Headlines

‘ಧುರಂಧರ್’ ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆದಿದ್ದ ರಣವೀರ್ ಸಿಂಗ್; ಆದ್ರೂ ಹರಿದುಬಂತು ಕೋಟಿ ಕೋಟಿ ಹಣ! – Kannada News

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರವೂ ಒಂದು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ. ಆದರೆ, ಈ ಚಿತ್ರಕ್ಕಾಗಿ ನಟ ರಣವೀರ್ ಸಿಂಗ್ ಅವರು ಆರಂಭದಲ್ಲಿ ತೀರಾ ಕಡಿಮೆ ಸಂಭಾವನೆಯನ್ನು ಪಡೆದಿದ್ದರು ಎಂಬ ಆಸಕ್ತಿದಾಯಕ ವಿಷಯವನ್ನು ಚಿತ್ರದ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಬಿಚ್ಚಿಟ್ಟಿದ್ದಾರೆ.

ಅತಿ ದೊಡ್ಡ ಬಜೆಟ್‌ನ ಈ ಚಿತ್ರದ ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಮತ್ತು ನಷ್ಟದ ಅಪಾಯವನ್ನು ಹಂಚಿಕೊಳ್ಳಲು ಚಿತ್ರತಂಡ ಒಂದು ವಿಶೇಷ ಬಿಸಿನೆಸ್ ಪ್ಲಾನ್ ಮಾಡಿತ್ತಂತೆ. ಜಿಯೋ ಸ್ಟುಡಿಯೋಸ್ ಮುಖ್ಯಸ್ಥೆ ಹಾಗೂ ಚಿತ್ರದ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಈ ಕುರಿತು ಮಾತನಾಡುತ್ತಾ, ‘ಧುರಂಧರ್ ಚಿತ್ರಕ್ಕಾಗಿ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಇಬ್ಬರೂ ಆರಂಭದಲ್ಲಿ ತೀರಾ ಕಡಿಮೆ ಮುಂಗಡ ಸಂಭಾವನೆಯನ್ನು ಪಡೆದುಕೊಳ್ಳಲು ಒಪ್ಪಿಕೊಂಡಿದ್ದರು. ಬದಲಿಗೆ, ಸಿನಿಮಾ ರಿಲೀಸ್ ಆದ ಬಳಿಕ ಬರುವ ಲಾಭದಲ್ಲಿ ಪಾಲು ಪಡೆಯುವ ‘ಬ್ಯಾಕೆಂಡ್ ಡೀಲ್’ ಮಾಡಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

‘ಈ ವಿಶೇಷ ಒಪ್ಪಂದದಿಂದಾಗಿ ರಣವೀರ್ ಸಿಂಗ್ ಅವರಿಗೆ ನಂತರ ಭರ್ಜರಿ ಲಾಭ ಸಿಕ್ಕಿತು. ಸಿನಿಮಾ ಸೂಪರ್ ಹಿಟ್ ಆದ ಕಾರಣ ನಮ್ಮೊಂದಿಗೆ ಅವರು ಕೂಡ ಕೋಟಿ ಕೋಟಿ ಹಣವನ್ನು ಮನೆಗೆ ಕೊಂಡೊಯ್ದರು. ಚಿತ್ರರಂಗದಲ್ಲಿ ಬಜೆಟ್ ನಷ್ಟದ ಅಪಾಯ ಮತ್ತು ಯಶಸ್ಸಿನ ಲಾಭ ಎರಡನ್ನೂ ಸಮನಾಗಿ ಹಂಚಿಕೊಳ್ಳಲು ಇಂತಹ ಒಪ್ಪಂದಗಳು ಸಹಕಾರಿಯಾಗುತ್ತವೆ’ ಎಂದು ಅವರು ವಿವರಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಸೃಷ್ಟಿಸಿದ ದಾಖಲೆಯ ಗಳಿಕೆ ಎಷ್ಟು?

ಕಡಿಮೆ ಸಂಭಾವನೆ ಪಡೆದಿದ್ದರೂ ರಣವೀರ್ ಸಿಂಗ್ ಅವರಿಗೆ ಈ ಚಿತ್ರದಿಂದ ಭಾರಿ ಮೊತ್ತದ ಲಾಭ ಸಿಗಲು ಕಾರಣ ಸಿನಿಮಾದ ಬೃಹತ್ ಕಲೆಕ್ಷನ್. ಹೌದು, ‘ಧುರಂಧರ್’ ಮತ್ತು ಅದರ ಮುಂದುವರಿದ ಭಾಗವಾದ ‘ಧುರಂಧರ್: ರಿವೆಂಜ್’ ಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿವೆ.

ಈ ಫ್ರಾಂಚೈಸಿಯ ಎರಡೂ ಭಾಗಗಳು ಸೇರಿ ವಿಶ್ವಾದ್ಯಂತ ಬರೋಬ್ಬರಿ 3,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕೊಳ್ಳೆಹೊಡೆದಿವೆ. ಈ ಅಪಾರ ಗಳಿಕೆಯಿಂದಾಗಿ ‘ಧುರಂಧರ್’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಮತ್ತು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕಮರ್ಷಿಯಲ್ ಸಿನಿಮಾಗಳ ಸಾಲಿಗೆ ಸೇರಿದೆ.

ಇದನ್ನೂ ಓದಿ: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್; ‘ನನಗೂ ಹೀಗೇ ಆಗಿತ್ತು’ ಎಂದ ನಟಿ

ಆರಂಭದಲ್ಲಿ ಒಂದೇ ಸಿನಿಮಾವಾಗಿ ತೆರೆಗೆ ಬರಬೇಕಿದ್ದ ಈ ಚಿತ್ರ, ನಂತರ ಕಥೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ ಎರಡು ಭಾಗಗಳಾಗಿ ಬಿಡುಗಡೆಯಾಯಿತು. ಅಂತಿಮವಾಗಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದರಿಂದ ರಣವೀರ್ ಸಿಂಗ್ ಸೇರಿದಂತೆ ಇಡೀ ಚಿತ್ರತಂಡ ಭರ್ಜರಿ ಲಾಭ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *