RTO ಕಚೇರಿ ಸಿಬ್ಬಂದಿಗೆ ಲೋಕಾಯುಕ್ತ ಶಾಕ್Image Credit source: Tv9 Kannada
ರಾಮನಗರ, ಜೂನ್ 12: ಬೆಂಗಳೂರು ದಕ್ಷಿಣ ಜಿಲ್ಲಾ RTO ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ರೇಡ್ ನಡೆದಿದೆ. ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, RTO ಕಚೇರಿಯಲ್ಲಿ ಅಧಿಕಾರಿಗಳು ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ 3ನೇ ಬಾರಿ ನಡೆದ ಲೋಕಾಯುಕ್ತ ದಾಳಿ ಇದಾಗಿದೆ.
ಮುಖ್ಯಾಂಶಗಳು
- ಬೆಂಗಳೂರು ದಕ್ಷಿಣ ಜಿಲ್ಲಾ RTO ಕಚೇರಿ ಸಿಬ್ಬಂದಿಗೆ ಲೋಕಾಯುಕ್ತ ಶಾಕ್
- ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ಕಚೇರಿ ಮೇಲೆ ದಾಳಿ
- ಒಂದು ವರ್ಷದ ಅವಧಿಯಲ್ಲಿ 3ನೇ ಬಾರಿ ನಡೆದ ಲೋಕಾಯುಕ್ತ ದಾಳಿ
ತಾಯಿಯ ಬದಲು ಮಗಳು ಕೆಲಸ!
ಇನ್ನು ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಆರ್ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳು ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 3 ತಿಂಗಳು ಕಳೆದರೂ ಸ್ಮಾರ್ಟ್ ಕಾರ್ಡ್ ವಿತರಿಸದೇ ಕಚೇರಿಯಲ್ಲೇ ಶೇಖರಣೆ ಮಾಡಿರುವುದು ಗೊತ್ತಾಗಿದೆ. ಏಜೆಂಟ್ಗಳ ಮೂಲಕ ಬಂದರೇ ಮಾತ್ರ RTO ಕಚೇರಿಯಲ್ಲಿ ಕೆಲಸ ನಡೆಯುತ್ತೆ ಎಂಬ ಆರೋಪವೂ ಇದ್ದು, ಏಜೆಂಟ್ಗಳ ನಡುಗೆ ಹೊಡೆದಾಟ ನಡೆದರೂ ಪ್ರಾದೇಶಿಕ ಸಾರಿಗೆ ಆಯುಕ್ತರು ದೂರು ನೀಡಿಲ್ಲ. ಕಚೇರಿಯಲ್ಲಿ ಗುತ್ತಿಗೆ ನೌಕರರ ದರ್ಬಾರ್ ನಡೆಯುತ್ತಿದ್ದು, ಎಸ್ಪಿ ಸ್ನೇಹಾ ಪ್ರಶ್ನೆಗಳಿಗೆ ಆರ್ಟಿಒ ಟಿ.ಎ.ಸತೀಶ್ ಬಾಬು ತಬ್ಬಿಬ್ಬಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು-ಚನ್ನಪಟ್ಟಣ ನಡುವೆ BMTC ಎಸಿ ಬಸ್; ಎಲ್ಲೆಲ್ಲಿ ಸ್ಟಾಪ್? ಟಿಕೆಟ್ ದರ ಎಷ್ಟು ಗೊತ್ತಾ?
ಹಾವೇರಿಯಲ್ಲೂ ಲೋಕಾಯುಕ್ತ ರೆಡ್
ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಗಳ ಮೇಲೆ ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ರಾಣೇಬೆನ್ನೂರು ತಾಲ್ಲೂಕಿನ ನಿಟಪಳ್ಳಿ, ಚಂದಾಪುರ, ಬೆಲೂರು , ಐರಣಿ ಹರನಗಿರಿ, ಕೋಟಿಹಾಳ ಮತ್ತು ಚಿಕ್ಕಕುರವತ್ತಿ ಗ್ರಾಮದ ಬಳಿ ಸೇರಿ ಒಟ್ಟು 8 ಸ್ಥಳಗಳಲ್ಲಿ ಏಕಕಾಲಕ್ಕೆ ರೇಡ್ ನಡೆದಿದೆ. ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಮಧುಸೂದನ್ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಸುಮಾರು 12,779 ಮೆಟ್ರಿಕ್ ಟನ್ ಮರಳು, 2 ಜೆಸಿಬಿ ಹಾಗೂ 4 ತೆಪ್ಪಗಳನ್ನ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:08 pm, Fri, 12 June 26