ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ – Kannada News

ಬೆಂಗಳೂರು, (ಜೂನ್ 02): ಸಾಮಾನ್ಯ ವರ್ಗದವರಿಗೆ (middle class People) ಲಕ್ಷಗಟ್ಟಲೆ ಹಣ ಕೊಟ್ಟು ಚಿನ್ನವನ್ನ ಒಮ್ಮೇಲೆ ಖರೀದಿ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಯಾಕೆಂದ್ರೆ ಅಷ್ಟು ಹಣ ಅವರ ಬಳಿ ಇರುವುದಿಲ್ಲ. ಇಂಥವರಿಗಾಗಿಯೇ ಚಿನ್ನದ ವ್ಯಾಪಾರಿಗಳು ಕೆಲ ರಿಯಾಯಿತಿಗಳನ್ನ ನೀಡಿ, ತಿಂಗಳಿಗೆ ಎಷ್ಟು ಹಣವಾಗುತ್ತೋ ಅಷ್ಟು ಹಣವನ್ನ ಸ್ಕೀಂನಲ್ಲಿ ಹೂಡಿಕೆ (invest schemes) ಮಾಡಿ ಅಷ್ಟು ಚಿನ್ನ ತೆಗೆದುಕೊಳ್ಳುವಂತಹದನ್ನು ಮಾಡುತ್ತಿದ್ದಾರೆ. ಸಾವಿರಾರು ಮಂದಿ ಈ ಸ್ಕೀಂಗಳಿಂದಲೇ ಚಿನ್ನ ಖರೀದಿ ಮಾಡುತ್ತಿದ್ದರು. ಆದ್ರೆ, ಇದಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು.. ಎಲ್ಲದರ ಬೆಲೆ ಏರಿಕೆಯ ಬಿಸಿಯಿಂದ ಚಿನ್ನದ ಮೇಲೆ ಆಸೆಯಿದ್ರೂ ಕೂಡಾ, ಜನರು ಗೋಲ್ಡ್ ಸ್ಕೀಂನಿಂದ (gold schemes) ಹಿಂದೆ ಸರಿಯುತ್ತಿದ್ದಾರೆ.

ಬೆಲೆ ಏರಿಕೆಯ ಬಿಸಿ

ತಿಂಗಳು ಇಂತಿಷ್ಟು ಅಂತ ಹೂಡಿಕೆ ಮಾಡುತ್ತಿದ್ದ ಗೋಲ್ಡ್ ಸ್ಕೀಮ್ ಕ್ಯಾನ್ಸಲ್ ಮಾಡಿಕಂಡು ಹಣ ಪಡೆಯುತ್ತಿದ್ದಾರೆ. ಸದ್ಯ ಗೋಲ್ಡ್ ರೇಟ್ ಕಡಿಮೆಯಾದ್ರೂ ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ವಾಣಿಜ್ಯ ಸಿಲಿಂಡರ್ , ಪೆಟ್ರೋಲ್ ಡೀಸೆಲ್, ಹೋಟೆಲ್ ತಿಂಡಿ ದರ ಏರಿಕೆಯಿಂದ ಮಧ್ಯಮ ವರ್ಗ ಕಂಗೆಟ್ಟಿದೆ. ಇದರ ಜೊತೆಗೆ ಕಂಪನಿಗಳ ಲೇ ಆಫ್ , ಹಾಗೂ ಮಕ್ಕಳ ಶಾಲಾ ಶುಲ್ಕದ ಎಫೆಕ್ಟ್ ನಿಂದ ಜನರಿಗೆ ಎಲ್ಲಿಲ್ಲದ ಸಂಕಷ್ಟ ಶುರುವಾಗಿದೆ.   ಗೋಲ್ಡ್ ಮೇಲೆ ಹೂಡಿಕೆ ಮಾಡುತ್ತಿದ್ದವರಿಗೆ ಈಗ ಕಮಿಟ್ ಮೆಂಟ್ ಚಿಂತೆಯಾಗಿದೆ. ಕೆಲವರು ಚಿನ್ನ ಖರೀದಿಯಿಂದ ಹಿಂದೆ ಸರಿದರೆ, ಮತ್ತೆ ಕೆಲವರು ಹಾಕಿರುವ ಸ್ಕೀಂಗಳನ್ನ ವಾಪಸ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಉಳಿತಾಯದ ಹಣವನ್ನೇ ಈ ರೀತಿ ಸ್ಕೀಂಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಆದ್ರೆ, ಇದೀಗ ಪ್ರತಿನಿತ್ಯದ ವಸ್ತುಗಳು ದುಬಾರಿ ಆಗುತ್ತಿದ್ದರೆ ಉಳಿತ ಮಾಡಲು ಹೇಗೆ ಸಾಧ್ಯ?  ಬೆಲೆ ಏರಿಕೆಯಿಂದ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಧ್ಯಮ ವರ್ಗದ ಜನರಿಗೆ ಈ ರೀತಿ ಸ್ಕೀಂಗಳಲ್ಲಿ ಹೂಡಿಕೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ಇತ್ತ ಗ್ರಾಹಕರಿಲ್ಲದೆ ಚಿನ್ನದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಗೋಲ್ಡ್ ರೇಟ್ ಏರಿಕೆಯಾದಾಗಲೂ ಗ್ರಾಹಕರು ಅಂಗಡಿಗೆ ಬರ್ತಿಲ್ಲ. ಈಗ ಕಡಿಮೆಯಾದ್ರೂ ದಿನನಿತ್ಯದ ಕಮಿಟ್ಮೆಂಟ್ ಗಳಿಂದ ಜನರು ಚಿನ್ನದ ಖರೀದಿಯಿಂದ ದೂರ ಸರಿಯುತ್ತಿದ್ದಾರೆ. ಈ ರೀತಿ ಆದ್ರೆ ನಮ್ಮ ಕಥೆ ಏನು ಅಂತಿದ್ದಾರೆ.

ಒಟ್ನಲ್ಲಿ ಮಧ್ಯಮ ವರ್ಗಕ್ಕೆ ಬಂಗಾರ ಖರೀದಿಗೆ ಇದ್ದ ಸ್ಕೀಂಗಳನ್ನೇ ಬೆಲೆ ಏರಿಕೆಯಿಂದ ಬಿಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಜನರ ಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಿಸುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

Source link

Leave a Reply

Your email address will not be published. Required fields are marked *