ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ, ಕೆಲಸದ ಹೊರೆ ಮತ್ತು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆಯಿಂದಾಗಿ ಹೆಚ್ಚಿನವರು ನಿದ್ರಾಹಿನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳಪೆ ಗುಣಮಟ್ಟದ ನಿದ್ರೆಯು (sleep) ಹಲವು ಆರೋಗ್ಯ ಸಮಸ್ಯೆಗಲು ಕಾರಣವಾಗುತ್ತದೆ. ಹೀಗಿರುವಾಗ ನೀವು ಕೂಡ ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೈಸರ್ಗಿಕವಾಗಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಈ ಒಂದಷ್ಟು ಗಿಡಗಳನ್ನು ಬೆಡ್‌ರೂಮ್‌ನಲ್ಲಿ ಇಡಿ. ಈ ಸಸ್ಯಗಳ ಸುವಾಸನೆ ಮತ್ತು ಅವು ಸುತ್ತಮುತ್ತಲಿನ ಪ್ರದೇಶಗಳಿಗೆ ನೀಡುವ ತಾಜಾತನವು ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾದ ಆ ಗಿಡಗಳು ಯಾವುದೆಂದು ನೋಡೋಣ ಬನ್ನಿ.
ಉತ್ತಮ ನಿದ್ರೆಗಾಗಿ ಬೆಡ್‌ರೂಮ್‌ನಲ್ಲಿ ಈ ಗಿಡಗಳನ್ನಿಡಿ:
ಮಲ್ಲಿಗೆ ಗಿಡ: ಉತ್ತಮ ನಿದ್ರೆಯನ್ನು ಪಡೆಯಲು ಬಯಸಿದರೆ ನಿವು ಮಲ್ಲಿಗೆ ಗಿಡವನ್ನು ಬೆಡ್‌ರೂಮ್‌ನಲ್ಲಿ ಇಡಬಹುದು. ಮಲ್ಲಿಗೆಯ ಸುವಾಸನೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ, ಮಲ್ಲಿಗೆಯ ಸುವಾಸನೆಯು ಕೋಣೆಯಾದ್ಯಂತ ಹರಡುತ್ತದೆ ಮತ್ತು ನೀವು ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ. ಈ ಗಿಡವನ್ನು ಮಲಗುವ ಕೋಣೆಯ ಕಿಟಕಿಯ ಬಳಿ ಇಡುವುದು ಉತ್ತಮ.
ಲ್ಯಾವೆಂಡರ್ ಗಿಡ: ಲ್ಯಾವೆಂಡರ್‌ನ ಪರಿಮಳವು ದೇಹವನ್ನು ವಿಶ್ರಾಂತಿ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಲ್ಯಾವೆಂಡರ್ ಅನ್ನು ನಿದ್ರೆಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿ ಶಿಫಾರಸು ಮಾಡಲಾಗುತ್ತದೆ. ನಿಮ್ಮ ಹಾಸಿಗೆಯ ಬಳಿ ಮೇಜಿನ ಮೇಲೆ ಸಣ್ಣ ಲ್ಯಾವೆಂಡರ್ ಸಸ್ಯವನ್ನು ಇರಿಸಿದರೆ, ಅದರ ಸುವಾಸನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಈ ಗಿಡಗಳನ್ನು ನೆಡುವುದು ಉತ್ತಮ
ರೋಸ್ಮರಿ ಗಿಡ: ರೋಸ್ಮರಿ ವಿಶಿಷ್ಟ ಪರಿಮಳದಿಂದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುವ ಸಸ್ಯವಾಗಿದೆ. ಇದು ಮಲಗುವ ಕೋಣೆಯಲ್ಲಿ ಇಡಲು ಸೂಕ್ತವಾದ ಸಸ್ಯವಾಗಿದೆ. ಇದಕ್ಕೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ರಾತ್ರಿಯಲ್ಲಿ ರೋಸ್ಮರಿಯ ಪರಿಮಳವು ನಿಮಗೆ ಶಾಂತಿಯುತವಾಗಿ ಮಲಗಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಬೆಳಿಗ್ಗೆ ಉಲ್ಲಾಸದಿಂದ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ.
ಅಲೋ ವೆರಾ: ಅಲೋವೆರಾ ಗಿಡಗಳು ಚಿಕ್ಕದಾಗಿರುತ್ತವೆ ಮತ್ತು ನಿಮ್ಮ ಕೋಣೆಯ ಯಾವುದೇ ಮೂಲೆಯಲ್ಲಿ ಸುಲಭವಾಗಿ ಇಡಬಹುದು. ಅಲೋವೆರಾ ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುವುದರಿಂದ ಅವುಗಳನ್ನು ಬೆಡ್‌ರೂಮ್‌ನಲ್ಲಿ ಇಡುವುದರಿಂದ ನೀವು ಚೆನ್ನಾಗಿ ನಿದ್ರೆ ಮಾಡಬಹುದು, ಇದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:17 pm, Wed, 10 June 26