ಬೆಂಗಳೂರು, ಜೂನ್ 18: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಪಕ್ಷದ ಐದೂ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲೇ ಭಾರಿ ಬಹುಮತದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮಾತನಾಡಿ, 135 ಮತಗಳನ್ನು ನಿರೀಕ್ಷಿಸಲಾಗಿದ್ದರೂ, ಪಕ್ಷಕ್ಕೆ 151 ಮತಗಳು ದೊರೆತಿವೆ ಎಂದು ತಿಳಿಸಿದರು. ಈ ಗೆಲುವಿಗೆ ಕರ್ನಾಟಕದ ಶಾಸಕರ ಪಕ್ಷ ನಿಷ್ಠೆ ಹಾಗೂ ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳ ಸಕಾರಾತ್ಮಕ ಪರಿಣಾಮವೇ ಕಾರಣ ಎಂದಿದ್ದಾರೆ. ಬಿಜೆಪಿ 64 ಮತಗಳಲ್ಲಿ 7 ಮತಗಳ ಕೊರತೆ ಕಂಡಿದ್ದರೆ, ಜೆಡಿಎಸ್ಗೆ 18ರಲ್ಲಿ 14 ಮತಗಳು ಮಾತ್ರ ಸಿಕ್ಕಿವೆ. ಐದು ಗ್ಯಾರಂಟಿಗಳು ಕರ್ನಾಟಕದ ಜನರ ಜೀವನವನ್ನು ಬದಲಾಯಿಸಿವೆ. ಬಿಜೆಪಿ ಮತ್ತು ಜೆಡಿಎಸ್ನ ನಕಾರಾತ್ಮಕ ರಾಜನೀತಿಯನ್ನು ಶಾಸಕರೇ ತಿರಸ್ಕರಿಸಿದ್ದಾರೆ ಎಂದರು. ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಅಭಿವೃದ್ಧಿಯ ಹಾದಿಗೆ ಸಿಕ್ಕ ಸಕಾರಾತ್ಮಕ ಮತ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.