Headlines

ಮಾಧುರಿ ದೀಕ್ಷಿತ್​​ಗೂ ಕಾಡಿತು ಎಐ ವಿಡಿಯೋ ಕಾಟ

ಬಾಲಿವುಡ್‌ನ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಅವರದ್ದೇ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾಧುರಿ ಅವರು ಅತ್ಯಂತ ಗ್ಲಾಮರಸ್ ಹಾಗೂ ಬೋಲ್ಡ್ ಆದ ಕಪ್ಪು ಬಣ್ಣದ ಸ್ಲಿಟ್ ಗೌನ್ ಧರಿಸಿ ಕುಳಿತಿರುವಂತೆ ಈ ವಿಡಿಯೋದಲ್ಲಿ ಬಿಂಬಿಸಲಾಗಿದೆ. ಇದನ್ನು ನೋಡಿದ ಅನೇಕ ಅಭಿಮಾನಿಗಳು ಮತ್ತು ನೆಟ್ಟಿಗರು ಇದು ನಿಜವಾದ ವಿಡಿಯೋ ಎಂದುಕೊಂಡು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಈ ವಿಡಿಯೋದ ಹಿಂದಿರುವ ಅಸಲಿ ಸತ್ಯವೇ ಬೇರೆ.

ಸದ್ಯ ಹರಿದಾಡುತ್ತಿರುವ ಮಾಧುರಿ ದೀಕ್ಷಿತ್ ಅವರ ಈ ವಿಡಿಯೋ ಸಂಪೂರ್ಣವಾಗಿ ಫೇಕ್ ಆಗಿದೆ. ಆಧುನಿಕ ತಂತ್ರಜ್ಞಾನವಾದ ಡೀಪ್‌ಫೇಕ್ ಬಳಸಿ ಬೇರೊಬ್ಬ ನಟಿಯ ದೇಹಕ್ಕೆ ಮಾಧುರಿ ದೀಕ್ಷಿತ್ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಈ ವಿಡಿಯೋ ಎಷ್ಟು ನೈಜವಾಗಿ ಮೂಡಿಬಂದಿದೆಯೆಂದರೆ, ಮೊದಲ ನೋಟಕ್ಕೆ ಇದು ನಕಲಿ ಎಂದು ಪತ್ತೆಹಚ್ಚುವುದು ಸಾಮಾನ್ಯ ಜನರಿಗೆ ಅಸಾಧ್ಯವಾಗಿದೆ.

ಈ ವಿಡಿಯೋದಲ್ಲಿ ಇರುವುದು ಬಾಲಿವುಡ್‌ನ ಮತ್ತೊಬ್ಬ ಗ್ಲಾಮರಸ್ ನಟಿ ಭಾಗ್ಯಶ್ರೀ ಬೋರ್ಸೆ. ಪ್ರಶಸ್ತಿ ಸಮಾರಂಭವೊಂದರಲ್ಲಿ ಭಾಗ್ಯಶ್ರೀ ಅವರು ಧರಿಸಿದ್ದ ಬೋಲ್ಡ್ ಉಡುಪಿನ ವಿಡಿಯೋವನ್ನು ಕೆಲವರು ಎಡಿಟ್ ಮಾಡಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ಭಾಗ್ಯಶ್ರೀ ಅವರ ಮುಖದ ಜಾಗಕ್ಕೆ ಮಾಧುರಿ ದೀಕ್ಷಿತ್ ಅವರ ಮುಖವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಇಂತಹ ಡೀಪ್‌ಫೇಕ್ ವಿಡಿಯೋಗಳನ್ನು ಹರಿಬಿಡುವುದು ಹೆಚ್ಚಾಗುತ್ತಿದ್ದು, ಇಂಟರ್ನೆಟ್‌ನಲ್ಲಿ ಕಾಣುವ ಎಲ್ಲವೂ ನಿಜವಲ್ಲ ಎಂಬುದಕ್ಕೆ ಈ ವಿಡಿಯೋ ಮತ್ತೊಂದು ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:30 pm, Fri, 29 May 26

Source link

Leave a Reply

Your email address will not be published. Required fields are marked *