Headlines

Video: ಅಂದು ದ್ವೇಷಿಸುತ್ತಿದ್ದ ಈ ನಗರ ಇಂದು ನಂಗೆ ತುಂಬಾ ಆಪ್ತ; ಬೆಂಗಳೂರನ್ನು ಮೆಚ್ಚಿಕೊಂಡ ಮಹಿಳೆ – Kannada News | Bengaluru: Woman says she can’t imagine leaving Bengaluru today

ಬೆಂಗಳೂರು, ಜೂನ್ 23: ಶಿಕ್ಷಣ ಉದ್ಯೋಗ ಹೀಗೆ ನಾನಾ ಕಾರಣಕ್ಕೆ ಬೆಂಗಳೂರು (Bengaluru), ಮುಂಬೈ ಹೀಗೆ ದೊಡ್ಡ ದೊಡ್ಡ ನಗರಗಳಿಗೆ ಹೋಗಬೇಕಾಗುತ್ತದೆ. ಹೊಸ ಜನರು, ಹೊಸ ಊರಿಗೆ ಹೊಂದಿಕೊಳ್ಳಲು ಸಮಯ ಬೇಕು. ಎಲ್ಲರಿಗೂ ಅದ್ಭುತವಾಗಿ ಕಾಣುವ ಬೆಂಗಳೂರು ಹೊಸಬರಿಗೆ ಅಪರಿಚಿತವೆನಿಸುತ್ತದೆ. ಹೀಗಾದಾಗ ಮನೆ ಪದೇ ಪದೇ ನೆನಪಾಗುತ್ತದೆ. ಮಹಿಳೆಯೊಬ್ಬರು ಕಾಲಕ್ರಮೇಣ ಈ ನಗರದ ಬಗ್ಗೆ ತಮಗಿದ್ದ ಭಾವನೆಗಳು ಹೇಗೆ ಬದಲಾದವು ಎಂಬ ಬಗ್ಗೆ ವಿಡಿಯೋ ಮಾಡಿದ್ದಾರೆ. ಮೊದಲು ಬೆಂಗಳೂರನ್ನು ದ್ವೇಷಿಸುತ್ತಿದ್ದೆ. ಆದರೆ ಈಗ ಈ ನಗರವನ್ನು ಬಿಟ್ಟು ಬೇರೆಲ್ಲಿಗೂ ಹೋಗುವುದನ್ನು ಊಹಿಸಲು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಬೆಂಗಳೂರಿನ ಬಗ್ಗೆ ಈ ಮಹಿಳೆಯ ಅಭಿಪ್ರಾಯ ಕೇಳಿ ಖುಷಿಯಾಗಿದ್ದಾರೆ.

ರಿಯಾಹ್ (Riyah) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರು ಒಂದು ವೈಬ್ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ನಾನು ಮೊದಲು ಇಲ್ಲಿಗೆ ಬಂದಾಗ ಬೆಂಗಳೂರನ್ನು ದ್ವೇಷಿಸುತ್ತಿದ್ದೆ. ಬೆಂಗಳೂರು ಅಂತರ್ಗತವಾಗಿ ಕೆಟ್ಟದ್ದಾಗಿರುವುದರಿಂದ ಅಲ್ಲ. ನನಗೆ ಇಲ್ಲಿ ಯಾರು ಸ್ನೇಹಿತರು ಇರಲಿಲ್ಲ, ಆತ್ಮೀಯತೆಯ ಭಾವನೆ ಇರಲಿಲ್ಲ. ನನಗೆ ಇಲ್ಲಿ ಏನೂ ಪರಿಚಿತವಾಗಿರಲಿಲ್ಲ. ಆದರೆ ಆ ನಗರವು ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ನಾನು ಬೇರೆ ಯಾವುದೇ ನಗರಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಯೋಚಿಸಿದಾಗ, ಅದು ಸರಿಯಲ್ಲ ಅನಿಸಿತು. ಈಗ ಈ ಊರು ಬಿಟ್ಟು ಹೋಗುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ತಮಾಷೆಯ ಭಾಗವೆಂದರೆ ನನಗೆ ಇನ್ನೂ ಇಲ್ಲಿ ಹೆಚ್ಚಿನ ಸ್ನೇಹಿತರು ಇಲ್ಲ, ಇದ್ದರೆ ಒಬ್ಬರು ಇಬ್ಬರಷ್ಟೇ. ಆದರೆ ನಾನು ಅವರನ್ನು ಭೇಟಿಯಾಗುವುದು ಅಪರೂಪ. ವಾಸ್ತವವಾಗಿ, ಈ ವೀಡಿಯೊವನ್ನು ಒಬ್ಬಂಟಿ ಡೇಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಹೌದು, ನೀವು ವಾಸಿಸುವ ಪ್ರತಿಯೊಂದು ಮನೆ ಮತ್ತು ನಗರ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ವೆಸ್ಟರ್ನ್ ಕಮೋಡ್, ವೈರಲ್ ಆಯ್ತು ದೃಶ್ಯ

ಈ ಪೋಸ್ಟ್ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ನನಗೂ ಹಾಗೆಯೇ ಅನಿಸುತ್ತಿದೆ. ಬೆಂಗಳೂರು ಮೊದಲಿಗೆ ಅಪರಿಚಿತವೆನಿಸಿತು, ಆದರೆ ಹೇಗೋ, ನಗರ ನಿಧಾನವಾಗಿ ನನ್ನ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ. ಇನ್ನೊಬ್ಬರು, ಈ ನಗರವೇ ಮೊದಲು ಅಪರಿಚಿತ, ಆ ಬಳಿಕ ಹುಟ್ಟೂರಿಗಿಂತಲೂ ಆಪ್ತ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬೆಂಗಳೂರಿಗೆ ಬಂದಾಗ ಮೊದ ಮೊದಲು ಹಾಗೆಯೇ ಅನಿಸಿತು, ಆದರೆ ಈಗ ಈ ನಗರಕ್ಕೆ ಹೊಂದಿಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *