ಬೆಂಗಳೂರು/ಮೈಸೂರು, ಜೂನ್ 28: ರಾಜ್ಯ ಗೃಹ ಇಲಾಖೆ ಅಕ್ರಮ ವಲಸಿಗರ ಪಟ್ಟಿ ರೆಡಿ ಮಾಡಿದ್ದು, ಕರ್ನಾಟಕದಲ್ಲಿ ಒಟ್ಟು 13,675 ಅಕ್ರಮ ವಲಸಿಗರು ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಇರೋದು ಗೊತ್ತಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೇ ಅತಿಹೆಚ್ಚು ಅಂದರೆ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಅಕ್ರಮ ವಲಸಿಗರಿದ್ದಾರೆ. ನಂತರದ ಸ್ಥಾನಗಳಲ್ಲಿ ಮೈಸೂರು, ಉತ್ತರ ಕನ್ನಡ, ಉಡುಪಿ ಮತ್ತು ಬೆಳಗಾವಿ ಜಿಲ್ಲೆಗಳಿವೆ ಎಂಬುದು ಬೆಳಕಿಗೆ ಬಂದಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಅಕ್ರಮ ವಲಸಿಗರು?
| ಜಿಲ್ಲೆ | ಸಂಖ್ಯೆ |
| ಬೆಂಗಳೂರು ನಗರ | 10650 |
| ಬೆಳಗಾವಿ | 458 |
| ಬಳ್ಳಾರಿ | 53 |
| ಚಾಮರಾಜನಗರ | 3 |
| ಚಿಕ್ಕಬಳ್ಳಾಪುರ | 38 |
| ಚಿತ್ರದುರ್ಗ | 8 |
| ದಕ್ಷಿಣ ಕನ್ನಡ | 268 |
| ದಾವಣಗೆರೆ | 20 |
| ಹಾಸನ | 5 |
| ಹುಬ್ಬಳ್ಳಿ/ಧಾರವಾಡ | 35 |
| ಕಲಬುರಗಿ | 9 |
| ಕೋಲಾರ | 13 |
| ಕೊಡಗು | 10 |
| ಕೊಪ್ಪಳ | 10 |
| ಮಂಡ್ಯ | 37 |
| ಮೈಸೂರು | 810 |
| ರಾಯಚೂರು | 19 |
| ರಾಮನಗರ | 191 |
ಇದನ್ನೂ ಓದಿ: ಮಾಸ್ತಿ ಗ್ರಾಮದಲ್ಲಿ ಏಕಾಏಕಿ ನೂರಾರು ವಲಸಿಗರು! ಬಾಂಗ್ಲಾದಿಂದ ಬಂದವರೆಂಬ ಶಂಕೆ
ಮೈಸೂರಲ್ಲಿ ರೈಲ್ವೆ ಪೊಲೀಸರು ಅಲರ್ಟ್
ಮೈಸೂರಿಗೆ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆಂಬ ವದಂತಿ ವಿಚಾರ ಹಿನ್ನೆಲೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಅಲರ್ಟ್ ಆಗಿದ್ದಾರೆ. ಪಶ್ಚಿಮ ಬಂಗಾಳದಿಂದ ಆಗಮಿಸಿದ ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ. ಕಳೆದ ಪಶ್ಚಿಮ ಬಂಗಾಳದಿಂದ ಬಂದವರನ್ನು ವಲಸಿಗರು ಎಂದು ಹೇಳಿ ಹಿಂದೂ ಕಾರ್ಯಕರ್ತರು ಆರೋಪಿಸಿದ್ದ ಕಾರಣ ಭಾರಿ ಹೈಡ್ರಾಮಾ ನಡೆದಿತ್ತು. ಆದರೆ ದಾಖಲೆ ಪರಿಶೀಲನೆ ವೇಳೆ ಯಾವುದೇ ಬಾಂಗ್ಲಾ ವಲಸಿಗರು ಪತ್ತೆಯಾಗಿರಲಿಲ್ಲ. ಹೀಗಾಗಿ ವದಂತಿ ತಪ್ಪಿಸಲು ಈ ಬಾರಿ ಪರಿಶೀಲನೆಗೆ ಸ್ವತಃ ರೈಲ್ವೆ ಪೊಲೀಸರೇ ಮುಂದಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.