ದಾವಣಗೆರೆ, ಜೂನ್ 24: ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಜೂನ್ 23) ಉತ್ತರಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20) ಬಂಧನ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್.ಟಿ.ಶೇಖರ್ ಮಾಹಿತಿ ನೀಡಿದ್ದಾರೆ. 15 ದಿನಗಳ ಹಿಂದೆ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದ ಈತ,ಕಾರ್ಖಾನೆ ಬಳಿಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಅನುಮಾನದ ಮೇರೆಗೆ ಆರೋಪಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಆರೋಪಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದು, ಈತನ ಮೊಬೈಲ್ನಲ್ಲಿ ಮತ್ತಷ್ಟು ವಿಷಯ ಪತ್ತೆಯಾಗಿದೆ. ಈತ ಪಾಕ್ ಸಂಘಟನೆಗಳ ಜೊತೆ ನಂಟು ಹೊಂದಿರುವ ವಿಚಾರ ಬಹಿರಂಗವಾಗಿದ್ದು, ಆರೋಪಿ ವಿರುದ್ಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ಜಾಲತಾಣಗಳ ಮೂಲಕ ಹಲವು ಉಗ್ರ ಸಂಘಟನೆಗಳ ನಂಟಿದ್ದು, ಆ ಪೈಕಿ ವಿದ್ವಂಸಕ ಕೃತ್ಯಗಳ ಹಿನ್ನೆಲೆ ಇರುವ ಸಂಘಟನೆಗಳೂ ಇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.