Headlines

ಪ್ರತಿಭಟನೆ ವೇಳೆ ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

ಪ್ರತಿಭಟನೆ ವೇಳೆ ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

ಜೈಪುರ, (ಜೂನ್ 15): ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ  (CJP founder Abhijeet Dipke) ಮೇಲೆ ಸೋಮವಾರ(ಜೂ. 15) ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಹೌದು..ಇಂದು (ಜೂನ್ 15) ಜೈಪುರದ ಶಹೀದ್ ಸ್ಮಾರಕದ ಬಳಿ ಬೃಹತ್ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯತ್ತ ಅಭಿಜೀತ್ ಡಿಪ್ಕೆ ಅವರನ್ನು ಬೆಂಬಲಿಗರು ತಮ್ಮ ಹೆಗಲ ಮೇಲೆ ಹೊತ್ತು ತರುತ್ತಿದ್ದ ವೇಳೆ ದಿಢೀರ್ ಎಂದು ನುಗ್ಗಿದ ಕೆಲ ಕಿಡಿಗೇಡಿಗಳು, ಅವರ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಎಳೆದು, ಮುಖಕ್ಕೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೆ, ಅವರನ್ನು ಕೆಳಗೆ ಬೀಳಿಸಲು ಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *