Headlines

ವಿರಸ ಮರೆತು ಪತಿ ವಿಜಯ್ ಜೊತೆ ಒಂದಾಗ್ತಾರೆ ಸಂಗೀತಾ? ಹಬ್ಬಿದೆ ವದಂತಿ – Kannada News | Thalapathy Vijay: Sangeetha Reunion Hopes Amidst Divorce Buzz and Political Success

ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (Vijay) ಇತ್ತೀಚೆಗಷ್ಟೇ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ರಾಜಕೀಯದಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಸಿಎಂ ವಿಜಯ್ ಅವರ ವೈಯಕ್ತಿಕ ಜೀವನ ಮಾತ್ರ ಚರ್ಚೆಯಲ್ಲಿದೆ. ಅವರು ಪತ್ನಿಯಿಂದ ದೂರ ಆಗುತ್ತಿದ್ದಾರೆ. ಹೀಗಿರುವಾಗಲೇ ಪತ್ನಿ ಜೊತೆ ಅವರು ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿವೆ.ಆದರೆ, ಇದು ವದಂತಿ ಅಲ್ಲ ಎಂದು ಸಾಬೀತು ಮಾಡಲು ಯಾವುದೇ ಬಲವಾದ ಸಾಕ್ಷಿಗಳು ಸಿಗುತ್ತಿಲ್ಲ.

ವಿಜಯ್ ಮತ್ತು ಅವರ ಪತ್ನಿ ಸಂಗೀತ ಅವರ ವಿಚ್ಛೇದನ ಪ್ರಕರಣದ ವಿಚಾರಣೆ ಜೂನ್ 15ರಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಲಿದೆ. ಇಡೀ ತಮಿಳುನಾಡು ಹಾಗೂ ಚಿತ್ರರಂಗದ ಕಣ್ಣು ಈ ದಿನದ ಮೇಲಿದೆ. ಇಬ್ಬರೂ ಕೈಗೊಳ್ಳಲಿರುವ ಅಂತಿಮ ನಿರ್ಧಾರ ಕುತೂಹಲ ಮೂಡಿಸಿದೆ. ಕೊನೆಯ ಕ್ಷಣದಲ್ಲಿ ಸಂಗೀತಾ ಮನಸ್ಸು ಬದಲಿಸುವರೇ ಎನ್ನುವ ಪ್ರಶ್ನೆ ಮೂಡಿದೆ.

ಇದೇ ಹೊತ್ತಿನಲ್ಲಿ ವಿಜಯ್ ಮತ್ತು ಪತ್ನಿ ಸಂಗೀತ ತಮ್ಮ ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಲಿದ್ದಾರೆ ಎಂಬ ಆಶಾದಾಯಕ ಊಹಾಪೋಹಗಳು ಕೇಳಿಬರುತ್ತಿವೆ. ಕೆಲವು ಪ್ರಮುಖ ಕೌಟುಂಬಿಕ ಕಾರಣಗಳು ಹಾಗೂ ಕುಟುಂಬದ ಹಿತದೃಷ್ಟಿಯಿಂದ ಇಬ್ಬರೂ ತಮ್ಮ ಮದುವೆ ಜೀವನವನ್ನು ಮತ್ತೆ ಸರಿಪಡಿಸಿಕೊಂಡು, ಜೊತೆಯಾಗಿ ಬಾಳಲು ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದು ವಿಜಯ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ತ್ರಿಶಾ ಜೊತೆಗಿನ ಓಡಾಟ ತಂದಿದ್ದ ಗೊಂದಲ:

ಒಂದೆಡೆ ದಂಪತಿ ಒಂದಾಗುವ ವದಂತಿಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ವಿಜಯ್ ಅವರು ನಟಿ ತ್ರಿಶಾ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಆದರೆ, ಪ್ರಸ್ತುತ ಕೇಳಿಬರುತ್ತಿರುವ ಕೌಟುಂಬಿಕ ಸಂಧಾನದ ವರದಿಗಳು ವಿಜಯ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿವೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?

ಕೋರ್ಟ್‌ನಲ್ಲಿ ಸಿಗಲಿದೆಯೇ ಅಂತಿಮ ಸ್ಪಷ್ಟನೆ?

ವಿಜಯ್ ಮತ್ತು ಸಂಗೀತ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಸದ್ಯಕ್ಕೆ ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಯಲ್ಲಿದ್ದು, ಜೂನ್ 15ರಂದು ನ್ಯಾಯಾಲಯದಲ್ಲಿ ಇಬ್ಬರೂ ಮಂಡಿಸಲಿರುವ ವಾದಗಳು ಮತ್ತು ಅವರ ನಡೆ ಈ ಸುದ್ದಿ ಬಗ್ಗೆ ಸ್ಪಷ್ಟನೆ ಸಿಗಲಿದೆ. ಅಂದು ಇಬ್ಬರೂ ಮತ್ತೆ ಒಂದಾಗುವ ನಿರ್ಧಾರ ಪ್ರಕಟಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *