚಕ ಗಣೇಶ್ ನಾಯ್ಕ್, ಡಿಸೆಂಬರ್ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ದೇಗುಲಕ್ಕೆ ಬಂದಿದ್ದರು. ಅಂದು ಅವರು ಕೇಳಿದ್ದಕ್ಕೆ ದೇವಿ ಒಳ್ಳೆಯ ಸೂಚನೆ ಕೊಟ್ಟಿದ್ದಳು. ಎರಡು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಮುನ್ಸೂಚನೆಯೂ ಅವರಿಗೆ ಹೈಕಮಾಂಡ್ನಿಂದ ಸಿಕ್ಕಿತ್ತು. ನಿತ್ಯ ಬೆಳಗ್ಗೆ ಪೂಜೆ ಸಲ್ಲಿಸುವಂತೆ ಅವರ ಕಡೆಯವರು ತಿಳಿಸಿದ್ದು, ತಾಯಿ ಪ್ರಸಾದ ಕೊಡುತ್ತಿರುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಇಲ್ಲಿ ತಾಯಿ ಪ್ರಸಾದ ಕೊಟ್ಟ ಪ್ರಕಾರವೇ ಅವರಿಗೆ ಅಲ್ಲಿ ಆಗುತ್ತಿತ್ತು. ಸಿಎಂ ಆಗುವವರೆಗೆ ನಿತ್ಯ ಸಂಕಲ್ಪ ಮಾಡಲು ತೀರ್ಮಾನಿಸಲಾಗಿದ್ದು, ಸಿಎಂ ಆದ ಬಳಿಕವೂ ದೇವಿಯ ಅನುಗ್ರಹ ಅವರಿಗೆ ಇರುತ್ತೆ. ಡಿ.ಕೆ.ಶಿವಕುಮಾರ್ ಹೆಸರಲ್ಲಿ 2 ತಿಂಗಳಿನಿಂದ ಸಂಕಲ್ಪ ಮಾಡಲಾಗ್ತಿದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.