ಮೇಷ ರಾಶಿ :
ಇಂದು ಆರ್ಥಿಕ ಸಹಾಯಕ್ಕಾಗಿ ನಿಮ್ಮನ್ನು ಯಾರಾದರೂ ಕೇಳಬಹುದು. ಹಗಲು ಪ್ರಯಾಣದಿಂದ ನಿಮ್ಮ ಮಾನಸಿಕ ಶಕ್ತಿ ಹೆಚ್ಚಾಗುವುದು. ಮುಂದಿನ ಹಾದಿಗೆ ದಾರಿ ತೋರುವುದು. ಆದರೆ ಕೆಲವೊಮ್ಮೆ ಒತ್ತಡದ ಸಂದರ್ಭಗಳು ಎದುರಾಗಬಹುದು. ಆದರೆ, ನಿಮ್ಮ ಆಂತರಿಕ ಶಕ್ತಿ ಅದನ್ನು ನಿಭಾಯಿಸಬಲ್ಲದು. ಹಣದ ವ್ಯವಹಾರಗಳಲ್ಲಿ ದೃಢವಾಗಿರಿ. ಕೊಡುಕೊಳ್ಳುವ ವ್ಯವಹಾರದಲ್ಲಿ ಸಣ್ಣ ಬೇಸರವಾಗಬಹುದು. ವಿವಾಹದ ಮಾತುಕತೆ ನಡೆಯಬಹುದು. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಿರಿ.
ವೃಷಭ ರಾಶಿ :
ಹಣದ ಉಳಿತಾಯದಿಂದ ಅನಿವಾರ್ಯವಾದ ಆಭರಣಗಳನ್ನು ಖರೀದಿಸುವಿರಿ. ನಿಮ್ಮನ್ನು ಬೇರೆಯರಿಗಿಂತ ವಿಭಿನ್ನವನ್ನಾಗಿ ತೋರಿಸಬಹುದು. ಆದರೆ, ಪ್ರತಿಯೊಂದು ಮಾತು ಎಣಿಕೆಯಿಂದ ಮಾತಾಡಿ. ಬೇರೆವರಿಗಿಂತ ಭಿನ್ನವಾಗಿರಲು ಇಷ್ಟಪಡುವಿರಿ. ಹಣಕಾಸಿನಲ್ಲಿ ಹೊಸ ದಿಕ್ಕು ಕಂಡುಬರುವ ಸಾಧ್ಯತೆ ಇದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು.
ಮಿಥುನ ರಾಶಿ :
ನಿಮ್ಮ ನಷ್ಟವನ್ನು ಮರೆಮಾಚಲು ತಂತ್ರವನ್ನು ಹೂಡುವಿರಿ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು. ನಿಮ್ಮೊಳಗಿನ ಪ್ರಪಂಚ ನಿಮ್ಮನ್ನು ದೂಡಿ ಹೊರಹಾಕಬಹುದು. ಮನಸ್ಸಿನಲ್ಲಿ ಗಾಬರಿಯ ಸ್ಥಿತಿಯನ್ನು ನಿವಾರಿಸಿಕೊಳ್ಳಿ. ಮನೆಯಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಅಳುಕುವ ಅವಶ್ಯಕತೆ ಇಲ್ಲ. ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ.
ಕರ್ಕಾಟಕ ರಾಶಿ :
ಹೊಸದಾಗಿ ನಿಮ್ಮ ಸಹವಾಸಕ್ಕೆ ಸೇರಿದವರ ಮೇಲೆ ಹದ್ದಿನ ಕಣ್ಣಿಡಿ. ನಿಮ್ಮ ಉತ್ಸಾಹ ಇತರರನ್ನೂ ಪ್ರೇರೇಪಿಸಬಹುದು. ಕೆಲಸಗಳಲ್ಲಿ ಹೆಚ್ಚಿನ ಗಮನ ಬೇಕಾಗಿರುತ್ತದೆ. ಆದರೆ, ಸಮಯ ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಹಣದ ವಿಚಾರದಲ್ಲಿ ನಿರ್ಧಾರ ಸರಿಯಾಗಿ ತೆಗೆದುಕೊಳ್ಳಿ. ಆತುರದ ನಿರ್ಧಾರಕ್ಕೆ ನಷ್ಟವೊಂದೇ ಫಲ. ದ್ವಿಚಕ್ರ ವಾಹನದಲ್ಲಿ ಆಯ ತಪ್ಪಬಹುದು. ಅದನ್ನು ಯೋಜನೆ ಗೊಳಿಸಿ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.
ಸಿಂಹ ರಾಶಿ :
ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ನಿಮ್ಮ ಶ್ರಮಕ್ಕೆ ಕೂಡಲೇ ಫಲ ಸಿಗುತ್ತದೆ ಎನ್ನುವ ಧಾವಂತ ಬೇಡ. ತಾಳ್ಮೆಯ ಅವಶ್ಯಕತೆ ಇದೆ. ನಿಮ್ಮ ಉತ್ಸಾಹವನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಹಣಕಾಸಿನ ಚಿಂತೆ ಇತ್ತು ಸಹ ಪರಿಹಾರ ದೊರೆಯಬಹುದು. ಸಲಹೆಯನ್ನು ಸ್ವೀಕರಿಸಿ ಕ್ರಮಬದ್ಧವಾಗಿ ಆಚರಿಸಿ. ಪ್ರಯಾಣದಲ್ಲಿ ಪ್ರೇಮವಾಗುವ ಸಂಭವವಿದೆ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು.
ಕನ್ಯಾ ರಾಶಿ :
ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಸ್ಪಷ್ಟತೆಯ ಜೊತೆ ಮುಂದೆ ಸಾಗಿರಿ. ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ಹಲವು ರೀತಿಯ ವಿರೋಧವನ್ನು ನೀವು ತೆಗೆದುಕೊಳ್ಳುವ ತೀರ್ಮಾನದಿಂದ ಬರಲಿದೆ. ಭೂ ವ್ಯವಹಾರವು ಇತ್ಯರ್ಥ ಆಗುವುದು ಕಷ್ಟ. ಚೆನ್ನಾಗಿ ಮಾತನಾಡುತ್ತೇನೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ನಗುಮುಖದಿಂದ ಇಂದು ಇದ್ದರು ನಿಮ್ಮ ಬಳಿ ಅನೇಕರು ಮಾತನಾಡಲು ಬರಬಹುದು.
ತುಲಾ ರಾಶಿ :
ನಿಮ್ಮ ಮಾನಸಿಕ ಹಿತಕ್ಕಾಗಿ ಕೆಲಸ ಕೆಲಸ ಮಾಡುವಿರಿ. ಕೆಲಸಗಳಲ್ಲಿ ವಿಶಿಷ್ಟ ಯಶಸ್ಸುಗಳು ಸಂಭವಿಸಬಹುದು. ಆದರೆ, ಕೆಲಸದ ಒತ್ತಡ ಜಾಸ್ತಿಯಾಗಬಹುದು. ಹಣದ ವ್ಯವಹಾರಗಳಲ್ಲಿ ನಿರ್ಣಯ ದೃಢವಾಗಿರಲಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.
ವೃಶ್ಚಿಕ ರಾಶಿ :
ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಬಳಸುವರು. ಮಕ್ಕಳ ಕಡೆ ಗಮನ ಹೆಚ್ಚು ಬೇಕಾಗುವುದು. ನಿರುತ್ಸಾಹದ ಮಾತಿಗೆ ಕಿವಿಯಾಗದೇ ಇದ್ದರೆ ಒಳ್ಳೆಯದು. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು. ಬೇಸರವಾಗಿ ಎಲ್ಲವೂ ಅಶಾಶ್ವತ ಎಂದೆನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು.
ಧನು ರಾಶಿ :
ಇಂದು ನಿಮ್ಮ ಪರೀಕ್ಷೆಗೆಂದು ಕೆಲವು ಘಟನೆಗಳು ನಡೆಯಬಹುದು. ಇಂದಿನ ಯೋಜನೆಗಳು ಕೊನೆಯ ಕ್ಷಣದಲ್ಲಿ ಬದಲಾಗಬಹುದು. ನಿಮ್ಮ ಕಾರ್ಯಕ್ಷಮತೆ ಇತರರನ್ನು ಪ್ರಭಾವಿತ ಮಾಡುತ್ತದೆ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ಪರಿಸ್ಥಿತಿ ಸಮೃದ್ಧವಾಗಬಹುದು. ವಾಹನ ಚಾಲನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು ಉತ್ತಮ. ಮನಸ್ಸು ಹೇಳಿದಂತೆ ಕೇಳಬೇಡಿ, ಸಮಾಧಾನದಿಂದ ಇರಿ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ.
ಮಕರ ರಾಶಿ :
ನೀವಾಡುವ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ಇಂದು ನಿಮಗೆ ಸಿಗುವ ಬೆಂಬಲ ಇಲ್ಲವಾಗುವುದು. ಕೆಲಸದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶ ಸಿಗಬಹುದು. ಹಣಕಾಸಿನ ವಿಷಯಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಮನಸ್ಸನ್ನು ಕಡಿಮಾಣ ಹಾಕಿ ನಿಲ್ಲಿಸುವುದು ಉತ್ತಮ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ.
ಕುಂಭ ರಾಶಿ :
ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಸ್ನೇಹಿತರಿಂದ ನೆರವು ಸಿಗಬಹುದು. ಏನೇ ಮಾಡಿದರೂ ವಿರೋಧಿಗಳ ಮೀರಿಸುವ ಸಾಮರ್ಥ್ಯ ಬರದು. ಭವಿಷ್ಯದ ಬಗ್ಗೆ ಚಿಂತೆ ಮಾಡದಿರಿ, ಕಾಲ ಸರಿದಂತೆ ಪರಿಹಾರ ಸಿಗುತ್ತದೆ. ಕೆಲವು ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬಹುದು. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಆಯಾಸವಾದರೆ ವಿಶ್ರಾಂತಿಯ ಜೊತೆ ಕೆಲಸವನ್ನು ಮಾಡಿ. ಗುರಿಯೆಡಗೆ ಪ್ರಯತ್ನವು ನಿರಂತರವಾಗಿರಲಿ.
ಮೀನ ರಾಶಿ :
ಇಂದು ಅನ್ಯರಿಗೆ ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಕೆಲವರು ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಇನ್ನೊಬ್ಬರ ಬಗ್ಗೆ ಅಂದುಕೊಂಡಿದ್ದು ಸತ್ಯವಾಗಲಿದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಇಂದು ನಿಮ್ಮ ಮಹತ್ತ್ವದ ಕಾರ್ಯವು ಕೈಗೂಡಬಹುದು. ಹಳೆಯ ಸಮಾಚಾರವನ್ನು ಪುನಃ ನೆನಪಿಸಿಕೊಳ್ಳುವಿರಿ. ಮಾತನ್ನು ಕಡಿಮೆ ಮಾಡಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ : ವೃದ್ಧಿ, ಕರಣ : ತೈತಿಲ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:21, ಯಮಗಂಡ ಕಾಲ 15:34 – 17:10, ಗುಳಿಕ ಕಾಲ 07:32 – 09:08
– ಲೋಹಿತ್ ಹೆಬ್ಬಾರ್ – 8762924271 (what’s app only)