Headlines

ಲಾರ್ಡ್ ಮುರುಗನ್ ಕಥೆಯಲ್ಲಿ ಜೂನಿಯರ್ ಎನ್‌ಟಿಆರ್; ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ – Kannada News | Jr. NTR and Trivikram Team Up for Mythological Film; Anirudh Scores Music

ತೆಲುಗು ನಟ ನಟ ಜೂನಿಯರ್ ಎನ್‌ಟಿಆರ್ (JR NTR) ಸದ್ಯ ‘ಡ್ರ್ಯಾಗನ್’ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಈ ಸಿನಿಮಾ ಕೆಲಸಗಳು ನಡೆಯುವಾಗಲೇ ಜೂನಿಯರ್ ಎನ್​​ಟಿಆರ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದು ಭಾರಿ ಬಜೆಟ್‌ನ ಪೌರಾಣಿಕ ಸಿನಿಮಾ ಮೂಡಿಬರಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಅವರ ‘ಎನ್‌ಟಿಆರ್ ಆರ್ಟ್ಸ್’ ಮತ್ತು ‘ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.’ಅರವಿಂದ ಸಮೇದ ವೀರ ರಾಘವ’ ಚಿತ್ರದ ನಂತರ ಜೂನಿಯರ್ ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಜೊತೆಯಾಗಿ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಮುರುಗನ್ ಕಥೆ ಆಧಾರಿತ ಚಿತ್ರ?

ಜೂನಿಯರ್ ಎನ್‌ಟಿಆರ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಶಿವನ ಮಗ, ಪಾರ್ವತಿಯ ಹೆಮ್ಮೆ, ಶಾಶ್ವತ ಕಮಾಂಡರ್. ಮತ್ತೊಮ್ಮೆ ತ್ರಿವಿಕ್ರಮ್ ಜೊತೆ’ ಎಂದು ಅವರು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಯುದ್ಧಭೂಮಿ ಮತ್ತು ದೊಡ್ಡ ತ್ರಿಶೂಲದ ಚಿತ್ರವಿದೆ.

ಜೂ. ಎನ್​​ಟಿಆರ್​ ಟ್ವೀಟ್

ಈ ಪೋಸ್ಟರ್ ಮತ್ತು ಕ್ಯಾಪ್ಷನ್ ನೋಡಿದರೆ ಇದು ಲಾರ್ಡ್ ಮುರುಗನ್ (ಕಾರ್ತಿಕೇಯ) ಅವರ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಚಿತ್ರತಂಡ ಇನ್ನು ಕಥೆಯ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ‘ಉತ್ತರದಲ್ಲಿ ಜನನ. ದಕ್ಷಿಣದಲ್ಲಿ ಆರಾಧನೆ. ಈಗ, ಇಡೀ ಬ್ರಹ್ಮಾಂಡಕ್ಕೆ ಸೇರಬೇಕಾದ ಕಥೆ’ ಎಂದು ಚಿತ್ರತಂಡ ಪೋಸ್ಟ್ ಮಾಡಿದೆ.

ಇದನ್ನೂ ಓದಿ:  ಜೂ. ಎನ್‌ಟಿಆರ್ ಕೈತಪ್ಪಿದ ದೊಡ್ಡ ಚಿತ್ರ? ತಮಿಳು ನಟ ಸೂರ್ಯನ ಎಂಟ್ರಿ

ಎನ್‌ಟಿಆರ್ ಅವರ ‘ಡ್ರಾಗನ್’ ಸಿನಿಮಾ

ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಸಿನಿಮಾ ‘ಡ್ರಾಗನ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಆಕ್ಷನ್ ಸಿನಿಮಾದಲ್ಲಿ ಎನ್‌ಟಿಆರ್ ಜೊತೆ ಬಿಜು ಮೆನನ್, ರುಕ್ಮಿಣಿ ವಸಂತ್, ಖುಷ್ಬು ಸುಂದರ್ ಮತ್ತು ಗುರು ಸೋಮಸುಂದರಂ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ 2027ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಇದು ಎರಡು ಭಾಗದಲ್ಲಿ ಬರೋ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:57 am, Tue, 30 June 26

Source link

Leave a Reply

Your email address will not be published. Required fields are marked *