ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡ ನಾಯಕ ಇಮ್ರಾನ್ ಮಿರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ವೈಭವ್ ಸೂರ್ಯವಂಶಿ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವೈಭವ್ ಸೂರ್ಯವಂಶಿ ಬ್ಯಾಕ್ ಟು ಬ್ಯಾಕ್ ಫೋರ್ಗಳನ್ನು ಬಾರಿಸುವ ಮೂಲಕ ಗಮನ ಸೆಳೆದರು. ಯುವ ದಾಂಡಿಗನ ಈ ಅಬ್ಬರದೊಂದಿಗೆ ಟೀಮ್ ಇಂಡಿಯಾ ಮೊದಲ 7 ಓವರ್ಗಳಲ್ಲಿ 74 ರನ್ ಕಲೆಹಾಕಿತು.
ಆದರೆ 8ನೇ ಓವರ್ನ ಮೊದಲ ಎಸೆತವನ್ನು ಅಪ್ಪರ್ ಕಟ್ ಮಾಡಿ ಮೈದಾನದ ಹೊರಗೆ ಅಟ್ಟುಲು ಯತ್ನಿಸಿದ ವೈಭವ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಇದರೊಂದಿಗೆ ವೈಭವ್ ಸೂರ್ಯವಂಶಿಯ ಸ್ಫೋಟಕ ಇನಿಂಗ್ಸ್ ಅಂತ್ಯಗೊಂಡಿತು.
200ರ ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ ವೈಭವ್:
ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 44 ರನ್ ಕಲೆಹಾಕಿದರು. ಇದರ ನಡುವೆ 9 ಭರ್ಜರಿ ಫೋರ್ಗಳನ್ನು ಬಾರಿಸಿದ್ದರು.
ಆದರೆ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 6 ರನ್ಗಳಿಂದ ಭಾರತ ಎ ಪರ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡರು.
ಇನ್ನು ವೈಭವ್ ಸೂರ್ಯವಂಶಿ ಔಟಾದ ಬಳಿಕ ಬಂದ ಪ್ರಿಯಾಂಶ್ ಆರ್ಯ ಕೇವಲ 8 ರನ್ಗಳಿಸಿ ಔಟಾಗಿದ್ದಾರೆ. ಇದೀಗ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಮುಂದುವರೆಸಿದ್ದು, 12 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ.
ಭಾರತ ಎ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ ,ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ಪ್ರಿಯಾಂಶ್ ಆರ್ಯ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ಅರ್ಷದ್ ಖಾನ್, ವಿಪ್ರಾಜ್ ನಿಗಮ್, ಅನ್ಕುಲ್ ರಾಯ್, ಅನ್ಶುಲ್ ಕಂಬೋಜ್.
ಇದನ್ನೂ ಓದಿ: ಒಲಿಂಪಿಕ್ಸ್ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ!
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ಇಮ್ರಾನ್ ಮೀರ್ (ನಾಯಕ), ಹಸನ್ ಐಸಾಖಿಲ್, ಖಾಲಿದ್ ತನಿವಾಲ್ , ಇಜಾಝ್ ಅಹ್ಮದ್ ,
ಬಹೀರ್ ಶಾ , ಇಶಾಕ್ ರಹೀಮಿ (ವಿಕೆಟ್ ಕೀಪರ್) , ಖಲೀಲ್ ಗುರ್ಬಾಝ್ , ಝಹೀರ್ ಖಾನ್ , ಅಬ್ದುಲ್ಲಾ ಅಹ್ಮದ್ಝಾಹಿ, ಮೊಹಮ್ಮದ್ ಇಬ್ರಾಹಿಂ , ಫರ್ಮಾನುಲ್ಲಾ ಸಫಿ.