Headlines

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! – Kannada News

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮುಕ್ತಾಯದ ಬೆನ್ನಲ್ಲೇ ಸನ್​ರೈಸರ್ಸ್ ಹೈದರಾಬಾದ್ (SRH)​ ತಂಡಕ್ಕೆ ಆಘಾತ ಎದುರಾಗಿದೆ. ಎಸ್​ಆರ್​ಹೆಚ್​ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins)​ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಡೌಟ್ ಎಂಬ ವರದಿ ಹೊರಬಿದ್ದಿದೆ.

ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಪ್ಯಾಟ್ ಕಮಿನ್ಸ್ ಐಪಿಎಲ್​ 2027ರ ಟೂರ್ನಿಯಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.

ಮುಂದಿನ 18 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಮೆಲ್ಬೋರ್ನ್‌ನಲ್ಲಿ 150ನೇ ವರ್ಷದ ಐತಿಹಾಸಿಕ ಟೆಸ್ಟ್, ಆಶಸ್ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್‌ನಂತಹ ಸರಣಿಗಳನ್ನು ಆಡಬೇಕಿದೆ.

ಈ ಬಗ್ಗೆ ಸಿಡ್ನಿ ಹೆರಾಲ್ಡ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, “ಮುಂದಿನ ವರ್ಷದ ಯಾವುದಾದರೂ ಒಂದು ಹಂತದಲ್ಲಿ ಯಾವುದಕ್ಕಾದರೂ ಬ್ರೇಕ್ ನೀಡಲೇಬೇಕಾಗುತ್ತದೆ. ಆದರೆ ಅದು ಖಂಡಿತವಾಗಿಯೂ ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್‌ ಪಂದ್ಯಗಳಂತೂ ಅಲ್ಲ” ಎಂದು ನೇರವಾಗಿ ಹೇಳಿದ್ದಾರೆ.

ಅಲ್ಲದೆ ” ಐಪಿಎಲ್​ ಟೂರ್ನಿ ಹತ್ತಿರ ಬಂದಾಗ ನಾನು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಫ್ರಾಂಚೈಸಿ (SRH) ಜೊತೆಗೂ ಮಾತನಾಡಿ ಯಾವುದು ಸೂಕ್ತವೋ ಹಾಗೆ ಮಾಡುತ್ತೇನೆ” ಎಂದು ಇದೇ ವೇಳೆ ಕಮಿನ್ಸ್ ತಿಳಿಸಿದ್ದಾರೆ.

ಈ ಮೂಲಕ ಫ್ರಾಂಚೈಸಿ ಲೀಗ್‌ಗಳಿಗಿಂತ ತಮಗೆ ದೇಶದ ಪರ ಆಡುವ ಟೆಸ್ಟ್ ಪಂದ್ಯಗಳು ಮತ್ತು ಐಸಿಸಿ ಟೂರ್ನಿಗಳೇ ಮೊದಲ ಆದ್ಯತೆ ಎಂದು ಪ್ಯಾಟ್ ಕಮಿನ್ಸ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್ ಸೀಸನ್-19ರ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಷ್ಟೇ ಅಲ್ಲದೆ ಸನ್​ರೈಸರ್ಸ್ ಹೈದರಾಬಾದ್ ಪರ ಈ ಬಾರಿ ಕೇವಲ 8 ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು.

ಇದನ್ನೂ ಓದಿ: ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ

ಇತ್ತ ಕಮಿನ್ಸ್ ಅಲಭ್ಯತೆಯ ನಡುವೆ ಮೊದಲ 7 ಪಂದ್ಯಗಳಲ್ಲಿ ಇಶಾನ್ ಕಿಶನ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ತಂಡವನ್ನು ಯಶಸ್ವಿಯಾಗಿಯೇ ಮುನ್ನಡೆಸಿದ್ದರು. ಹೀಗಾಗಿ ಮುಂದಿನ ಸೀಸನ್​ನಲ್ಲಿ ಪ್ಯಾಟ್ ಕಮಿನ್ಸ್ ಅಲಭ್ಯರಾದರೆ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

Source link

Leave a Reply

Your email address will not be published. Required fields are marked *