Headlines

ಭಾರತ, ಇಂಗ್ಲೆಂಡ್​​ಗೆ ಸೋಲುಣಿಸಿ 21ನೇ ಶತಮಾನದಲ್ಲಿ ಇತಿಹಾಸ ಬರೆದ ಲ್ಯಾಥಮ್! – Kannada News | History Maker: Latham Conquers India and England

ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಸಾಧ್ಯವೇ? ಇಂಗ್ಲೆಂಡ್​ ತಂಡವನ್ನು ಆಂಗ್ಲರ ಮಣ್ಣಿಸಲು ಸಾಧ್ಯವೇ? ಈ ಎರಡು ಪ್ರಶ್ನೆಗಳಿಗೆ ಸಾಧ್ಯ ಎಂಬ ಸಾಧನೆಯ ಉತ್ತರ ನೀಡಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್. ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 160 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಐತಿಹಾಸಿಕ ಸರಣಿ ಗೆದ್ದುಕೊಂಡಿದೆ.

  • ಈ ಗೆಲುವಿನೊಂದಿಗೆ ಟಾಮ್ ಲ್ಯಾಥಮ್, 21ನೇ ಶತಮಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ದೇಶಗಳಲ್ಲೂ ಟೆಸ್ಟ್ ಸರಣಿ ಗೆದ್ದ ಮೊದಲ ವಿದೇಶಿ ನಾಯಕ ಎಂಬ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.

ಹೊಸ ಇತಿಹಾಸ:

ವಿಶ್ವ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಸ್ಪಿನ್ ಪಿಚ್‌ಗಳನ್ನು ಎದುರಿಸುವುದು ಮತ್ತು ಇಂಗ್ಲೆಂಡ್‌ನಲ್ಲಿ ಸ್ವಿಂಗ್ ಆಗುವ ಪಿಚ್‌ಗಳನ್ನು ಜಯಿಸುವುದು ಅತ್ಯಂತ ಕಠಿಣ ಸವಾಲು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡೂ ಸವಾಲುಗಳನ್ನು ಕಿವೀಸ್ ಪಡೆ ಅದ್ಭುತವಾಗಿ ಮೆಟ್ಟಿ ನಿಂತಿದ್ದಾರೆ. ಅದು ಸಹ ನೂತನ ನಾಯಕ ಟಾಮ್ ಲ್ಯಾಥಮ್ ಸಾರಥ್ಯದಲ್ಲಿ ಎಂಬುದು ವಿಶೇಷ.

  • ಭಾರತಕ್ಕೆ ಬಿಗ್ ಶಾಕ್ (2024): ಭಾರತದ ನೆಲದಲ್ಲಿ ಸತತ 12 ವರ್ಷಗಳ ಕಾಲ ಸೋಲನ್ನೇ ಕಾಣದಿದ್ದ ಬಲಿಷ್ಠ ಟೀಮ್ ಇಂಡಿಯಾವನ್ನು 3-0 ಇಂದ ವೈಟ್‌ವಾಶ್ ಮಾಡಿ ಟಾಮ್ ಲ್ಯಾಥಮ್ ಪಡೆ ಇತಿಹಾಸ ನಿರ್ಮಿಸಿದ್ದರು.
  • ಆಂಗ್ಲರಿಗೆ ಆಘಾತ (2026): ಮೊದಲ ಟೆಸ್ಟ್‌ನಲ್ಲಿ ಸೋತ ಹೊರತಾಗಿಯೂ ಧೃತಿಗೆಡದ ಲ್ಯಾಥಮ್ ಪಡೆ, ನಂತರದ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ತಂಡವನ್ನು ಅವರದ್ದೇ ತವರಿನಲ್ಲಿ 2-1 ಅಂತರದಿಂದ ಮಣಿಸಿ ಹೊಸ ಇತಿಹಾಸ ಬರೆದಿದ್ದಾರೆ.

ದಿಗ್ಗಜರ ಸಾಲಿಗೆ ಸೇರಿದ ಲ್ಯಾಥಮ್:

ಭಾರತ ಮತ್ತು ಇಂಗ್ಲೆಂಡ್ ಎರಡೂ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಎಷ್ಟು ಅಪರೂಪ ಎಂದರೆ, ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿರುವುದು ಬೆರಳೆಣಿಕೆಯಷ್ಟೇ ನಾಯಕರುಗಳು ಮಾತ್ರ. ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಗಣ್ಯ ನಾಯಕರ ಪಟ್ಟಿ ಈ ಕೆಳಗಿನಂತಿದೆ…

ನಾಯಕ  ದೇಶ 
ಟಾಮ್ ಲ್ಯಾಥಮ್ ನ್ಯೂಝಿಲೆಂಡ್
ಕ್ಲೈವ್ ಲಾಯ್ಡ್ ವೆಸ್ಟ್ ಇಂಡೀಸ್
ಸರ್ ಗಾರ್ಫೀಲ್ಡ್ ಸೋಬರ್ಸ್ ವೆಸ್ಟ್ ಇಂಡೀಸ್
ಬಿಲ್ ಲಾರಿ ಆಸ್ಟ್ರೇಲಿಯಾ
ಲಿಂಡ್ಸೆ ಹ್ಯಾಸೆಟ್ ಆಸ್ಟ್ರೇಲಿಯಾ

ಇದನ್ನೂ ಓದಿ: ರಣರೋಚಕ ಪಂದ್ಯ… ಅಂತಿಮ ನಿಮಿಷದಲ್ಲಿ ಗೆದ್ದ ಬ್ರೆಝಿಲ್

ಈ ಗೆಲುವಿನೊಂದಿಗೆ ಟಾಮ್ ಲ್ಯಾಥಮ್ ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೆ, ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ರಣತಂತ್ರ ರೂಪಿಸುವ ಚತುರ ಕಪ್ತಾನನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿ ಕಾಡದಂತೆ ನ್ಯೂಝಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *