Headlines

Chanakya Niti: ಮಹಿಳೆಯರಿಗೆ ಇಷ್ಟವಾಗೋದೇ ಪುರುಷರ ಈ ಗುಣಗಳು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says these are the qualities of men that women like

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಯಶಸ್ಸು, ಶ್ರೀಮಂತಿಕೆ, ದಾಂಪತ್ಯ ಜೀವನ, ಶಿಕ್ಷಣ, ಮದುವೆ ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರು ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ವಿವರಿಸಿದ್ದು, ಮಹಿಳೆಯರು ಯಾವ ರೀತಿಯ ಜೀವನ ಸಂಗಾತಿಯನ್ನು ಬಯಸುತ್ತಾರೆ, ಅವರು ಎಂತಹ ಪುರುಷರತ್ತ ಆಕರ್ಷಿತರಾಗುತ್ತಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಹೆಣ್ಮಕ್ಳಿಗೆ ಪುರುಷರ ಯಾವ ಗುಣಗಳು ಸಖತ್‌ ಇಷ್ಟ ಎಂಬುದನ್ನು ನೋಡೋಣ.

ಮಹಿಳೆಯರಿಗೆ ಪುರುಷರ ಯಾವ ಗುಣಗಳು ಇಷ್ಟವಾಗೋದು?

ಪ್ರಾಮಾಣಿಕತೆ: ಸಂಬಂಧಗಳಲ್ಲಿ ಪ್ರಾಮಾಣಿಕರಾಗಿರುವ ವ್ಯಕ್ತಿ ಜೀವನ ಸಂಗಾತಿಯಾಗಿ ಬರಬೇಕು ಎಂದು ಮಹಿಳೆಯರು ಬಯಸುತ್ತಾರೆ. ಇಂತಹ ಪುರುಷರು ಎಂದಿಗೂ ತಮ್ಮ ಹೆಂಡತಿ ಅಥವಾ ಪ್ರೇಯಸಿಗೆ ದ್ರೋಹ ಮಾಡಲು ಸಾಧ್ಯವಿಲ್ಲ. ಅಂತಹ ಪುರುಷರು ನಿರಂತರವಾಗಿ ತಮ್ಮ ಸಂಬಂಧಗಳನ್ನು ಬಲಪಡಿಸಲು ಶ್ರಮಿಸುತ್ತಾರೆ ಮತ್ತು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ. ಈ ಗುಣವೇ ಮಹಿಳೆಯರಿಗೆ ಇಷ್ಟವಾಗೋದು.

ನಡವಳಿಕೆ: ಉತ್ತಮ ನಡವಳಿಕೆ, ಸಿಹಿ ಮಾತು ಮತ್ತು ಸಜ್ಜನಿಕೆಯಂತಹ ಗುಣಗಳನ್ನು ಪುರುಷರಿಂದ ಮಹಿಳೆಯರು ಹೆಚ್ಚಾಗಿ ನಿರೀಕ್ಷಿಸುತ್ತಾರೆ. ಅಲ್ಲದೆ ಈ ಗುಣವು ಮಹಿಳೆಯರನ್ನು ಬಹಳವಾಗಿ ಮೆಚ್ಚಿಸುತ್ತದೆ.

ಉತ್ತಮ ಕೇಳುಗರು: ಪ್ರತಿಯೊಬ್ಬ ಮಹಿಳೆಯೂ ತನ್ನ ಸಂಗಾತಿ ನೆರಳಿನಂತೆ ಇರಬೇಕೆಂದು ಬಯಸುತ್ತಾಳೆ. ಅವನು ಒಳ್ಳೆಯ ಕೇಳುಗನಾಗಿರಬೇಕು, ಆಕೆಯ ಆಲೋಚನೆಗಳನ್ನು ಗ್ರಹಿಸಬೇಕು, ತನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಬೇಕು ಎಂದು ಬಯಸುತ್ತಾಳೆ. ಈ ಗುಣ ಪ್ರತಿಯೊಬ್ಬ ಮಹಿಳೆಗೂ ಇಷ್ಟ.  ಅದೇ ಮಾತುಗಳಿಗೆ ಗಮನ ಕೊಡುದ ಮತ್ತು ನಿರ್ಲಕ್ಷ್ಯ ತೋರುವ ಪುರುಷರನ್ನು ಎಂದಿಗೂ ಇಷ್ಟಪಡುವುದಿಲ್ಲ.

