ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್ – Kannada News

ವಾಷಿಂಗ್ಟನ್, ಜೂನ್ 9: ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸುತ್ತಿದೆ. ಕದನವಿರಾಮ ಘೋಷಣೆಗೆ ಟ್ರಂಪ್ (Donald Trump) ಕರೆ ನೀಡುತ್ತಲೇ ಇದ್ದಾರೆ. ಈ ನಡುವೆ ಅತ್ಯಂತ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಸೇನೆಗೆ ಸೇರಿದ ಅತ್ಯಾಧುನಿಕ ಅಪಾಚೆ (AH-64 Apache) ಯುದ್ಧ ಹೆಲಿಕಾಪ್ಟರ್ ಪತನಗೊಂಡಿದೆ. ಈ ಹೆಲಿಕಾಪ್ಟರ್ ಅನ್ನು ಇರಾನ್ ಪಡೆಗಳೇ ಹೊಡೆದುರುಳಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಆರೋಪಿಸಿದ್ದು, ಈ ದಾಳಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಅಮೆರಿಕದ ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದಾರೆ.

“ನಿನ್ನೆ ರಾತ್ರಿ ಹಾರ್ಮುಜ್ ಜಲಸಂಧಿಯ ಮೇಲೆ ಗಸ್ತು ತಿರುಗುತ್ತಿದ್ದಾಗ ಇರಾನಿಯನ್ನರು ನಮ್ಮ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳಲ್ಲಿ ಒಂದನ್ನು ಹೊಡೆದುರುಳಿಸಿದ್ದಾರೆ ಎಂದು ನಮ್ಮ ಗ್ರೇಟ್ ಮಿಲಿಟರಿಯಿಂದ ನನಗೆ ತಿಳಿಸಲಾಗಿದೆ. ಇಬ್ಬರು ಪೈಲಟ್‌ಗಳು ಕೂಡ ಸುರಕ್ಷಿತರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಅಮೆರಿಕ ಈ ದಾಳಿಗೆ ಖಂಡಿತ ಪ್ರತೀಕಾರ ತೀರಿಸಿಕೊಳ್ಳಲುತ್ತದೆ” ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಇರಾನ್​ನಲ್ಲಿನ ಭಾರತೀಯರು ತಕ್ಷಣ ದೇಶ ಬಿಟ್ಟು ಹೊರಡಿ; ಭಾರತ ಆದೇಶ

ಇತಿಹಾಸದಲ್ಲೇ ಮೊದಲ ಬಾರಿಗೆ ‘ಸೀ ಡ್ರೋನ್’ ಮೂಲಕ ಪೈಲಟ್‌ಗಳ ರಕ್ಷಣೆ ಮಾಡಲಾಗಿದೆ ಎಂದು ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್ (CENTCOM) ಮಾಹಿತಿಯನ್ನು ನೀಡಿದೆ. ಹೆಲಿಕಾಪ್ಟರ್ ಪತನಗೊಂಡ ಕೇವಲ 2 ಗಂಟೆಗಳ ಒಳಗೆ ಇಬ್ಬರೂ ಪೈಲಟ್‌ಗಳನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಬಹ್ರೇನ್‌ನಲ್ಲಿರುವ ಯುಎಸ್ ಫಿಫ್ತ್ ಫ್ಲೀಟ್‌ನ ‘ಟಾಸ್ಕ್ ಫೋರ್ಸ್ 59’ ವಿಭಾಗಕ್ಕೆ ಸೇರಿದ ಮಾನವರಹಿತ ಸ್ವಯಂಚಾಲಿತ ಸಮುದ್ರ ಡ್ರೋನ್ ಒಂದನ್ನು ಬಳಸಿ ಪೈಲಟ್‌ಗಳನ್ನು ನೀರಿನಿಂದ ರಕ್ಷಿಸಲಾಗಿದೆ.

ಅಮೆರಿಕದ ಮಿಲಿಟರಿ ಇತಿಹಾಸದಲ್ಲೇ ಸಮುದ್ರದಲ್ಲಿ ನಡೆದ ಅಪಘಾತವೊಂದರಲ್ಲಿ ಪೈಲಟ್‌ಗಳನ್ನು ರಕ್ಷಿಸಲು ಇಂತಹ ಸೀ ಡ್ರೋನ್ ಬಳಸಿರುವುದು ಇದೇ ಮೊದಲು ಎನ್ನಲಾಗಿದೆ. ಸದ್ಯ ಇಬ್ಬರೂ ಸೈನಿಕರು ಆರೋಗ್ಯವಾಗಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕೇವಲ ಒಂದು ದಿನದ ಹಿಂದೆಯಷ್ಟೇ ಅತ್ಯಂತ ಸೂಕ್ಷ್ಮವಾದ ಕದನ ವಿರಾಮವನ್ನು ಜಾರಿಗೆ ತರಲಾಗಿತ್ತು. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡುವ ಅಂತಿಮ ಹಂತದಲ್ಲಿ ಈ ಘಟನೆ ನಡೆದಿರುವುದು ಜಾಗತಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ

ಒಂದೆಡೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ರಾಜತಾಂತ್ರಿಕ ಒಪ್ಪಂದಕ್ಕೆ ಒತ್ತು ನೀಡುತ್ತಿದ್ದರೆ, ಮತ್ತೊಂದೆಡೆ ಅಮೆರಿಕದ ಹೆಲಿಕಾಪ್ಟರ್ ಮೇಲಿನ ದಾಳಿಯು ಈ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ಮುರಿದುಬೀಳುವಂತೆ ಮಾಡುವ ಸಾಧ್ಯತೆ ಇದೆ. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನಗೊಂಡಿದೆಯೇ ಅಥವಾ ನಿಜವಾಗಿಯೂ ಇರಾನ್ ಕ್ಷಿಪಣಿ ದಾಳಿ ನಡೆಸಿದೆಯೇ ಎಂಬುದರ ಕುರಿತು ಅಮೆರಿಕ ರಕ್ಷಣಾ ಇಲಾಖೆ ತನಿಖೆ ನಡೆಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *