Headlines

‘ನರಗಳು ಬ್ಲಾಕ ಆಗಿವೆ’; ಆರೋಗ್ಯದ ಬಗ್ಗೆ ಸೋನು ನಿಗಮ್ ಆತಂಕಕಾರಿ ಮಾಹಿತಿ – Kannada News | Sonu Nigam’s Nerve Problem: Singer Faces Health Challenge, Vows to Perform

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಸದ್ಯ ತೀವ್ರವಾದ ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಅವರು ತಾವು ಮುಂಚಿತವಾಗಿ ಒಪ್ಪಿಕೊಂಡಿರುವ ಸಂಗೀತ ಕಚೇರಿಯನ್ನು ರದ್ದುಗೊಳಿಸದೆ, ಎಂದಿನಂತೆ ವೇದಿಕೆ ಏರಲು ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಲೈವ್ ಪರ್ಫಾರ್ಮೆನ್ಸ್‌ಗೂ ಮುನ್ನ ಸೋನು ನಿಗಮ್ ಅವರು ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ನೋವಿನ ನಡುವೆ ಚಿಕಿತ್ಸೆ: ಸೋನು ನಿಗಮ್ ಮಾತು

ತಮ್ಮ ಅನಾರೋಗ್ಯದ ಕುರಿತು ಮಾತನಾಡಿರುವ ಸೋನು ನಿಗಮ್, ‘ನನ್ನ ನರಗಳು ಬ್ಲಾಕ್ ಆಗಿವೆ. ಕಳೆದ ಒಂದು ವಾರದಿಂದ ಎಂಆರ್‌ಐ ಮತ್ತು ಸಿಟಿ (CT) ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ ಹಾಗೂ ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಚಿಕಿತ್ಸೆಯ ಭಾಗವಾಗಿ ನಡೆಯುತ್ತಿರುವ ಫಿಸಿಯೋಥೆರಪಿ ಸೆಷನ್‌ಗಳು ಅತ್ಯಂತ ನೋವಿನಿಂದ ಕೂಡಿವೆ ಎಂದಿರುವ ಅವರು, ಸದ್ಯ ನೋವು ನಿವಾರಕ ಮಾತ್ರೆಗಳ ಸಹಾಯದಿಂದ ನೋವನ್ನು ತಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕನ್ನಡದ ಹೀರೋಗಳಿಗೆ ಇದನ್ನು ಹೇಳೋ ಗಟ್ಸ್ ಇದೆಯಾ; ಸೋನು ನಿಗಮ್ ಹೀಗೆ ಹೇಳಿದ್ರಾ?

ಗಂಟಲಿನ ಮೇಲೂ ಬಿದ್ದಿದೆ ಪ್ರಭಾವ!

ನರಗಳನ್ನು ಸಡಿಲಗೊಳಿಸಲು ವೈದ್ಯರು ನೀಡಿರುವ ಹೈ-ಡೋಸ್ ಔಷಧಿಗಳಿಂದಾಗಿ ಸೋನು ನಿಗಮ್ ಅವರ ಗಂಟಲಿನ ಧ್ವನಿಯಲ್ಲೂ ಏರುಪೇರಾಗಿದೆ. ‘ಮಾತ್ರೆಗಳ ಕಾರಣದಿಂದಾಗಿ ನನ್ನ ಗಂಟಲು ಕೂಡ ಸ್ವಲ್ಪ ಭಾರವಾದಂತೆ ಅನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಗಾಯಕರಿಗೆ ಲೈವ್ ಶೋ ಇರುವಾಗ ಧ್ವನಿಯಲ್ಲಿ ಸಣ್ಣ ಬದಲಾವಣೆಯಾದರೂ ಆತಂಕ ಮೂಡಿಸುತ್ತದೆ. ಆದರೆ ಸೋನು ನಿಗಮ್ ಮಾತ್ರ ಯಾವುದಕ್ಕೂ ಧೃತಿಗೆಡದೆ ಸ್ಟೇಜ್ ಹತ್ತಲು ನಿರ್ಧರಿಸಿದ್ದಾರೆ.

ಅಭಿಮಾನಿಗಳಿಂದ ಹಾರೈಕೆ:

ತುಂಬಾ ದಿನಗಳ ನಂತರ ಮುಂಬೈನಲ್ಲಿ ವೇದಿಕೆ ಏರುತ್ತಿರುವುದರಿಂದ, ಯಾವುದೇ ಕಾರಣಕ್ಕೂ ಶೋ ಕ್ಯಾನ್ಸಲ್ ಮಾಡುವುದಿಲ್ಲ ಎಂದು ಸೋನು ಸ್ಪಷ್ಟಪಡಿಸಿದ್ದಾರೆ. ಗಾಯಕರ ಈ ವೃತ್ತಿಪರತೆ ಮತ್ತು ಬದ್ಧತೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋನು ನಿಗಮ್ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಸಾವಿರಾರು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *