
ನಟ ಶ್ರೀಮುರುಳಿ ಹಾಗೂ ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಇಂದು (ಜೂನ್ 16) ನಿಧನ ಹೊಂದಿದ್ದಾರೆ. ಸದಾ ಧೈರ್ಯದಿಂದ ಇರುತ್ತಿದ್ದ ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ಅವರು ಅಮ್ಮನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ತಡೆಯಲಾರದೆ ಕಣ್ಣೀರಿಟ್ಟ ಘಟನೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಯಾವಾಗಲೂ ಬೆಳ್ಳಿತೆರೆಯ ಮೇಲೆ ರಗಡ್ ಆಕ್ಷನ್ ಪಾತ್ರಗಳ ಮೂಲಕ ಅಬ್ಬರಿಸುವ ಶ್ರೀಮುರುಳಿ, ವೈಯಕ್ತಿಕ ಜೀವನದಲ್ಲಿ ತಾಯಿಗೆ ಅತಿಯಾಗಿ ಹತ್ತಿರವಾಗಿದ್ದರು. ತಮ್ಮ ಸಿನಿ ಜರ್ನಿ ಹಾಗೂ ವೈಯಕ್ತಿಕ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಮ್ಮ ಇನ್ನು ನೆನಪು ಮಾತ್ರ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜಯಮ್ಮ ಅವರ ಪಾರ್ಥಿವ ಶರೀರದ ಮುಂದೆ ಮೌನವಾಗಿ ಕಣ್ಣೀರು ಸುರಿಸುತ್ತಿದ್ದ ಶ್ರೀಮುರುಳಿ ಅವರನ್ನು ನೋಡಿ ಅಲ್ಲಿ ನೆರೆದಿದ್ದ ಬಂಧುಗಳು ಮತ್ತು ಚಿತ್ರರಂಗದ ಸ್ನೇಹಿತರು ಸಾಂತ್ವನ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.