ಜಸ್ಟ್‌ ಐಸ್‌ಕ್ಯೂಬ್‌ನಿಂದ ಟಾಯ್ಲೆಟ್‌ ಕಲೆ, ವಾಸನೆಯನ್ನು ಹೋಗಲಾಡಿಸಬಹುದು; ಅದು ಹೇಗೆ ಗೊತ್ತಾ? – Kannada News

ಮನೆಯ ವಾತಾವರಣ ಆರೋಗ್ಯಕರವಾಗಿರಬೇಕೆಂದರೆ ಬಾತ್‌ರೂಮ್‌ ಮತ್ತು ಟಾಯ್ಲೆಟ್‌ ತುಂಬಾನೇ ಕ್ಲೀನ್‌ ಆಗಿರಬೇಕು. ಅದರಲ್ಲೂ ಶೌಚಾಲಯದ (toilet) ನೈರ್ಮಲ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು ಇಲ್ಲದಿದ್ದರೆ ರೋಗಾಣುಗಳು ಹರಡುವ ಸಾಧ್ಯತೆ ಇರುತ್ತದೆ. ಇದಕ್ಕಾಗಿಯೇ ಪ್ರತಿಯೊಬ್ಬರೂ ಪ್ರತಿನಿತ್ಯ ಶೌಚಾಲಯವನ್ನು ಕ್ಲೀನ್‌ ಮಾಡುತ್ತಾರೆ. ಟಾಯ್ಲೆಟ್‌ ಅನ್ನು ನಿತ್ಯ ಕ್ಲೀನ್‌ ಮಾಡಿದರೂ, ದುಬಾರಿ ಕ್ಲೀನರ್‌ಗಳನ್ನು ಬಳಸಿ ತಿಕ್ಕಿ ತೊಳೆದರೂ ಹಳದಿ ಕಲೆ, ವಾಸನೆ ಹೋಗೋದೆ ಇಲ್ಲ. ಹೀಗಿರುವಾಗ ಶೌಚಾಲಯವನ್ನು ಐಸ್ ಕ್ಯೂಬ್‌ಗಳಿಂದ ಬಹಳ ಸುಲಭವಾಗಿ ಸ್ವಚ್ಛಗೊಳಿಸಬಹುದು. ಈ ಐಸ್‌ಕ್ಯೂಬ್‌ ಟ್ರಿಕ್ಸ್‌ ಟಾಯ್ಲೆಟ್‌ನ ಕಲೆ, ವಾಸನೆಯನ್ನು ತೆಗೆದುಹಾಕಲು ಹೇಗೆ ಸಹಕಾರಿ ಎಂಬುದನ್ನು ನೋಡೋಣ ಬನ್ನಿ.

ಟಾಯ್ಲೆಟ್‌ ಸ್ವಚ್ಛಗೊಳಿಸಲು ಐಸ್‌ಕ್ಯೂಬ್‌ ಹೇಗೆ ಸಹಕಾರಿ?

ಈ ಟ್ರಿಕ್ ಶೌಚಾಲಯ ಸ್ವಚ್ಛಗೊಳಿಸುವಿಕೆಯನ್ನು ಸುಲಭಗೊಳಿಸುವುದಲ್ಲದೆ ನಿಮ್ಮ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಐಸ್ ಕ್ಯೂಬ್‌ ಶೌಚಾಲಯದ ಮೇಲ್ಮೈಯಿಂದ ಕೊಳಕು ಮತ್ತು ವಾಸನೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತವೆ. ಶೀತ ತಾಪಮಾನವು ಪೈಪ್‌ಗಳು ಮತ್ತು ಕಮೋಡ್‌ಗಳಲ್ಲಿ ಸಂಗ್ರಹವಾದ ಕೊಳೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತವೆ.  ಐಸ್‌ಗೆ ಸ್ವಲ್ಪ ಅಡಿಗೆ ಸೋಡಾ ಅಥವಾ ನಿಂಬೆ ರಸವನ್ನು ಸೇರಿಸುವುದರಿಂದ ಶುಚಿಗೊಳಿಸುವಿಕೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

ಟಾಯ್ಲೆಟ್‌ ಕ್ಲೀನ್‌ ಮಾಡಲು ಐಸ್‌ ಕ್ಯೂಬ್‌ ಅನ್ನು ಬಳಸುವುದೇಗೆ?

ಮೊದಲು, ಸಣ್ಣ ಗಾತ್ರದ ಸುಮಾರು 2 ಕಪ್ ಐಸ್ ಕ್ಯೂಬ್‌ಗಳನ್ನು ತೆಗೆದುಕೊಂಡು ಅವುಗಳನ್ನು ನೇರವಾಗಿ ಟಾಯ್ಲೆಟ್ ಬೌಲ್‌ಗೆ ಸುರಿಯಿರಿ. ನಂತರ, ಟಾಯ್ಲೆಟ್ ಕ್ಲೀನರ್, ಅಡುಗೆ ಸೋಡಾ, ನಿಂಬೆ ರಸ ಅಥವಾ ಬಿಳಿ ವಿನೆಗರ್ ಅನ್ನು ಮೇಲೆ ಸುರಿಯಿರಿ ಮತ್ತು ಅದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಂತಿಮವಾಗಿ ಟಾಯ್ಲೆಟ್‌ ಅನ್ನು ನಿಧಾನವಾಗಿ ಬ್ರಷ್ ಮಾಡಿ ಮತ್ತು ಫ್ಲಶ್ ಮಾಡಿ. ಈ ರೀತಿ ಮಾಡುವುದರಿಂದ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಟಾಯ್ಲೆಟ್‌ ಕಲೆ ಮತ್ತು ವಾಸನೆಯನ್ನು ಹೋಗಲಾಡಿಸಬಹುದು.

ಇದನ್ನೂ ಓದಿ: ವಸ್ತುಗಳನ್ನು ಗ್ಯಾಸ್‌ ಒಲೆ ಪಕ್ಕ ಇಡಲೇಬೇಡಿ; ಯಾಕೆ ಗೊತ್ತಾ?

ಈ ತಂತ್ರವು ಶೌಚಾಲಯದಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ ಮತ್ತು ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಐಸ್‌ಕ್ಯೂಬ್ ನೈಸರ್ಗಿಕ ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ನೀವು ಫ್ಲಶ್ ಮಾಡಿದಾಗ, ಐಸ್ ಕ್ಯೂಬ್‌ಗಳು ನೀರಿನೊಂದಿಗೆ ವೇಗವಾಗಿ ಚಲಿಸುತ್ತವೆ. ಇದು ಶೌಚಾಲಯದ ಮೇಲ್ಮೈಯಲ್ಲಿರುವ ಕೊಳಕು, ಪಾಚಿ ತೆಗೆದು ಹಾಕುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *