ರಾಯಚೂರು, ಜೂನ್ 14: ಮಳೆಯ ನಡುವೆಯೂ ಮಂತ್ರಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವ ಪರಿಣಾಮ, ಸುತ್ತಮುತ್ತಲಿನ ವಸತಿಗೃಹಗಳ ಸುಮಾರು 3 ಸಾವಿರ ರೂಮ್ಗಳು ಫುಲ್ ಆಗುತ್ತಿವೆ. ಹೀಗಾಗಿ ಕನಿಷ್ಠ ವಸತಿಗೂ ಭಕ್ತರು ಪರದಾಡಬೇಕಾದ ಸ್ಥಿತಿ ಇದ್ದು, ಮಠದಿಂದ ಭಕ್ತರಿಗಾಗಿ ಕಲ್ಯಾಣ ಮಂಟಪಗಳಲ್ಲಿ ಮಾಡಿರುವ ವ್ಯವಸ್ಥೆಯೂ ಸಾಲದಂತಾಗಿದೆ. ಹೀಗಾಗಿ ಮಠದ ಪ್ರಾಂಗಣದಲ್ಲೇ ಭಕ್ತರು ಮಲಗುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದೆಡೆ ಖಾಸಗಿ ವಸತಿ ಗೃಹಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಭಕ್ತರ ಸುಲಿಗೆಗೆ ಇಳಿದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.