
ಬುಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬಂದಿರುವ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಪೆದ್ದಿ’ (Peddi Movie) ಜೂನ್ 4ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ. ಜೂನ್ 3ರ ರಾತ್ರಿಯೇ ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇದನ್ನು ವೀಕ್ಷಿಸಿದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಆರಂಭದಲ್ಲಿ ಟೆನ್ನಿಸ್ ಇಷ್ಟಪಟ್ಟಿದ್ದರು, ಎಂ.ಎಸ್. ಧೋನಿ ಕ್ರಿಕೆಟ್‌ಗೆ ಬರುವ ಮುನ್ನ ಫುಟ್‌ಬಾಲ್ ಆಡುತ್ತಿದ್ದರು. ಹಾಗೆಯೇ ನಮ್ಮ ದೇಶದ ಹಲವು ಖ್ಯಾತ ಕ್ರೀಡಾಪಟುಗಳು ತಮ್ಮ ವೃತ್ತಿಜೀವನದಲ್ಲಿ ಇಂತಹ ಬದಲಾವಣೆಗಳನ್ನು ಕಂಡಿದ್ದಾರೆ. ಅದೇ ಮಾದರಿಯಲ್ಲಿ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಒಬ್ಬ ಅಥ್ಲೀಟ್ ಆಗಿ ಕಾಣಿಸಿಕೊಂಡಿದ್ದು, ಅವರ ಕ್ರೀಡಾ ಪಯಣದ ಕಥೆಯನ್ನು ಸಿನಿಮಾ ಒಳಗೊಂಡಿದೆ.
ಎಕ್ಸ್ (ಟ್ವಿಟರ್) ತಾಣದಲ್ಲಿ ಸಿನಿಮಾಗೆ ಬಹುತೇಕ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ರಾಮ್ ಚರಣ್ ಅವರ ನಟನೆ ಮತ್ತು ಇಂಟ್ರೊಡಕ್ಷನ್ ಸೀನ್ ಪ್ರೇಕ್ಷಕರ ಮನಗೆದ್ದಿದೆ. ಇನ್ನು, ಶಿವರಾಜ್‌ಕುಮಾರ್ ಪಾತ್ರವನ್ನು ಜನರು ಕೊಂಡಾಡಿದ್ದಾರೆ.
‘ಚಿತ್ರದ ಮೊದಲಾರ್ಧ ಚೆನ್ನಾಗಿದೆ. ಪ್ರೀ-ಇಂಟರ್ವಲ್‌ನಿಂದ ಹಿಡಿದು ಇಂಟರ್ವಲ್ ಬ್ಲಾಕ್‌ವರೆಗಿನ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರದ ಪ್ರಮುಖ ಹೈಲೈಟ್ ಆಗಿವೆ. ರಾಮ್ ಚರಣ್ ಎಂಟ್ರಿ ಸೀನ್ ಮಾಸ್ ಆಗಿದೆ. ಆದರೆ ನಾಯಕಿ ಮತ್ತು ವಿಲನ್ ಟ್ರ್ಯಾಕ್ ಅಷ್ಟಾಗಿ ಕೆಲಸ ಮಾಡಿಲ್ಲ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಪ್ರೇಕ್ಷಕರು ಚಿತ್ರದ ಹೆಲಿಕಾಪ್ಟರ್ ಶಾಟ್ ಅನ್ನು ಕೊಂಡಾಡಿದ್ದು, ‘ಫ್ಲಡ್ ಲೈಟ್ಸ್ನಲ್ಲಿ ಬರುವ 360 ಡಿಗ್ರಿ ಮತ್ತು ಹೆಲಿಕಾಪ್ಟರ್ ಕ್ರಿಕೆಟಿಂಗ್ ಶಾಟ್‌ಗಳು, ಅದಕ್ಕೆ ಎ.ಆರ್. ರೆಹಮಾನ್ ಕೊಟ್ಟಿರುವ ಬಿಜಿಎಂ ಮತ್ತು ‘ಪೆದ್ದಿ’ ಚಾಂಟ್ಸ್ ಥಿಯೇಟರ್‌ನಲ್ಲಿ ರೋಮಾಂಚನ ಉಂಟುಮಾಡುತ್ತವೆ. ಹಾಡುಗಳ ವಿಶ್ಯುವಲ್ಸ್ ಸೂಪರ್ ಆಗಿದ್ದು, ಎಮೋಷನ್ಸ್ ಜೊತೆ ಬ್ಲಾಕ್‌ಬಸ್ಟರ್ ಆಗಿದೆ’ ಎಂದು ಕೊಂಡಾಡಿದ್ದಾರೆ.
ಮೊದಲಾರ್ಧದಲ್ಲಿ ಜಾನ್ವಿ ಕಪೂರ್ ನಟನೆಗೆ ತೂಕ ಇಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ. ಕೆಲವು ಹಾಡುಗಳನ್ನು ಸುಖಾಸುಮ್ಮನೆ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಶಿವಣ್ಣ ಅವರ ನಟನೆ ಅಭಿಮಾನಿಗಳಿಗೆ ಇಷ್ಟ ಆಗಿದೆ. ರಾಮ್ ಚರಣ್ ನಟನೆ ಬೇರೆಯದೇ ಹಂತದಲ್ಲಿ ಇದೆ ಎಂದು ಅನೇಕರು ಹೇಳಿದ್ದಾರೆ. ಸಿನಿಮಾಟೋಗ್ರಫಿ ಹಾಗೂ ಎಆರ್ ರೆಹಮಾನ್ ಮ್ಯೂಸಿಕ್ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಇದೆ.
ಇದನ್ನೂ ಓದಿ: ತಮಿಳಿನಲ್ಲಿ ಶಿವರಾಜ್‌ಕುಮಾರ್ 4ನೇ ಸಿನಿಮಾಗೆ ಮುಹೂರ್ತ; ಭರ್ಜರಿ ಡಿಮ್ಯಾಂಡ್
ಶಿವರಾಜ್‌ಕುಮಾರ್, ಜಾನ್ವಿ ಕಪೂರ್ , ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಬುಚಿ ಬಾಬು ಸನಾ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.