ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: hindustantimes.com
ಆಪ್ಟಿಕಲ್ ಇಲ್ಯೂಷನ್ನಂತಹ (optical illusion) ಈ ಒಗಟಿನ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೆಚ್ಚಿನವರು ಈ ಒಗಟು ಬಿಡಿಸಲು ಸಾಧ್ಯವಿಲ್ಲ ಎಂದು ಸೋಲನ್ನು ಒಪ್ಪಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಕಳ್ಳ ಬೆಕ್ಕೊಂದು ಅಡಗಿ ಕುಳಿತಿದೆ. 15 ಸೆಕೆಂಡುಗಳಲ್ಲಿ ಈ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ ನಿಮ್ಮ ಟೈಮ್ ಈಗಲೇ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನು ಕಾಣಿಸಿತು?
ಒಗಟಿನ ಆಟಗಳು ಮನೋರಂಜನೆಯನ್ನು ನೀಡುತ್ತದೆಯೋ ಹಾಗೆ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಚಿತ್ರವು ಡ್ರೈವ್ವೇಯಲ್ಲಿ ನಿಲ್ಲಿಸಿರುವ ಹೊಳಪುಳ್ಳ ಕಪ್ಪು ಬಣ್ಣದ ಎಸ್ ಯುವಿಯನ್ನು ಕಾಣಬಹುದು. ಅದರ ಸುತ್ತಲೂ ಅಂದಗೊಳಿಸಲಾದ ಹಸಿರು ಹುಲ್ಲುಹಾಸು, ಹಚ್ಚ ಹಸಿರಿನ ಮರಗಳು ಇವೆ. ಚಿತ್ರದ ಮುಂಭಾಗದಲ್ಲಿರುವ ಗೋಡೆಯ ಪಕ್ಕದಲ್ಲಿ ಹೂವಿನ ಕುಂಡ ಇರಿಸಲಾಗಿದೆ. ಈ ಕುಂಡದಲ್ಲಿ ವಿಶಿಷ್ಟವಾದ ಬಿಳಿ ಹೂವುಗಳನ್ನು ಹೊಂದಿರುವ ರೋಮಾಂಚಕ ಸಸ್ಯವಿದೆ. ಇಲ್ಲಿ ಕಳ್ಳ ಬೆಕ್ಕೊಂದು ಮರೆ ಮಾಡಿ ಕುಳಿತುಕೊಂಡಿದೆ. ಹದಿನೈದು ಸೆಕೆಂಡುಗಳೊಳಗೆ ಈ ಸಾಕು ಪ್ರಾಣಿಯನ್ನು ಹುಡುಕಲು ಪ್ರಯತ್ನಿಸಿ.
ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಪ್ರಶ್ನೆಯಲ್ಲೇ ಅಡಗಿರುವ ಉತ್ತರವನ್ನು ಹೇಳಬಲ್ಲಿರಾ?
ನಿಮ್ಮ ಕಣ್ಣಿಗೆ ಕಳ್ಳ ಬೆಕ್ಕು ಕಾಣಿಸಿತೇ?
ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ನೀವು ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೀರಾ ಎಂದಾದ್ರೆ ನಿಮ್ಮದು ಹದ್ದಿನ ಕಣ್ಣು ಎಂದರ್ಥ. ಈ ಸಾಕು ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಕಾರಿನ ಪಕ್ಕದಲ್ಲಿ ಬೆಕ್ಕು ಕುಳಿತುಕೊಂಡಿದೆ. ಈ ಕೆಳಗಿನ ಚಿತ್ರದಲ್ಲಿ ಕಪ್ಪು ಬಣ್ಣದ ಬೆಕ್ಕನ್ನು ಗುರುತಿಸಿರುವುದನ್ನು ನೀವು ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