ಆಮಿರ್ ಖಾನ್ ಮದುವೆಯಾಗಲು ರೆಡಿ, ಮತಾಂತರಗೊಳ್ಳಲು ಸಿದ್ಧ; ರಾಖಿ ಸಾವಂತ್ – Kannada News | Rakhi Sawant Offers to Marry Aamir Khan, Ready to Convert; Netizens Troll Her

ನಟಿ ರಾಖಿ ಸಾವಂತ್ ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಯಾವುದೇ ವಿಷಯದ ಬಗ್ಗೆ ಅವರು ಏನು ಹೇಳುತ್ತಾರೆಂದು ಹೇಳುವುದು ಅಸಾಧ್ಯ. ಅವರ ಫ್ಯಾಷನ್ ಸೆನ್ಸ್, ಅವರ ಬಟ್ಟೆಗಳು ಸಹ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಇಲ್ಲಿಯವರೆಗೆ, ಅವರು ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳಿದ್ದಾರೆ. ಈ ಮಧ್ಯೆ, ರಾಖಿ ಸಾವಂತ್ ಹಿರಿಯ ನಟ ಆಮಿರ್ ಖಾನ್ ಮತ್ತು ಅವರ ಮದುವೆಯ ಬಗ್ಗೆ ಮಾತನಾಡಿದ್ದಾರೆ. ರಾಖಿ (Rakhi Sawant) ನೀಡಿದ ಈ ಹೇಳಿಕೆಯಿಂದ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ರಾಖಿ ಸಾವಂತ್ ಅವರ ವಿಡಿಯೋವನ್ನು ಫಿಲ್ಮಿ ಗಾನ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ರಾಖಿ ಸ್ಕರ್ಟ್ ಮತ್ತು ಟಾಪ್ ಧರಿಸಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಕೂದಲಿಗೆ ಬಣ್ಣ ಬಳಿದಿದ್ದಾರೆ. ಕಣ್ಣುಗಳ ಮೇಲೆ ಕಪ್ಪು ಕನ್ನಡಕ ಧರಿಸಿ, ಫೋಟೋಗಾಗಿ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ.

ಅದೇ ಸಮಯದಲ್ಲಿ, ಅವರು ಆಮಿರ್ ಖಾನ್ ಅವರ ಮದುವೆಗೆ ಪ್ರತಿಕ್ರಿಯಿಸಿದ್ದಾರೆ. ‘ಆಮಿರ್ ಮೂರನೇ ಬಾರಿಗೆ ಮದುವೆಯಾಗಲಿದ್ದಾರೆ. ಅವರು ಮತ್ತೆ ಮದುವೆಯಾಗಲು ಬಯಸಿದರೆ, ನಾನು ಅದಕ್ಕೆ ಸಿದ್ಧ. ನಾನು ಇಸ್ಲಾಂ ಅನ್ನು ಸಹ ಸ್ವೀಕರಿಸುತ್ತೇನೆ’ ಎಂದು ರಾಖಿ ಈ ವಿಡಿಯೋದಲ್ಲಿ ಹೇಳುತ್ತಿರುವುದು ಕಂಡುಬರುತ್ತದೆ.

ಈ ವಿಡಿಯೋ ನೋಡಿದ ನಂತರ ಕೆಲವು ನೆಟ್ಟಿಗರು ರಾಖಿಯನ್ನು ಟ್ರೋಲ್ ಮಾಡಿದ್ದಾರೆ. ಕೆಲವರು ರಾಖಿ ಸಾವಂತ್ ಅವರ ಹಿಂದಿನ ಮದುವೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ’ರಾಖಿ, ನೀವು ಎರಡು ಬಾರಿ ಮದುವೆಯಾಗಿದ್ದೀರಿ. ಇದಲ್ಲದೆ, ನೀವು ವಿಚ್ಛೇದನ ಕೂಡ ಪಡೆದಿದ್ದೀರಿ’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ಇನ್ಮುಂದೆ ಪ್ಯಾಂಟಿ ಹಾಕಲ್ಲ’; ಜ್ಯೋತಿಷಿ ಹೇಳಿದಂತೆ ನಡೆದುಕೊಂಡ ರಾಖಿ ಸಾವಂತ್

ನಟಿ ಆಕಾಂಕ್ಷಾ ಚಮೋಲಾ ಅವರ ವಿಚ್ಛೇದನದ ಬಗ್ಗೆ ರಾಖಿ ಸಾವಂತ್ ಸಾಮಾಜಿಕ ಮಾಧ್ಯಮದಲ್ಲಿ ಕಟುವಾದ ಕಾಮೆಂಟ್ ಮಾಡಿದ್ದಾರೆ. ಅದು ಸುಳ್ಳು ಎಂದು ಕರೆದಿದ್ದಾರೆ. ಆಕಾಂಕ್ಷಾ ರಿಯಾಲಿಟಿ ಶೋ ಲಾಕ್ ಅಪ್‌ನ ಎರಡನೇ ಸೀಸನ್‌ನಲ್ಲಿ ಭಾಗವಹಿಸಿದ್ದಾರೆ. ಈ ಸೀಸನ್‌ನ ಒಂದು ಎಪಿಸೋಡ್​​ನಲ್ಲಿ, ಅವರು ಶೀಘ್ರದಲ್ಲೇ ತಮ್ಮ ಪತಿ ಗೌರವ್ ಖನ್ನಾ ಅವರಿಗೆ ವಿಚ್ಛೇದನ ನೀಡುವುದಾಗಿ ಹೇಳಿದ್ದಾರೆ. ಅವರ ಈ ಕ್ಲಿಪ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *