Headlines

ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು! – Kannada News | Bengaluru: Five School Children Fall from Moving Omni Van, Sparking Safety Concerns

ಬೆಂಗಳೂರು, ಜೂನ್ 26: ನಗರದ ಗಾಯತ್ರಿ ಲೇಔಟ್‌ನಲ್ಲಿ ನಿನ್ನೆ (ಜೂ.25) ನಡೆದ ಘಟನೆಯಲ್ಲಿ, ಚಲಿಸುತ್ತಿದ್ದ ಓಮಿನಿ ವಾಹನದಿಂದ ಐವರು ಶಾಲಾ ಮಕ್ಕಳು ರಸ್ತೆಗೆ ಬಿದ್ದಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಅತಿಯಾಗಿ ತುಂಬಿದ್ದ ವಾಹನವು ರಸ್ತೆಯ ಗುಂಡಿಗೆ ಇಳಿದಾಗ ಹಿಂಭಾಗದ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಮಕ್ಕಳು ವಾಹನದಲ್ಲಿ ಒತ್ತೊತ್ತಾಗಿ ಕುಳಿತಿದ್ದು, ಬಾಗಿಲು ತೆರೆದ ಕೂಡಲೇ ಮೂಟೆಗಳಂತೆ ರಸ್ತೆಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಹಿಂಭಾಗದಲ್ಲಿ ಯಾವುದೇ ವಾಹನ ಬರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ. ಮಕ್ಕಳನ್ನು ಕುರಿಮಂದೆಗಳಂತೆ ತುಂಬಿ ಅಜಾಗರೂಕತೆಯಿಂದ ವಾಹನ ಚಲಾಯಿಸುವ ಚಾಲಕರ ನಿರ್ಲಕ್ಷ್ಯ ಈ ಘಟನೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *