Headlines

ಪ್ರವಾಸಿಗರಿಗೆ ಸಿಗಲಿದೆ ಡಿಜಿಟಲ್ ಸಾರಥಿ; ರಾಜ್ಯದಲ್ಲಿ ಶೀಘ್ರದಲ್ಲೇ ‘ನಮ್ಮ ಗೈಡ್’ ಆ್ಯಪ್, ವೆಬ್‌ಸೈಟ್‌ ಬಿಡುಗಡೆ! – Kannada News | Namma Guide App: Karnataka Tourism to Launch Online Guide Booking Platform

ಬೆಂಗಳೂರು, ಜೂನ್ 23: ರಾಜ್ಯದ ಪ್ರವಾಸೋದ್ಯಮ (Tourism) ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರ ಸೂಚನೆ ಮೇರೆಗೆ, ಪ್ರವಾಸಿಗರಿಗೆ ಸ್ಥಳೀಯ ಮಾರ್ಗದರ್ಶಕರನ್ನು ಸುಲಭವಾಗಿ ಸಂಪರ್ಕಿಸಲು ನೆರವಾಗುವ ‘ನಮ್ಮ ಗೈಡ್’ (Namma Guide) ಎಂಬ ಅತ್ಯಾಧುನಿಕ ವೆಬ್‌ಸೈಟ್ ಹಾಗೂ ಆ್ಯಪ್ ಅಭಿವೃದ್ಧಿಪಡಿಸಲು ಇಲಾಖೆ ಸಜ್ಜಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ ಪ್ರವಾಸೋದ್ಯಮ ಉತ್ತೇಜನಕ್ಕೆ ‘ನಮ್ಮ ಗೈಡ್’ ಆ್ಯಪ್ ಮತ್ತು ವೆಬ್‌ಸೈಟ್‌ ಸಿದ್ಧವಾಗುತ್ತಿದೆ.
  • ವಿದೇಶಿ ಮಾದರಿಯಲ್ಲಿ ಪ್ರವಾಸಿಗರು ಆನ್‌ಲೈನ್ ಮೂಲಕವೇ ಗೈಡ್‌ಗಳನ್ನು ಬುಕ್ ಮಾಡಬಹುದು.
  • ನೋಂದಾಯಿತ ಸ್ಥಳೀಯ ಗೈಡ್‌ಗಳಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲು ಇಲಾಖೆ ನಿರ್ಧರಿಸಿದೆ.

ವಿದೇಶಿ ಮಾದರಿಯಲ್ಲಿ ಗೈಡ್ ಬುಕ್ಕಿಂಗ್ ವ್ಯವಸ್ಥೆ

ಪ್ರಸ್ತುತ ವಿದೇಶಗಳಲ್ಲಿ ಪ್ರವಾಸಿಗರು ತಮಗೆ ಬೇಕಾದ ಗೈಡ್‌ಗಳನ್ನು ಆನ್‌ಲೈನ್ ಮೂಲಕವೇ ಮುಂಚಿತವಾಗಿ ಕಾಯ್ದಿರಿಸುವ (Booking) ಅತ್ಯಾಧುನಿಕ ವ್ಯವಸ್ಥೆಗಳಿವೆ. ಇದೇ ಮಾದರಿಯನ್ನು ಇದೀಗ ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ದೇಶ-ವಿದೇಶಗಳ ಪ್ರವಾಸಿಗರಿಗೆ ಆಯಾ ಪ್ರದೇಶದ ಇತಿಹಾಸ, ಸಂಸ್ಕೃತಿ ಮತ್ತು ಮಹತ್ವದ ಬಗ್ಗೆ ನಿಖರ ಮಾಹಿತಿ ನೀಡಲು ಈ ವೇದಿಕೆ ಸಹಕಾರಿಯಾಗಲಿದೆ.

ಈ ನೂತನ ಡಿಜಿಟಲ್ ವ್ಯವಸ್ಥೆಯಿಂದಾಗಿ ಪ್ರವಾಸಿಗರು ಸ್ಥಳೀಯ ಗೈಡ್‌ಗಳನ್ನು ನೇರವಾಗಿ ಸಂಪರ್ಕಿಸಿ, ಪ್ರವಾಸಿ ತಾಣಗಳನ್ನು ಹೆಚ್ಚು ಅರ್ಥಪೂರ್ಣವಾಗಿ ವೀಕ್ಷಿಸಬಹುದಾಗಿದೆ. ಜೊತೆಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ನೂರಾರು ಸ್ಥಳೀಯ ಗೈಡ್‌ಗಳಿಗೆ ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಹಾಗೂ ಆರ್ಥಿಕ ಭದ್ರತೆ ಸಿಗಲಿದೆ.

ನವೋದ್ಯಮಗಳಿಗೆ ಮುಕ್ತ ಆಹ್ವಾನ

ಕೇವಲ ಮಾಹಿತಿ ನೀಡುವುದು ಮಾತ್ರವಲ್ಲದೆ, ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವಲ್ಲಿ ಹಾಗೂ ಅವುಗಳ ಸಮರ್ಪಕ ನಿರ್ವಹಣೆಯಲ್ಲಿ ಸ್ಥಳೀಯ ಗೈಡ್‌ಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಈ ಆ್ಯಪ್ ನೆರವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅತ್ಯಂತ ತ್ವರಿತವಾಗಿ ಮತ್ತು ಯಶಸ್ವಿಯಾಗಿ ಸಾಕಾರಗೊಳಿಸಲು ರಾಜ್ಯದಲ್ಲಿರುವ ಪ್ರಮುಖ ನವೋದ್ಯಮಗಳು (Startups) ಹಾಗೂ ತಂತ್ರಜ್ಞಾನ ಸಂಸ್ಥೆಗಳಿಗೆ ತಾಂತ್ರಿಕ ನೆರವು ನೀಡಲು ಪ್ರವಾಸೋದ್ಯಮ ಇಲಾಖೆ ಮುಕ್ತ ಆಹ್ವಾನ ನೀಡಿದೆ. ಈ ಡಿಜಿಟಲ್ ಕ್ರಾಂತಿಯಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *