ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಯು ನಾಳೆಯಿಂದ (ಜೂ. 26) ಶುರುವಾಗಲಿದೆ. ಎರಡು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವವರು ಯಾರು ಎಂಬುದೇ ಈಗ ಕುತೂಹಲ. ಏಕೆಂದರೆ ತಂಡದಲ್ಲಿ ಆರಂಭಿಕರಾಗಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ವೈಭವ್ ಸೂರ್ಯವಂಶಿ ಇದ್ದಾರೆ. (PC: CF)
ಈ ನಾಲ್ವರು ದಾಂಡಿಗರು ಹೊಡಿಬಡಿ ಆಟಕ್ಕೆ ಹೆಸರುವಾಸಿ. ಆದರೆ ಇದರಲ್ಲಿ ಇಶಾನ್ ಕಿಶನ್ಗೆ ಚಾನ್ಸ್ ಸಿಗುವುದು ಅನುಮಾನ ಎನ್ನಬಹುದು. ಏಕೆಂದರೆ ಅವರು ಇತ್ತೀಚೆಗೆ ನಡೆದ ಐಪಿಎಲ್ನಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದರು. ಹೀಗಾಗಿ ಅವರಿಗೆ ಆರಂಭಿಕನ ಸ್ಥಾನ ಸಿಗುವುದು ಡೌಟ್. (PC: X.com)
ಆದರೆ ಮತ್ತೊಂದೆಡೆ 15 ವರ್ಷದ ವೈಭವ್ ಸೂರ್ಯವಂಶಿ ತಾನೆಂತಹ ವಿಸ್ಫೋಟಕ ಬ್ಯಾಟರ್ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಹೀಗಾಗಿಯೇ ಮೊದಲ ಪಂದ್ಯಕ್ಕೆ ಆರಂಭಿಕ ಜೋಡಿಯನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ಟೀಮ್ ಇಂಡಿಯಾ ಮುಂದೆ ಮೂರು ಆಯ್ಕೆಗಳಿದ್ದು, ಈ ಆಯ್ಕೆಗಳ ಮೂಲಕ ಯಾವ ಜೋಡಿಯನ್ನು ಕಣಕ್ಕಿಳಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. (PC: BCCI)
ಅಭಿಷೇಕ್ ಶರ್ಮಾ – ವೈಭವ್ ಸೂರ್ಯವಂಶಿ: ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ 2026 ರ ಸೀಸನ್ನಲ್ಲಿ ಬರೋಬ್ಬರಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡಿದ್ದಾರೆ. ಅತ್ತ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿಗಿ 190ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಇಬ್ಬರೂ ಎಡಗೈ ಬ್ಯಾಟರ್ಗಳೇ ಆದರೂ, ಪವರ್ಪ್ಲೇನಲ್ಲಿ ಎದುರಾಳಿ ಬೌಲರ್ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಈ ಜೋಡಿಗಿದೆ. (PC: Insidesports)
ಸಂಜು ಸ್ಯಾಮ್ಸನ್ – ವೈಭವ್ ಸೂರ್ಯವಂಶಿ: ಒಂದು ವೇಳೆ ಟೀಮ್ ಮ್ಯಾನೇಜ್ಮೆಂಟ್ ಸಾಂಪ್ರದಾಯಿಕ ಎಡಗೈ ಮತ್ತು ಬಲಗೈ ಬ್ಯಾಟಿಂಗ್ ಕಾಂಬಿನೇಷನ್ ಬಯಸಿದರೆ, ಸಂಜು ಸ್ಯಾಮ್ಸನ್ ಮತ್ತು ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಬಹುದು. ಈ ಜೋಡಿಯು ಕಣಕ್ಕಿಳಿದರೆ ಅಭಿಷೇಕ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಆದರೆ ಅಭಿಷೇಕ್ ಮಧ್ಯಮ ಕ್ರಮಾಂಕಕ್ಕಿಂತ ಆರಂಭಿಕರಾಗಿಯೇ ಹೆಚ್ಚು ಅಪಾಯಕಾರಿ ಆಟಗಾರ. (PC: Insidesports)
ಅಭಿಷೇಕ್ ಶರ್ಮಾ – ಸಂಜು ಸ್ಯಾಮ್ಸನ್: ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಪಂದ್ಯದಲ್ಲೇ ಪದಾರ್ಪಣೆ ಮಾಡಲು ಅವಕಾಶ ನೀಡದಿದ್ದರೆ, ಟೀಮ್ ಇಂಡಿಯಾ ತನ್ನ ಇಬ್ಬರು ಸ್ಟಾರ್ ಆರಂಭಿಕರಾದ ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ ಅವರನ್ನೇ ಕಣಕ್ಕಿಳಿಸಲಿದೆ. ಆದರೆ ಸೂರ್ಯವಂಶಿ ಅವರ ಪ್ರಚಂಡ ಫಾರ್ಮ್ ಅನ್ನು ನೋಡುತ್ತಿದ್ದರೆ ಅವರನ್ನು ಬೆಂಚ್ ಮೇಲೆ ಕೂರಿಸುವುದು ಕಷ್ಟಸಾಧ್ಯ. ಹೀಗಾಗಿಯೇ ಐರ್ಲೆಂಡ್ ವಿರುದ್ಧ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬುದೇ ಕುತೂಹಲ. (PC: Insidesports)





