Headlines

‘ಧುರಂಧರ್’ ಯಶಸ್ಸಿನಿಂದ ರಣ್ವೀರ್ ಸಿಂಗ್ ಗಳಿಸಿದ್ದೆಷ್ಟು?

‘ಧುರಂಧರ್’ ಯಶಸ್ಸಿನಿಂದ ರಣ್ವೀರ್ ಸಿಂಗ್ ಗಳಿಸಿದ್ದೆಷ್ಟು?

ಭಾರತದಲ್ಲಿ ಕೆಲವು ಸ್ಟಾರ್ ನಟರು 200 ಕೋಟಿಗೂ ಹೆಚ್ಚು ಸಂಭಾವನೆ ಪಡೆದು ಸುದ್ದಿ ಆಗಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾಕ್ಕೆ ಅಲ್ಲು ಅರ್ಜುನ್ 200 ಕೋಟಿ ಸಂಭಾವನೆ ಪಡೆದಿದ್ದರು. ಹಾಗೆಯೇ ನಟ ರಜನೀಕಾಂತ್ ಸಹ ‘ಜೈಲರ್’ ಸಿನಿಮಾಕ್ಕೆ 200 ಕೋಟಿ ಸಂಭಾವನೆ ಪಡೆದ ಸುದ್ದಿ ಹಬ್ಬಿತ್ತು. ಈಗ ‘ವಾರಣಾಸಿ’ ಸಿನಿಮಾಕ್ಕೆ ಮಹೇಶ್ ಬಾಬು 250 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವರಿಗೆಲ್ಲಿರಿಗಿಂತಲೂ ಹೆಚ್ಚು ಹಣ ಮಾಡಿರುವುದು ನಟ ರಣ್ವೀರ್ ಸಿಂಗ್.

ರಣ್ವೀರ್ ಸಿಂಗ್, ‘ಧುರಂಧರ್​’ ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಜೀವಮಾನದ ಅತಿ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದು ಮಾತ್ರವೇ ಅಲ್ಲದೆ, ಈ ಸಿನಿಮಾಗಳ ಮೂಲಕ ಈ ವರೆಗಿನ ವೃತ್ತಿ ಜೀವನದಲ್ಲಿ ಸಿನಿಮಾದಿಂದ ಅತಿ ಹೆಚ್ಚು ಹಣವನ್ನೂ ಅವರು ಗಳಿಸಿದ್ದಾರೆ. ಆದರೆ ಸಂಭಾವನೆ ಮೂಲಕ ಮಾತ್ರವಲ್ಲ ಬದಲಿಗೆ ಲಾಭ ಹಂಚಿಕೆ ಮೂಲಕ. ‘ಧುರಂಧರ್’ ಸಿನಿಮಾಕ್ಕೆ ರಣ್ವೀರ್ ಸಿಂಗ್ ನಟರಷ್ಟೆ ಆಗಿರಲಿಲ್ಲ ಬದಲಿಗೆ ಅನಧಿಕೃತ ಸಹ ನಿರ್ಮಾಪಕರೂ ಆಗಿದ್ದರು.

ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ‘ಧುರಂಧರ್’ ಸಿನಿಮಾ ನಿರ್ಮಾಣದ ವೇಳೆ ಖುದ್ದು ರಣ್ವೀರ್ ಸಿಂಗ್ ಸಂಭಾವನೆ ಪಡೆದಿರಲಿಲ್ಲ ಬದಲಿಗೆ ಪರ್ಸೆಂಟೇಜ್ ಆಧಾರದಲ್ಲಿ ಸಿನಿಮಾ ಮಾಡಿದ್ದರು. ನಿರ್ಮಾಣಕ್ಕೆ ಹಣಕಾಸು ಕಡಿಮೆ ಆದಾಗ ಖುದ್ದು ತಮ್ಮ ಹಣವನ್ನು ಹೂಡಿಕೆ ಸಹ ಮಾಡಿದ್ದರಂತೆ. ಅಲ್ಲದೆ, ಮೊದಲ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಎರಡನೇ ಭಾಗದ ಬಹುತೇಕ ಚಿತ್ರೀಕರಣವೂ ಆಗಿತ್ತು. ಹಾಗಾಗಿ ಎರಡೂ ಸಿನಿಮಾಗಳಿಗೆ ಅವರು ಅನಧಿಕೃತ ಸಹ ನಿರ್ಮಾಪಕ ಇದರಿಂದಾಗಿ ಎರಡೂ ಸಿನಿಮಾಗಳ ಲಾಭದಲ್ಲಿ ರಣ್ವೀರ್ ಸಿಂಗ್ ಅವರಿಗೂ ಪಾಲು ಹೋಗಿದೆ. ಮೂಲಗಳ ಪ್ರಕಾರ, ರಣ್ವೀರ್ ಸಿಂಗ್ ಅವರಿಗೆ 350 ಕೋಟಿಗೂ ಹೆಚ್ಚು ಮೊತ್ತ ಲಾಭವಾಗಿದೆಯಂತೆ. ಈ ಲಾಭದಲ್ಲಿ ಅವರ ಸಂಭಾವನೆ ಮೊತ್ತ ಸೇರಿಲ್ಲ. ಸಂಭಾವನೆ ಸೇರಿದತೆ ಮೊತ್ತ 500 ಕೋಟಿಗೆ ಹತ್ತಿರ ಹೋಗುತ್ತದೆ.

ಇದನ್ನೂ ಓದಿ:ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?

‘ಧುರಂಧರ್’ ಸಿನಿಮಾವನ್ನು ನಿರ್ದೇಶಕ ಆದಿತ್ಯ ಧರ್ ಮತ್ತು ಜಿಯೋ ಸಂಸ್ಥೆ ನಿರ್ಮಾಣ ಮಾಡಿದೆ. ಇದರಲ್ಲಿ ಹೆಚ್ಚಿನ ಪಾಲು ಆದಿತ್ಯ ಧರ್ ಅವರ ಬಿ62 ನಿರ್ಮಾಣ ಸಂಸ್ಥೆಯದ್ದೇ ಆಗಿತ್ತಂತೆ. ಬಿ62 ಜೊತೆಗೆ ರಣ್ವೀರ್ ಸಿಂಗ್ ಅವರದ್ದೂ ಸಿನಿಮಾನಲ್ಲಿ ಪಾಲಿತ್ತು ಎನ್ನಲಾಗಿದೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ 3200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿವೆ. ಸಿನಿಮಾಗಳ ಒಟಿಟಿ ಹಕ್ಕು, ಸ್ಟಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳ ಸುಮಾರು 200 ಕೋಟಿಗೆ ಮಾರಾಟವಾಗಿವೆ. ಒಟ್ಟಾರೆ ಸಿನಿಮಾಕ್ಕೆ ಬಂಡವಾಳ ಹಾಕಿದವರಿಗೆ ಸುಮಾರು 10 ಪಟ್ಟು ಹಣ ಮರಳಿ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *