Headlines

Happy Father’s Day 2026: ನಿಮ್ಮ ಜೀವನದ ಸೂಪರ್‌ ಹೀರೋಗೆ ಈ ರೀತಿ ಫಾದರ್ಸ್‌ ಡೇ ಶುಭಾಶಗಳನ್ನು ತಿಳಿಸಿ – Kannada News | Happy Father’s Day 2026: here are some meaningful wishes and messages to Share with Your Dad

ತಂದೆಯಂದಿರ ದಿನದ ಶುಭಾಶಯಗಳುImage Credit source: png magic

ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ ಎಂದರೆ ಅದು ತಂದೆ (Father). ತಂದೆಯಂದಿರುವ ತನ್ನೆಲ್ಲಾ ಖುಷಿಯನ್ನು ತ್ಯಾಗ ಮಾಡಿ ಮಕ್ಕಳ ಭವಿಷ್ಯ ಹಾಗೂ ಕುಟುಂಬಕ್ಕಾಗಿ ಹಗಲಿರುಳೆನ್ನದೆ ದುಡಿಯುತ್ತಾರೆ. ಇಂತಹ ತ್ಯಾಗಮಯಿ ತಂದೆಯ ಗೌರವಿಸಲು, ಸ್ಮರಿಸಲು ಪ್ರತಿವರ್ಷ ಜೂನ್‌ ಮೂರನೇ ಭಾನುವಾರದಂದು ಫಾದರ್ಸ್‌ ಡೇಯನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನವಲ್ಲ, ತಂದೆಯಂದಿರು ತಮ್ಮ ಕುಟುಂಬಕ್ಕಾಗಿ ಮಾಡುವ ತ್ಯಾಗ ಮತ್ತು ಪ್ರೀತಿಗಾಗಿ ಅವರಿಗೆ ಧನ್ಯವಾದ ಹೇಳಲಿರುವ ಅವಕಾಶವಾಗಿದೆ. ಇಂದು ವಿಶ್ವ ತಂದೆಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ಶುಭದಿನದಂದು ನಿಮ್ಮ ಜೀವನದ ಸೂಪರ್‌ ಹೀರೋಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಅರ್ಥಪೂರ್ಣ ಶುಭ ಸಂದೇಶಗಳು.

ಫಾದರ್ಸ್‌ ಡೇಯ ಅರ್ಥಪೂರ್ಣ ಶುಭ ಸಂದೇಶಗಳು ಇಲ್ಲಿವೆ:

  • ಜಗತ್ತಿನಲ್ಲೇ ದೀ ಬೆಸ್ಟ್‌ ಅಪ್ಪ ನೀವು. ಇವತ್ತು ನನ್ನ ಜೀವನ ಸುಗಮವಾಗಿ ಸಾಗುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನೀವು ತೋರಿದ ಪ್ರೀತಿ, ಮಾರ್ಗದರ್ಶನ. ನನಗೆ ಎಲ್ಲವನ್ನೂ ಕೊಟ್ಟ ನಿಮಗೆ ಥ್ಯಾಂಕ್ಸ್.‌ ಹ್ಯಾಪಿ ಫಾದರ್ಸ್‌ ಡೇ.
  • ಯಾವುದೇ ಸಂದರ್ಭದಲ್ಲೂ ಸದಾ ನನ್ನ ಜೊತೆ ನಿಲ್ಲುವ ವ್ಯಕ್ತಿ ನೀವು. ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು ಡ್ಯಾಡಿ.
  • ಆಗಸದಷ್ಟು ಪ್ರೀತಿ ಕೊಟ್ಟು, ಸದಾ ನನಗೆ ಬೆನ್ನೆಲುಬಾಗಿ ನಿಂತ ನನ್ನ ಮುದ್ದಿನ ಅಪ್ಪನಿಗೆ ಫಾದರ್ಸ್‌ ಡೇಯ ಶುಭಾಶಯಗಳು.
  • ಅಪ್ಪಾ… ನನ್ನ ಪಾಲಿಗೆ ನೀವೇ ಸೂಪರ್‌ ಹೀರೋ, ನೀವೇ ರೋಲ್‌ ಮಾಡೆಲ್‌. ನನಗೆ ಚಂದದ ಜೀವನ ನೀಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.
  • ಕೇಳದೆಯೇ ಎಲ್ಲವನ್ನೂ ನೀಡಿದ, ನಿಸ್ವಾರ್ಥ ಪ್ರೀತಿ ತೋರುವ, ಸದಾ ನನ್ನ ಜೊತೆ ನಿಲ್ಲುವ ನನ್ನ ಪ್ರೀತಿಯ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ.
  • ಯಾವಾಗಲೂ ನನ್ನನ್ನು ಬೆಂಬಲಿಸಿದ ಮತ್ತು ನನ್ನ ಕನಸುಗಳನ್ನು ಪ್ರೋತ್ಸಾಹಿಸಿದ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ. ವಿಶ್ವದ ಅತ್ಯುತ್ತಮ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು.
  • ನೀವು ನನ್ನ ಹೀರೋ, ನನ್ನ ಸ್ಪೂರ್ತಿ ಹ್ಯಾಪಿ ಫಾದರ್ಸ್‌ ಡೇ ಅಪ್ಪ. ಈ ಮುದ್ದಿನ ಮಗಳು ಸದಾ ನಿಮ್ಮೊಂದಿಗಿದ್ದಾಳೆ.
  • ನಿಮ್ಮಂಥ ಅಪ್ಪ ಸಿಕ್ಕಿದ್ದು ನನ್ನ ಭಾಗ್ಯ, ನಿಮ್ಮ ಜೊತೆಗಿರುವ ಪ್ರತಿ ಕ್ಷಣವೂ ನನಗೆ ಹಬ್ಬ. ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ.
  • ಅಪ್ಪಾ… ನನ್ನ ಭುಜದ ಮೇಲೆ ಕೈ ಇಟ್ಟು ನೀವು ಹೇಳುವ ಆ ಸ್ಫೂರ್ತಿಯ ಮಾತುಗಳೇ ನನಗೆ ದಾರಿ ದೀಪ. ಹ್ಯಾಪಿ ಫಾದರ್ಸ್‌ ಡೇ ಅಪ್ಪ.
  • ಅಪ್ಪ ಎಂದರೆ ಪ್ರೀತಿಯ ನಿಧಿ, ಅಪ್ಪ ಎಂದರೆ ಮಮತೆಯ ಗಣಿ. ನನ್ನ ಮುದ್ದಿನ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ.
  • ನಮ್ಮ ಒಳಿತಿಗಾಗಿ ನೀವು ಸದಾ ಶ್ರಮಿಸಿದ್ದೀರಿ, ನಮ್ಮ ಖುಷಿಗೆ ನಿಮ್ಮ ಸಮಯವನ್ನು ನೀಡಿದ್ದೀರಿ, ಯಾವಾಗಲೂ ನಮಗೆ ಪ್ರೋತ್ಸಾಹಿಸಿದ್ದೀರಿ, ಬೆಂಬಲವನ್ನು ನೀಡುತ್ತಿದ್ದೀರಿ. ನಿಮ್ಮ ಈ ಪ್ರೀತಿಯೇ ಸುಂದರ ಅಪ್ಪ. ಈ ನಮ್ಮ ತ್ಯಾಗಮಯಿ ಅಪ್ಪನಿಗೆ ತಂದೆಯಂದಿರ ದಿನದ ಶುಭಾಶಯಗಳು.
  • ಸದಾ ದಾರಿ ತೋರುವ ಗುರುವಾಗಿದ್ದೀರಿ, ಗುರಿ ಮುಟ್ಟಿಸುವ ಬೆಳಕಾಗಿದ್ದೀರಿ, ನಿಮ್ಮ ಪ್ರೀತಿ ಜೇನಿಗಿಂತಲೂ ಸಿಹಿ. ಈ ನನ್ನ ಪ್ರೀತಿಯ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು.
  • ನೀವು ದೇವರು ನನಗೆ ಕೊಟ್ಟಂತಹ ಬೆಲೆಬಾಳುವ ಉಡುಗೊರೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ಶ್ರೀರಕ್ಷೆ. ನಿಮಗೆ ತಂದೆಯಂದಿರ ದಿನದ ಶುಭಾಶಯಗಳು.
  • ಬಾಳಿಗೆ ದಾರಿ ದೀಪವಾಗಿ, ಬದುಕುವ ಕಲೆ ಕಲಿಸಿದ ನಮ್ಮ ಪ್ರೀತಿಯ ಅಪ್ಪನಿಗೆ ತಂದೆಯಂದಿರ ದಿನದ ಹಾರ್ದಿಕ ಶುಭಾಶಯಗಳು.
  • ನೀವು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣವ ಹೇಗೆ ತೀರಿಸಲು ಸಾಧ್ಯ. ನೋವನ್ನು ಉಂಡು ನಮಗೆ ಬರಿ ಖುಷಿ, ಸಂತೋಷವನ್ನೇ ನೀಡಿದ ಈ ನನ್ನ ತ್ಯಾಗಮಯಿ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *