ಇಂಧನ ದರ ಏರಿಕೆ ಎಫೆಕ್ಟ್​​: ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ‘ಇವಿ’ ವಾಹನಗಳ ಧಮಾಕಾ!

ಬೆಂಗಳೂರು, ಮೇ 30: ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ದರಗಳು ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ಕಂಗೆಟ್ಟಿರುವ ಬೆಂಗಳೂರಿಗರು (Bangaluru) ಈಗ ಇವಿ ಅಂದರೆ ಎಲೆಕ್ಟ್ರಿಕ್ ವಾಹನಗಳ (Electric Vehicles) ಮೊರೆ ಹೋಗುತ್ತಿದ್ದಾರೆ. ನಗರದಲ್ಲಿ ಇವಿ ವಾಹನಗಳಿಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪ್ರತಿ ತಿಂಗಳು ನೂರಾರು ವಾಹನಗಳು ಮಾರಾಟವಾಗುತ್ತಿವೆ. ಇತ್ತ ವಾಹನ ಮಾಲೀಕರು ಮತ್ತೆ ಡೀಸೆಲ್ ದರ ಹೆಚ್ಚಾಗುತ್ತದೆ, ಹಾಗಾಗಿ ಇವಿ ಮೊರೆ ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ.

ಮುಖ್ಯಾಂಶಗಳು

  • ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಂಗೆಟ್ಟು ಇವಿ ಮೊರೆ ಹೋದ ಬೆಂಗಳೂರಿಗರು
  • ಶೋರೂಂಗಳಲ್ಲಿ ಖಾಲಿಯಾದ ಎಲೆಕ್ಟ್ರಿಕ್ ವಾಹನಗಳ ಸ್ಟಾಕ್!
  • ಇವಿ ಸ್ಕೂಟರ್, ಕಾರ್ ಬುಕ್ ಮಾಡಿದ್ರೆ 2 ರಿಂದ 3 ತಿಂಗಳು ವೇಟಿಂಗ್ ಪಿರಿಯಡ್!

ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡಿದ ಜನ

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂಧನ ದರಗಳು ಗಗನಕ್ಕೇರುತ್ತಿವೆ. ಈಗಾಗಲೇ ದೇಶದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಇತ್ತ ಸಿಎನ್‌ಜಿ ಮತ್ತು ಎಲ್‌ಪಿಜಿ ಬೆಲೆಯೂ ಗ್ರಾಹಕರ ಕೈ ಸುಡುತ್ತಿದೆ. ಇಂಧನ ದರ ಏರಿಕೆಯ ಈ ಶಾಕ್‌ನಿಂದಾಗಿ ಹೊಸದಾಗಿ ವಾಹನ ಖರೀದಿಸಲು ಮುಂದಾಗುತ್ತಿರುವ ಸಿಲಿಕಾನ್ ಸಿಟಿ ಮಂದಿ, ಪೆಟ್ರೋಲ್-ಡೀಸೆಲ್ ಸಹವಾಸವೇ ಬೇಡ ಎಂದು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಕಿರಿಕಿರಿ, ದುಬಾರಿ ಬಾಡಿಗೆ ಇದ್ರೂ ಬೆಂಗಳೂರು ಬಿಡಲ್ಲ ಜನ! ಬಿಹಾರಿ ಯುವಕನ ವಿಡಿಯೋ ವೈರಲ್

ಇದಕ್ಕೆ ಸಾಕ್ಷಿ ಎಂಬಂತೆ ನಗರದ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗಳಲ್ಲಿ ವಾಹನಗಳ ಮಾರಾಟದ ಗ್ರಾಫ್ ದಿಢೀರ್ ಏರಿಕೆಯಾಗಿದೆ. ಕಳೆದ ತಿಂಗಳಷ್ಟೇ ಕೇವಲ 40 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದ ಶೋರೂಂ ಮಾಲೀಕರು, ಇಂಧನ ದರ ಹೆಚ್ಚಳವಾದ ಈ ಒಂದೇ ತಿಂಗಳಿನಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಸೇಲ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚಾಗುತ್ತಿರುವುದರಿಂದ ಇವಿ ಸ್ಕೂಟರ್‌ಗಳೇ ಬೆಸ್ಟ್ ಆಪ್ಷನ್ ಎಂದು ಗ್ರಾಹಕರಾದ ಶಶಿಕಾಂತ್ ರಾಣೆ ಅವರ ಮಾತು.

