ಸಾಮಾನ್ಯವಾಗಿ ನಾವು ದಿನನಿತ್ಯ ಬಳಸುವ ವಸ್ತುಗಳ ಬಗ್ಗೆ ಅಷ್ಟಾಗಿ ಯೋಚನೆ ಮಾಡಲ್ಲ. ಹೌದು, ಪ್ರತಿದಿನ ಬಳಸುವ ಸಾಮಾನ್ಯ ವಸ್ತುಗಳಲ್ಲಿ ಈ ನೀರಿನ ಬಾಟಲಿ (water bottle) ಕೂಡ ಒಂದು. ಪ್ರಯಾಣದ ವೇಳೆ ಖರೀದಿ ಮಾಡುವ ಈ ನೀರಿನ ಬಾಟಲಿಯ ಕ್ಯಾಪ್ ಬಣ್ಣವು ಹೆಚ್ಚಾಗಿ ನೀಲಿಯಾಗಿರುತ್ತದೆ. ಆದರೆ ಇನ್ನು ಕೆಲವು ಬಾಟಲಿ ಮುಚ್ಚಳವು ಬಿಳಿ, ಕಪ್ಪು, ಹಸಿರು, ಹಳದಿ ಹೀಗೆ ವಿವಿಧ ಬಣ್ಣದಲ್ಲಿರುವುದನ್ನು ನೀವು ನೋಡಿರುತ್ತೀರಿ. ಬಾಟಲಿ ಮುಚ್ಚಳಗಳು ಬೇರೆ ಬೇರೆ ಬಣ್ಣದಲ್ಲಿರುವುದು ಯಾಕೆ ಎನ್ನುವುದಕ್ಕೆ ಕಾರಣವೂ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬಳು ಇದರ ಹಿಂದಿನ ಕಾರಣವನ್ನು ವಿವರಿಸಿದ್ದಾಳೆ.
ಲರ್ನ್ ವಿಥ್‌ಪಿಕೆ (Learnwithpk) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಹಿಳೆ ನೀರಿನ ಬಾಟಲಿ ಮುಚ್ಚಳದ ಬಣ್ಣಗಳ ಹಿಂದಿನ ಕಾರಣವನ್ನು ವಿವರಿಸುವುದನ್ನು ಕಾಣಬಹುದು. ನೀಲಿ ಮುಚ್ಚಳಗಳು ನೈಸರ್ಗಿಕ ಖನಿಜಯುಕ್ತ ನೀರು, ಬಿಳಿ ಕ್ಯಾಪ್ ಗಳು ಶುದ್ಧೀಕರಿಸಿದ ನೀರು, ಹಸಿರು ಖನಿಜಯುಕ್ತ ಅಥವಾ ಸುವಾಸನೆಯನ್ನು ಹೊಂದಿರುವ ನೀರು, ಕಪ್ಪು ಮುಚ್ಚಳ ಕ್ಷಾರೀಯ ನೀರು, ಹಳದಿ ಕ್ಯಾಪ್ ಗಳು ಜೀವಸತ್ವಗಳು ಹಾಗೂ ವಿಟಮಿನ್ ನಿಂದ ಸಮೃದ್ಧವಾಗಿರುವ ನೀರು ಹಾಗೂ ಕೆಂಪು ಮುಚ್ಚಳ ಎಲೆಕ್ಟ್ರೋಲೈಟ್ಸ್ ಭರಿತ ನೀರು ಎಂದು ಹೇಳಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಟೆರೇಸ್‌ನಲ್ಲಿ ಟಾಟಾ ಸುಮೋ ಕಾರಿನಂತೆ ಕಾಣುವ ವಾಟರ್ ಟ್ಯಾಂಕ್ ನಿರ್ಮಿಸಿದ ಮನೆ ಮಾಲೀಕ
ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಧನ್ಯವಾದಗಳು ಎಂದರೆ, ಇನ್ನೊಬ್ಬರು ಉಪಯುಕ್ತ ಮಾಹಿತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಮಾಹಿತಿ ತಿಳಿದೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