ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡ 333 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಆರಂಭ ಒದಗಿಸಿದ್ದರು.
ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ 11 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್ಗಳನ್ನು ಬಾರಿಸಿದ್ದರು. ಈ ಮೂಲಕ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅರ್ಧಶತಕದ ಬಳಿಕ ಕೂಡ ಅಬ್ಬರಿಸಿದ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 94 ರನ್ ಬಾರಿಸಿ ಔಟಾದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಸ್ಕೋರ್ 8.1 ಓವರ್ಗಳಲ್ಲಿ 132 ಕ್ಕೆ ಬಂದು ನಿಂತಿತ್ತು. ಅತ್ತ ವೈಭವ್ ಔಟಾಗುತ್ತಿದ್ದಂತೆ ಪ್ರಿಯಾಂಶ್ ಆರ್ಯ (39) ಕೂಡ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ರುತುರಾಜ್ ಗಾಯಕ್ವಾಡ್ 40 ರನ್ ಬಾರಿಸಿದರೆ, ನಾಯಕ ತಿಲಕ್ ವರ್ಮಾ 67 ರನ್ ಸಿಡಿಸಿದರು. ಇನ್ನು ಕುಮಾರ್ ಕುಶಾಗ್ರ 36 ರನ್ಗಳ ಕೊಡುಗೆ ನೀಡಿದರು. ಆದರೆ ಕಳೆದ ಮ್ಯಾಚ್ನಲ್ಲಿ ಅಬ್ಬರಿಸಿದ್ದ ಸೂರ್ಯಂಶ್ ಶೆಡ್ಗೆ ಈ ಬಾರಿ ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.
ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ಅನ್ಕೂಲ್ ರಾಯ್ 15 ಎಸೆತಗಳಲ್ಲಿ 39 ರನ್ ಚಚ್ಚಿದರು. ಈ ಮೂಲಕ ಭಾರತ ಎ ತಂಡವು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್ ಕಲೆಹಾಕಿದೆ.
ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ನುವಾನಿಡು ಫೆರ್ನಾಂಡೊ ,
ಸದೀರ ಸಮರವಿಕ್ರಮ , ಸಹನ್ ಅರಚ್ಚಿಗೆ (ನಾಯಕ) , ರವಿಂದು ಫರ್ನಾಂಡೊ , ವನುಜಾ ಸಹನ್ , ಮೊಹಮ್ಮದ್ ಶಿರಾಜ್ , ವಿಜಯಕಾಂತ್ ವಿಯಸ್ಕಾಂತ್ , ದುಲಾಜ್ ಸಮುದಿತಾ ,ಕುಗಥಾಸ್ ಮಥುಲನ್.
ಇದನ್ನೂ ಓದಿ: ಪೊಲಾರ್ಡ್ ಪವರ್ಗೆ ಗೇಲ್ ಸಾರ್ವಕಾಲಿಕ ವಿಶ್ವ ದಾಖಲೆ ಉಡೀಸ್!
ಭಾರತ ಎ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ , ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಕುಮಾರ್ ಕುಶಾಗ್ರ (ವಿಕೆಟ್ ಕೀಪರ್) , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನ್ಕೂಲ್ ರಾಯ್ , ವಿಪ್ರಾಜ್ ನಿಗಮ್ , ಅಶೋಕ್ ಶರ್ಮಾ , ಯಶ್ ಠಾಕೂರ್.