ಇವಿ ಕ್ರಾಂತಿಗೆ ಸೈ ಎಂದ ಚಾಲಕರು

ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸರಿಸುಮಾರು 8 ರೂಪಾಯಿಯಷ್ಟು ಭಾರಿ ಏರಿಕೆಯಾಗಿರುವ ಕಾರಣ, ಹೊಸ ಕಾರು ಖರೀದಿಸಲು ಪ್ಲ್ಯಾನ್ ಮಾಡಿದ್ದ ಮಧ್ಯಮ ವರ್ಗದ ಜನರೆಲ್ಲಾ ಇವಿ ಕಾರುಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇದರ ನಡುವೆ ಯುದ್ಧದ ಎಫೆಕ್ಟ್‌ನಿಂದಾಗಿ ಎಲ್‌ಪಿಜಿ ಸಿಗದೆ ಪರದಾಡಿದ್ದ ಆಟೋ ಚಾಲಕರು ಸಹ ಈಗ ಇವಿ ಕ್ರಾಂತಿಗೆ ಸೈ ಎಂದಿದ್ದಾರೆ. ಹಿಂದೆ ಲೀಟರ್‌ಗೆ 55 ರೂ. ಇದ್ದ ಎಲ್‌ಪಿಜಿ ದರ ಈಗ ಬರೋಬ್ಬರಿ 95 ರೂಪಾಯಿಗೆ ತಲುಪಿರುವುದರಿಂದ, ನಿರಂತರ ದರ ಏರಿಕೆಗೆ ಬ್ರೇಕ್ ಹಾಕಲು ಎಲೆಕ್ಟ್ರಿಕ್ ಆಟೋಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಭಾರಿ ಬೇಡಿಕೆ ಮಧ್ಯೆ ಸಪ್ಲೈ ಕೊರತೆ

ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದು, ಶೋರೂಂ ಮಾಲೀಕರು ಗ್ರಾಹಕರಿಗೆ ವಾಹನಗಳನ್ನು ಸಪ್ಲೈ ಮಾಡಲು ಹೈರಾಣಾಗುತ್ತಿದ್ದಾರೆ. ಸದ್ಯ ಇವಿ ವಾಹನಗಳನ್ನು ಬುಕ್ ಮಾಡಿದರೆ ವಿತರಣೆಗಾಗಿ ಕನಿಷ್ಟ ಎರಡರಿಂದ ಮೂರು ತಿಂಗಳು ಕಾಯಬೇಕು ಎಂದು ಸ್ಕೂಟರ್ ಶೋರೂಂನ ಸೇಲ್ಸ್ ಎಕ್ಸಿಕ್ಯುಟಿವ್ ಹರ್ಷಿತ್​ ಹೇಳಿದ್ದಾರೆ.

ಇದನ್ನೂ ಓದಿ: ಇಂಧನ ದರ ಏರಿಕೆ ಬರೆ: ಸರಕು ಸಾಗಣೆ ದರ ಹೆಚ್ಚಳಕ್ಕೆ ಲಾರಿ ಮಾಲೀಕರ ನಿರ್ಧಾರ, ಪ್ರಧಾನಿ ಮೋದಿಗೆ ಸಿಮ್ಟಾ ಪತ್ರ

ಒಟ್ಟಿನಲ್ಲಿ, ಜಾಗತಿಕ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ದರಗಳು ದಿನ ನಿತ್ಯವೂ ಏರಿಕೆ ಆಗ್ತಿದ್ದಂತೆ, ಇತ್ತ ಜನರು ಮಾತ್ರ ಸ್ಮಾರ್ಟ್ ಆಗಿ ಇವಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಮಾರುಕಟ್ಟೆಯಲ್ಲಿ ವಾಹನಗಳ ಕೊರತೆ ಎದುರಾಗಿರುವುದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *