Headlines

ತೆಲುಗು ಚಿತ್ರರಂಗವನ್ನು ತುಳಿಯಲು ಯತ್ನಿಸುತ್ತಿದೆ ಬಾಲಿವುಡ್​: ಆರೋಪ – Kannada News | Telugu Director accused that Bollywood trying to kill Tollywood

ಒಂದು ಸಮಯವಿತ್ತು, ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ (Bollywood) ಎನ್ನಲಾಗುತ್ತಿತ್ತು, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅದು ಬದಲಾಗಿದೆ. ಭಾರತೀಯ ಚಿತ್ರರಂಗದ ಅತಿ ದೊಡ್ಡ ಉದ್ಯಮ ಎಂಬ ಹೆಸರು ಸಹ ಈಗ ಬಾಲಿವುಡ್​ ಕೈಯಲ್ಲಿಲ್ಲ. ತೆಲುಗು ಚಿತ್ರರಂಗ ಭಾರತದ ಅತ್ಯಂತ ಲಾಭದಾಯಕ ಚಿತ್ರೋದ್ಯಮವಾಗಿ ಬೆಳೆದು ನಿಂತಿದೆ. ರಾಜಮೌಳಿ, ಪ್ರಭಾಸ್, ಅಲ್ಲು ಅರ್ಜುನ್ ಇನ್ನೂ ಕೆಲವು ಸ್ಟಾರ್ ನಟ, ನಿರ್ದೇಶಕರುಗಳು ತೆಲುಗು ಚಿತ್ರರಂಗವನ್ನು ಬಾಲಿವುಡ್​​ಗಿಂತಲೂ ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಆದರೆ ತೆಲುಗು ಚಿತ್ರರಂಗದ ಈ ಜಿಗಿತವನ್ನು ಬಾಲಿವುಡ್​ನ ಕೆಲವರಿಗೆ ಸಹಿಸಲಾಗುತ್ತಿಲ್ಲ, ಅವರು ತೆಲುಗು ಚಿತ್ರರಂಗವನ್ನು ತುಳಿಯುವ ಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ತೆಲುಗು ಸಿನಿಮಾ ನಿರ್ದೇಶಕರೊಬ್ಬರು ಬಹಿರಂಗವಾಗಿ ಇಂಥಹಾ ಆರೋಪ ಒಂದನ್ನು ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆದ ‘ದೀವಾನಾ’ ಹೆಸರಿನ ತೆಲುಗು ಸಿನಿಮಾದ ನಿರ್ದೇಶಕ ಶ್ರೀಕಾಂತ್ ಸಂಗಿಶೆಟ್ಟಿ ಈ ಆರೋಪವನ್ನು ಮಾಡಿದ್ದು, ಮುಂಬೈನಲ್ಲಿ ಕುಳಿತಿರುವ ಕೆಲವು ಬಾಲಿವುಡ್ ಮಂದಿ ತೆಲುಗು ಚಿತ್ರರಂಗವನ್ನು, ತೆಲುಗು ಸಿನಿಮಾಗಳನ್ನು ಕೊಲ್ಲಲು ಯತ್ನಿಸಿದ್ದಾರೆ, ತೆಲುಗು ಚಿತ್ರರಂಗದ ಏಳ್ಗೆಯನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ. ‘ದೀವಾನಾ’ ಸಿನಿಮಾ ‘ಮಾ ಇಂಟಿ ಬಂಗಾರಂ’ ಜೊತೆಗೆ ಕಳೆದ ವಾರ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಬಿಡುಗಡೆ ಒಂದು ದಿನ ತಡವಾಯ್ತು.

ಈ ಬಗ್ಗೆ ಮಾತನಾಡಿದ ನಿರ್ದೇಶಕರು, ‘ಸಿಬಿಎಫ್​​ಸಿ ಅಧಿಕಾರಿಗಳು ವಿನಾಕಾರಣ ನಮ್ಮ ಸಿನಿಮಾವನ್ನು ಗುರಿ ಮಾಡಿಕೊಂಡರು. ನಾವು ಎಲ್ಲ ನಿಯಮಗಳನ್ನು ಪಾಲಿಸಿದರೂ ಸಹ ನಮಗೆ ‘ಎ’ ಸರ್ಟಿಫಿಕೇಟ್ ನೀಡಿದರು. ಬಾಲಿವುಡ್​​ನ ಹಲವು ಸಿನಿಮಾಗಳು ಕೆಟ್ಟ ಭಾಷೆ, ಅಶ್ಲೀಲ ಡೈಲಾಗ್​​, ಅತಿಯಾದ ವೈಲೆನ್ಸ್ ಹೊಂದಿಯೂ ಸಹ ‘ಯು/ಎ’ ಪಡೆಯುತ್ತವೆ ಆದರೆ ತೆಲುಗು ಸಿನಿಮಾಗಳ ಮೇಲೆ ಅನವಶ್ಯಕ ನಿಯಮ, ಶಿಸ್ತು ಹೇರಲಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯತೆಯ ಸಿನಿಮಾಗಳೇ ಭಾರತೀಯ ಚಿತ್ರರಂಗದ ಭವಿಷ್ಯ: ರಾಮ್ ಚರಣ್

‘ದೀವಾನಾ’ ಸಿನಿಮಾನಲ್ಲಿ ಸಿಬಿಎಫ್​​ಸಿಯು ಒಂದು ಹಾಡನ್ನು ಕತ್ತರಿಸಿದೆ, ಜೊತೆಗೆ ಮಗುವೊಂದು ನಟಿಸಿದ್ದ ದೃಶ್ಯವನ್ನು ತೆಗೆದಿದೆ. ಸಿಬಿಎಫ್​​ಸಿ ತೆಗೆದಿರುವ ಹಾಡು, ಇಡೀ ಸಿನಿಮಾದ ಮುಖ್ಯ ಭಾಗವಾಗಿತ್ತು, ಬಹಳ ಕ್ರಿಯಾಶೀಲತೆಯಿಂದ ಹಾಡನ್ನು ನಾವು ಚಿತ್ರೀಕರಿಸಿದ್ದೆವು ಆದರೆ ಸಿಬಿಎಫ್​​ಸಿ ಹಾಡನ್ನು ಕತ್ತರಿಸಿದೆ. ಸಿಬಿಎಫ್​​ಸಿ ಹೇಳಿದ ಎಲ್ಲವನ್ನೂ ಪಾಲಿಸಿದ ಬಳಿಕವೂ ನಮ್ಮ ಸಿನಿಮಾಕ್ಕೆ ಅವರು ‘ಎ’ ಪ್ರಮಾಣ ಪತ್ರ ನೀಡಿದ್ದಾರೆ ಎಂದು ನಿರ್ದೇಶಕರು ಆಕ್ರೋಶ ಹೊರಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *