ಚೆಸ್ ಚಾಂಪಿಯನ್ ಪ್ರಜ್ಞಾನಂದ ಜೊತೆ ಚೆಸ್ ಆಡಿ 50 ಲಕ್ಷ ರೂ. ಕೊಟ್ಟ ವಿಜಯ್ – Kannada News

ನಟ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಭಾರತದ ಚೆಸ್ ಮಾಸ್ಟರ್ ಆರ್​. ಪ್ರಜ್ಞಾನಂದ ಅವರನ್ನು  (Praggnanandhaa) ಸನ್ಮಾನಿಸಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಕೂಡ ನೀಡಿದ್ದಾರೆ. ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಅವರಿಗೆ ಈ ಗೌರವ ಸಿಕ್ಕಿದೆ. ವಿಶೇಷ ಎಂದರೆ ವಿಜಯ್ ಅವರು ಪ್ರಜ್ಞಾನಂದ ಜೊತೆ ಚೆಸ್ ಕೂಡ ಆಡಿದ್ದಾರೆ.

ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ ವಿಷಯವನ್ನು ಪ್ರಜ್ಞಾನಂದ ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ‘ನನಗೆ ಚೆಸ್ ಬೋರ್ಡ್ ಜೊತೆ ಬರಲು ಹೇಳಲಾಗಿತ್ತು. ನಾನು ಸಿಎಂ ಜೊತೆ ಚೆಸ್ ಆಡಿದೆ. ಅವರು ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. 15 ನಿಮಿಷಗಳ ಕಾಲ ಚೆಸ್ ಆಡಿದೆವು. ಗೆದ್ದಿದ್ದು ನಾನೇ. ಅವರು ತುಂಬಾನೇ ಪ್ರೋತ್ಸಾಹದಾಯಕವಾಗಿದ್ದಾರೆ’ ಎಂದಿದ್ದಾರೆ ವಿಜಯ್.

ಇದನ್ನೂ ಓದಿ: ನಾರ್ವೆಯಲ್ಲಿ ಹೊಸ ಇತಿಹಾಸ ಬರೆದ ಆರ್ ಪ್ರಜ್ಞಾನಂದ

ತಮಿಳುನಾಡು ಸಿಎಂ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದೆ. ‘ತಮಿಳುನಾಡು ಸಿಎಂ ವಿಜಯ್ ಅವರು 50 ಲಕ್ಷ ರೂಪಾಯಿ ಹಣವನ್ನು ಪ್ರಜ್ಞಾನಂದಗೆ ನೀಡಿದ್ದಾರೆ. ನಾರ್ವೆ ಚೆಸ್ 2026 ಅಲ್ಲಿ ಈ ಸಾಧನೆ ಮಾಡಿ ಇತಿಹಾಸ ಬರೆದಿರುವುದರಿಂದ ಈ ಗೌರವ ನೀಡಲಾಗಿದೆ’ ಎಂದು ಬರೆದುಕೊಂಡಿದೆ.

ಕಳೆದ ವಾರ ನಡೆದ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಅಂತಿಮ ಸುತ್ತಿನ ರೋಚಕ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಪ್ರಜ್ಞಾನಂದ ಭರ್ಜರಿ ಜಯ ಸಾಧಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:42 pm, Mon, 8 June 26

Source link

Leave a Reply

Your email address will not be published. Required fields are marked *