ತಾಳ್ಮೆ:  ಜೀವನದ ಪ್ರತಿಯೊಂದು ಹಂತದಲ್ಲೂ ಏರಿಳಿತಗಳು ಇರುತ್ತವೆ, ಎಂತಹ ಕಷ್ಟದ ಸಂದರ್ಭದಲ್ಲೂ ತಾಳ್ಮೆಯಿಂದ ಇರುವ ವ್ಯಕ್ತಿ ಹಾಗೂ ಕೋಪ ಬಂದ ಸಂದರ್ಭದಲ್ಲಿ ಎದುರು ಮಾತಾಡದೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸುವ ವ್ಯಕ್ತಿಗಳೆಂದರೆ ಮಹಿಳೆಯರಿಗೆ ತುಂಬಾ ಇಷ್ಟ ಎನ್ನುತ್ತಾರೆ ಚಾಣಕ್ಯ. ತಾಳ್ಮೆಯನ್ನು ಹೊಂದಿರುವ ಪುರುಷರು ತಮ್ಮ ಜೀವನ ಸಂಗಾತಿಯನ್ನು ಎಂದಿಗೂ ನೋಯಿಸುವುದಿಲ್ಲ ಆಕೆಯನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈ ಗುಣವನ್ನು ಹೊಂದಿರುವ ಪುರುಷರನ್ನೇ ಹೆಂಗಳೆಯರು ಮೆಚ್ಚಿಕೊಳ್ಳುವುದು.

ಇದನ್ನೂ ಓದಿ: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಕಲಿಸಬೇಕು ಎನ್ನುತ್ತಾರೆ ಚಾಣಕ್ಯ

ಹಾಸ್ಯ ಸ್ವಭಾವ: ಚಾಣಕ್ಯ ಹೇಳುವಂತೆ ಮಹಿಳೆಯರಿಗೆ  ಪುರುಷರ ಹಾಸ್ಯ ಸ್ವಭಾವವೂ ಇಷ್ಟ. ಹಾಸ್ಯ ಗುಣವನ್ನು ಹೊಂದಿರುವವರು ಯಾವಾಗಲೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಲೇ ಇರುತ್ತಾರೆ.  ಇತರರಿಗೆ ನೋವು ಮಾಡದೆ ಮುಖದಲ್ಲಿ ನಗು ತರಿಸುವ ವ್ಯಕ್ತಿಗಳತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ.

ಭಾವನಾತ್ಮಕವಾಗಿ ಬಲಿಷ್ಠ: ಆರ್ಯ ಚಾಣಕ್ಯ ಹೇಳುವಂತೆ ಮಹಿಳೆಯರು ಭಾವನಾತ್ಮಕವಾಗಿ ಬಲಿಷ್ಠರಾಗಿರುವ ಪುರುಷರನ್ನು ಬಯಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನ ಸಂಗಾತಿ ಭಾವನಾತ್ಮಕವಾಗಿ ಬಲಿಷ್ಠರಾಗಿರಬೇಕು ಎಂದು ಬಯಸುತ್ತಾರೆ.

ಕಾಳಜಿ ಗುಣ: ಪುರುಷರ ಇತರರ ಬಗ್ಗೆ ತೋರುವ ಕಾಳಜಿ, ಅವರ ಸಹಾಯ ಗುಣವನ್ನು ಮಹಿಳೆಯರು ಬಹಳವಾಗಿ ಮೆಚ್ಚುತ್ತಾರೆ. ಅಂತಹ ಪುರುಷರಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ತಿಳಿದಿರುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಆದ್ದರಿಂದ, ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯಲ್ಲಿ ಈ ಗುಣವನ್ನು ಬಯಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *